ಬೆಂಗಳೂರು | ವಿವಾಹೇತರ ಸಂಬಂಧ ಶಂಕಿಸಿ ಪತ್ನಿ ಕೊಲೆಗೈದ ಪತಿ

Date:

  • ಎರಡುವರೆ ವರ್ಷದ ಮಗುವಿಗೂ ಗಾಯಗೊಳಿಸಿದ ಆರೋಪಿ
  • ತಬ್ಸಿಮ್ ಬೇಬಿಯನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ

ಬೆಂಗಳೂರಿನ ಹೆಣ್ಣೂರು ಕ್ರಾಸ್ ಬಳಿ ವಿವಾಹೇತರ ಸಂಬಂಧ ಶಂಕಿಸಿ ಪತ್ನಿಯನ್ನು ಪತಿ ಕೊಲೆ ಮಾಡಿರುವ ಘಟನೆ ನಡೆದಿದೆ.

ತಬ್ಸಿಮ್ ಬೇಬಿ ಕೊಲೆಯಾದ ದುರ್ದೈವಿ. ತಬ್ಸಿಮ್ ಬೇಬಿ 14 ವರ್ಷಗಳ ಹಿಂದೆ ಶೇಕ್ ಸೊಹೇಲ್ ಎಂಬುವವನೊಂದಿಗೆ ಮದುವೆಯಾಗಿದ್ದರು. ಶೇಕ್ ಸೊಹೇಲ್ ಪತ್ನಿಗೆ ವಿವಾಹೇತರ ಸಂಬಂಧ ಇದೆ ಎಂಬ ವಿಚಾರ ತಿಳಿದು ಆಕೆಯನ್ನು ಕೊಲ್ಕತ್ತಾಗೆ ಆರು ವರ್ಷಗಳ ಹಿಂದೆ ಕರೆದುಕೊಂಡು ಹೋಗಿದ್ದನು. ಆದರೆ, ತಬ್ಸಿಮ್ ಬೇಬಿ ಪತಿ ಶೇಕ್ ಸೊಹೇಲ್ ನನ್ನು ಬಿಟ್ಟು ಪ್ರಿಯಕರನ ಜತೆ ಇರಲು ಬೆಂಗಳೂರಿಗೆ ಬಂದಿದ್ದಳು. ಆರು ವರ್ಷಗಳ ಬಳಿಕ ಬೆಂಗಳೂರಿಗೆ ಬಂದಿದ್ದ ಪತಿ ಶೇಕ್ ಸೊಹೇಲ್ ಪತ್ನಿಯೊಂದಿಗೆ ಮಾತನಾಡಬೇಕು ಎಂದು ಭೇಟಿಯಾಗಿದ್ದನು. ಈ ವೇಳೆ ಮಾತಿಗೆ ಮಾತು ಬೆಳೆದು ಸೊಹೇಲ್ ತಬ್ಸಿಮ್ ಬೇಬಿಯನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಇದೇ ಸಮಯದಲ್ಲಿ ತಬ್ಸಿಮ್ ಬೇಬಿ ಹಾಗೂ ಪ್ರಿಯಕರ ನಯೀಮ್ ಗೆ ಸೇರಿದ ಎರಡೂವರೆ ವರ್ಷದ ಮಗುವಿಗೂ ಗಾಯಗೊಳಿಸಿದ್ದಾನೆ. ಸದ್ಯ ಆರೋಪಿ ಸೊಹೇಲ್ ನನ್ನು ಹೆಣ್ಣೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಪ್ರದೇಶ | ಮಥುರಾದಲ್ಲಿ ರೈಲು ಹಳಿಬಿಟ್ಟು ಪ್ಲಾಟ್​ಫಾರ್ಮ್​ ಏರಿದ್ದ ಘಟನೆಗೆ ಸಾಕ್ಷ್ಯ ಒದಗಿಸಿದ ಸಿಸಿಟಿವಿ!

ವಿಡಿಯೋ ಕಾಲ್‌ನಲ್ಲಿದ್ದ ರೈಲು ನಿರ್ವಾಹಕ; ಸಿಸಿಟಿವಿಯಲ್ಲಿ ದಾಖಲಾಗಿರುವ ವಿಡಿಯೋ ವೈರಲ್ ತನ್ನ ಬ್ಯಾಗ್...

ಬರೋಬ್ಬರಿ 100 ಬಾರಿ ಸಂಚಾರ ನಿಯಮ ಉಲ್ಲಂಘನೆ : ಡಾನ್ಸ್ ಕೊರಿಯೋಗ್ರಾಫರ್ ಬೈಕ್ ಪೊಲೀಸರ ವಶಕ್ಕೆ

ನೃತ್ಯ ಸಂಯೋಜಕರೊಬ್ಬರು (ಡಾನ್ಸ್ ಕೊರಿಯೋಗ್ರಾಫರ್) ಬರೋಬ್ಬರಿ 99 ಬಾರಿ ಸಂಚಾರ ನಿಯಮಗಳನ್ನು...

ಕರ್ನಾಟಕ ಬಂದ್‌ | ಸೆ.28ರ ಮಧ್ಯರಾತ್ರಿಯಿಂದಲೇ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ, ಸೆ.29 ರಂದು ‘ಕರ್ನಾಟಕ...

ಕಾವೇರಿ | ಸಂಸದರ ಭಾವಚಿತ್ರಗಳಿಗೆ ಹಾರ ಹಾಕಿ, ಧಿಕ್ಕಾರ ಕೂಗಿದ ಕರವೇ ಮಹಿಳಾ ಹೋರಾಟಗಾರರು

"ರಾಜ್ಯದ ಜನತೆಯಿಂದ ಆಯ್ಕೆಯಾಗಿ ದೆಹಲಿಗೆ ಹೋದ 28 ಸಂಸದರು ತಾವು ಕರ್ನಾಟಕದ...