ವೈಟ್‌ಬೋರ್ಡ್ ಟ್ಯಾಕ್ಸಿ ಹಾಗೂ ರ‌್ಯಾಪಿಡೋ ವಿರುದ್ಧ ಸೋಮವಾರ ಆಟೋ ಚಾಲಕರು ಮುಷ್ಕರ ನಡೆಸಿದ್ದಾರೆ. ಈ ವೇಳೆ, ಕೆಲವು ಆಟೋ ಚಾಲಕರು ಮುಷ್ಕರದ ಹೊರತಾಗಿಯೂ ಆಟೋ ಓಡಿಸಿದ್ದಾರೆ. ಅಂತಹ ಚಾಲಕರು ಮತ್ತು ಆಟೋಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದು, ಓರ್ವ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾಗಿ ಗಾಯಗೊಂಡ ಚಾಲಕನ ವಿಡಿಯೋ ಈ ದಿನ.ಕಾಮ್‌ಗೆ ಲಭ್ಯವಾಗಿದೆ.