ಕೆಲಸ ಅರಸಿ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿ ನಾಪತ್ತೆ

Date:

ಸಲೂನ್‌ನಲ್ಲಿ ಕೆಲಸ ಮಾಡಲು ನವದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ 31 ವರ್ಷದ ವ್ಯಕ್ತಿಯೊಬ್ಬರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ನಾಪತ್ತೆಯಾಗಿದ್ದು, ಈ ಬಗ್ಗೆ ಕೆಐಎ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಯೋಗೀಶ್‌ಕುಮಾರ್ ರೋಜಾನಾ ನಾಪತ್ತೆಯಾದ ವ್ಯಕ್ತಿ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಉತ್ತರ ಪ್ರದೇಶ ಮೂಲದ ಅನೀಸ್ ಅವರು ಭಾನುವಾರ ಕಾಣೆಯಾದ ವ್ಯಕ್ತಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿದ್ದಾರೆ.

ಬೆಂಗಳೂರಿನ ಕಮ್ಮನಹಳ್ಳಿಯಲ್ಲಿರುವ ತಮ್ಮ ಸ್ನೇಹಿತ ಅನೀಸ್ ಕೆಲಸ ಮಾಡುತ್ತಿದ್ದ ಸಲೂನ್‌ನಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿಕೊಳ್ಳಲು ಸೆ.15 ರಂದು ಇಂಡಿಗೋ ವಿಮಾನದ ಮೂಲಕ ಟರ್ಮಿನಲ್ 1 ಕ್ಕೆ ಬಂದಿದ್ದರು.

ನಾಪತ್ತೆಯಾಗಿರುವ ರೋಜಾನಾ ದೆಹಲಿ ಮೂಲದವರಾಗಿದ್ದು, ಇವರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಇವರು ದೆಹಲಿಯಲ್ಲಿ ತಮ್ಮದೇ ಆದ ಸ್ವಂತ ಸಲೂನ್ ನಡೆಸುತ್ತಿದ್ದರು. ಆದರೆ, ಅವರಿಗೆ ಬರುತ್ತಿದ್ದ ಆದಾಯ ಸಾಕಾಗುತ್ತಿರಲಿಲ್ಲ. ಕಳೆದ ಮೂರು ವರ್ಷಗಳಿಂದ ನನಗೆ ಅವರ ಪರಿಚಯವಿದೆ. ನನಗೆ ಅವರ ಕೌಶಲ್ಯ ತಿಳಿದಿದ್ದರಿಂದ ಅದನ್ನು ಬಳಸಿಕೊಂಡು ಬೆಂಗಳೂರಿನಲ್ಲಿ ಇನ್ನೂ ಹೆಚ್ಚಿನ ಹಣ ಗಳಿಸಬಹುದು ಎಂದು ತಿಳಿಸಿದ್ದೆ, ಅದರಂತೆ ನಾನು ಅವರನ್ನು ನಮ್ಮ ಸಲೂನ್‌ನಲ್ಲಿ ನೇಮಿಸಿಕೊಳ್ಳಲು ನನ್ನ ಸಲೂನ್ ಮಾಲೀಕರ ಬಳಿ ಒಪ್ಪಿಗೆ ಪಡೆದುಕೊಂಡಿದ್ದೆ. ಹಾಗಾಗಿ, ಅವರು ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದರು. ನಾನು ಅವರನ್ನು ಕರೆತರಲು ವಿಮಾನ ನಿಲ್ದಾಣಕ್ಕೆ ಹೋಗಿದ್ದೆ ಎಂದು ನಾಪತ್ತೆಯಾದ ವ್ಯಕ್ತಿಯ ಸ್ನೇಹಿತ ಅನೀಸ್ ಹೇಳಿದರು.

ರೋಜಾನಾ ಅವರು ಈಗಾಗಲೇ ಮೂರು ವರ್ಷಗಳ ಕಾಲ ಬೆಂಗಳೂರಿನಲ್ಲಿ ಕೇಶ ವಿನ್ಯಾಸಕರಾಗಿ ಕೆಲಸ ಮಾಡಿದ್ದರು, ಅವರು ತಮ್ಮದೇ ಆದ ಸಲೂನ್ ಪ್ರಾರಂಭಿಸಲು ದೆಹಲಿಗೆ ತೆರಳಿ, ತಮ್ಮ ಸ್ವಗ್ರಾಮಕ್ಕೆ ಮರಳಿದರು ಎಂದು ಅವರು ಹೇಳಿದರು.

“ರೋಜಾನಾ ಅವರು ಮಾನಸಿಕವಾಗಿ ನೊಂದಿದ್ದರು. ನಾನು ಅವರನ್ನು ಶುಕ್ರವಾರ ವಿಮಾನ ನಿಲ್ದಾಣದಲ್ಲಿ ಭೇಟಿಯಾದ ನಂತರ ಅವರು ಕೆಲಸಕ್ಕೆ ಸೇರುವುದಿಲ್ಲ ಎಂದು ಹೇಳಿದರು. ಬಳಿಕ ಅವರ ಹೆಂಡತಿಯೊಂದಿಗೆ ಮಾತನಾಡಿದನು. ಅವರು ಕೂಡ ದೆಹಲಿಗೆ ಹಿಂದಿರುಗಲು ಟಿಕೆಟ್ ಕಾಯ್ದಿರಿಸಲು ನಿರ್ಧರಿಸಿದರು. ತಕ್ಷಣಕ್ಕೆ ಯಾವುದೇ ಟಿಕೆಟ್‌ಗಳು ಲಭ್ಯವಾಗದ ಕಾರಣ, ಮರುದಿನ ಬೆಳಗ್ಗೆ (ಸೆಪ್ಟೆಂಬರ್ 16) ಅವರು ಆಕಾಶ ಏರ್‌ನಲ್ಲಿ ಟಿಕೆಟ್‌ ಬುಕ್ ಮಾಡಿದರು. ನಾನು ಅವರನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟು ಮನೆಗೆ ಹೋದೆ. ರಾತ್ರಿ ವಿಮಾನ ನಿಲ್ದಾಣದಲ್ಲಿ ಕಾದು ಬೆಳಗಿನ ಫ್ಲೈಟ್ ಹತ್ತುವುದಾಗಿ ಹೇಳಿದ್ದರು.

ಈ ಸುದ್ದಿ ಓದಿದ್ದೀರಾ? ವೈರಸ್‌ ತಗುಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಏಳು ಚಿರತೆ ಮರಿಗಳ ಸಾವು

ಆದರೆ, ಅವರು ವಿಮಾನ ಹತ್ತಿಲ್ಲ. ರೋಜಾನಾ ಅವರ ಪತ್ನಿ ಅನೀಸ್ ರಿಗೆ ಕರೆ ಮಾಡಿ, ಅವರನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ಕೇಳಿದರು. ನಾನು ರೋಜಾನಾ ಅವರ ದೂರವಾಣಿ ಸಂಖ್ಯೆಗೆ ಪದೇಪದೆ ಕರೆ ಮಾಡಿದೆ, ಫೋನ್ ಸ್ವಿಚ್ ಆಫ್ ಎಂದು ಬರುತ್ತಿತ್ತು. ಸಹಾಯಕ್ಕಾಗಿ ವಿಮಾನ ನಿಲ್ದಾಣ ಪೊಲೀಸರನ್ನು ಸಂಪರ್ಕಿಸಿದೆ. ಸೆ. 17 ಸಂಜೆ ‘ಮ್ಯಾನ್ ಮಿಸ್ಸಿಂಗ್’ ವಿಭಾಗದ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ. ಬಳಿಕ, ಪೊಲೀಸರನ್ನು ಸಂಪರ್ಕಿಸಿದೆ, ಅದರ ನಂತರ ಅವರು ವಿಮಾನ ನಿಲ್ದಾಣದಿಂದ 20 ಕಿಮೀ ದೂರದ ಸ್ಥಳದಲ್ಲಿ ಅವರ ಫೋನ್ ಸಂಪರ್ಕ ಕಡಿತಗೊಂಡಿದೆ ಎಂದು ಹೇಳಿದರು. ಆತ ವಿಮಾನ ನಿಲ್ದಾಣದಿಂದ ಹೊರನಡೆದು ಬೆಂಗಳೂರಿನಲ್ಲೇ ಎಲ್ಲೋ ಇದ್ದಾನೆ ಎಂಬ ಶಂಕೆ ಇದೆ. ಆತನ ಪತ್ತೆಗೆ ತನಿಖೆ ನಡೆಯುತ್ತಿದೆ ಎಂದು ಅನೀಸ್ ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ ಬಂದ್ | ನಾಳೆ ಎಂದಿನಂತೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಸಂಚಾರ

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಸಂಘ-ಸಂಸ್ಥೆಗಳು ಸೇರಿದಂತೆ ನೂರಾರು...

ಬೆಂಗಳೂರು | ಸಾಲು ಸಾಲು ರಜೆ; ಮೂರು ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್‌ನಲ್ಲಿ ಸಿಲುಕಿದ ಜನ

ರಾಜ್ಯ ರಾಜಧಾನಿ ಬೆಂಗಳೂರಿಗೆ ಹಲವಾರು ಜನ ಕೆಲಸ ಅರಸಿ ಬಂದು ನಗರದಲ್ಲಿರುವ...

ಬೆಂಗಳೂರು | ಪ್ರತಿಭಟನೆ ಹೆಸರಿನಲ್ಲಿ ಹೋಟೆಲ್‌ಗೆ ನುಗ್ಗಿ ದಾಂಧಲೆ; ಬಿಜೆಪಿ ಕಾರ್ಯಕರ್ತರ ಬಂಧನ

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಸೆ.26 ರಂದು ಹಲವಾರು...

ಬೆಂಗಳೂರು | ಹಳೆ ದ್ವೇಷಕ್ಕೆ ಸಂಗಡಿಗನ ಹತ್ಯೆ; ನಾಲ್ವರ ಬಂಧನ

ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡಾಗ ತಮ್ಮ ಹೆಸರು ಬಾಯಿಬಿಟ್ಟ ಎಂಬ ದ್ವೇಷದಿಂದ...