ಬೆಂಗಳೂರು | ಮೇ 26ರಿಂದ ಸಸ್ಯಕಾಶಿಯಲ್ಲಿ ಮಾವು, ಹಲಸು ಮೇಳ

Date:

  • ಮೇಳಕ್ಕೆ ಚಾಲನೆ ನೀಡಿದ ಸಚಿವ ರಾಮಲಿಂಗಾರೆಡ್ಡಿ
  • ಮೇಳದಲ್ಲಿ ಹಣ್ಣುಗಳ ಮೇಲೆ 10% ರಿಯಾಯಿತಿ ದರ ನಿಗದಿ

ರಾಜಧಾನಿ ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಮಾವು ಮತ್ತು ಹಲಸಿನ ಮೇಳ ಆರಂಭವಾಗಿದ್ದು, ಮೇ 26ರಿಂದ ಜೂನ್‌ 5ರವರೆಗೆ ನಡೆಯಲಿದೆ. ರೈತರಿಂದ ನೇರವಾಗಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಮಾವು ಮತ್ತು ಹಲಸು ದೊರೆಯಲಿದೆ.

ರೈತರಿಂದ ನೇರವಾಗಿ ಗ್ರಾಹಕರ ಕೈಗೆ ತಲುಪಿಸಲು ಮಾವು ಹಲಸಿನ ಮೇಳಕ್ಕೆ ಮೇ 26ರಂದು ಸಚಿವ ರಾಮಲಿಂಗಾರೆಡ್ಡಿ, ಶಾಸಕ ಉದಯ್ ಗರುಡಾಚಾರ್​ ಉದ್ಘಾಟಿಸಿದರು.

ರಾಜ್ಯದ ನಾನಾ ಜಿಲ್ಲೆಗಳಿಂದ ರೈತರು ಲಾಲ್‌ಬಾಗ್‌ಗೆ ಆಗಿಮಿಸಲಿದ್ದು, ನಾನಾ ತಳಿಯ ಮಾವು ಹಾಗೂ ಹಲಸು ದೊರೆಯಲಿದೆ. ತೋಟಗಾರಿಕೆ ಇಲಾಖೆ ಈ ಮೇಳದಲ್ಲಿ ಹಣ್ಣುಗಳ ಮೇಲೆ 10% ರಿಯಾಯಿತಿ ದರ ನಿಗದಿ ಮಾಡಿದೆ. ಮೇ 26ರಿಂದ 19 ದಿನಗಳ ಕಾಲ ಈ ಮೇಳ ನಡೆಯಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಾನಾ ತಳಿಯ ಮಾವಿನ ಹಣ್ಣುಗಳು

ಮೇಳದಲ್ಲಿ ಬಾದಾಮಿ, ರಸ್‌ಪುರಿ, ಮಲ್ಲಿಕಾ, ಕಾಡುಮಾವು, ಕಾಲಪಾಡು, ದಶೇರಿ, ಕೇಸರ್, ಬೈಗಂಪಲ್ಲಿ, ಸೇಂದೂರ, ತೋತಾಪುರಿ, ಮಲಗೋವಾ, ಸಕ್ಕರೆಗುತ್ತಿ, ಇಮಾಮ್ ಪಸಂದ್, ನೀಲಂ ಸೇರಿದಂತೆ ಹಲವು ಮಾವು ತಳಿಗಳನ್ನು ಮಾರಾಟಕ್ಕೆ ಇಡಲಾಗಿದೆ.

ಈ ಸುದ್ದಿ ಓದಿದ್ದೀರಾ? ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ ಬಹುಕೋಟಿ ಹಗರಣ: ಲೋಕಾಯುಕ್ತ ದಾಳಿ

ಕಳೆದ ವರ್ಷ ನಡೆದ ಮಾವಿನ ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಳೆದ ಬಾರಿ ಮಾಮ್ ಪಸಂದ್  ₹200, ಮಲ್ಲಿಕಾ  ₹100, ಬಾದಾಮಿ  ₹100, ಸಕ್ಕರೆ ಗುತ್ತಿ  ₹150, ಸಿಂಧೂರ  ₹50, ರಸ್‌ಪುರಿ  ₹80, ದೆಸೇರಿ  ₹100, ಕಲಾಪಡ ₹120, ಮಲಗೋವಾ ₹120, ತೋತಾಪುರಿ  ₹30, ಅಮರಪಾಲಿ  ₹100 ಬೆಲೆ ನಿಗದಿ ಮಾಡಲಾಗಿತ್ತು.

ಈ ಬಾರಿ ಮೇಳದಲ್ಲಿ ಹಣ್ಣುಗಳ ಮೇಲೆ 10% ರಿಯಾಯಿತಿ ದರ ನಿಗದಿ ಮಾಡಲಾಗಿದೆ. ಮಾವಿನ ಹಣ್ಣು ಕೆಜಿಗೆ ₹32 ರಿಂದ ಶುರುವಾಗಿ ₹215 ವರೆಗೆ ಇದೆ. ಹಲಸಿನ‌ ಹಣ್ಣು ಕೆಜಿಗೆ ₹25 ನಿಗದಿಯಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು |ತಲಾ ₹1 ಲಕ್ಷ ದಂಡ ಬಾಕಿ ಉಳಿಸಿಕೊಂಡಿವೆ 123 ವಾಹನಗಳು

ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿ, ಹೆಚ್ಚು ದಂಡಕ್ಕೆ ಗುರಿಯಾಗಿರುವ ವಾಹನಗಳನ್ನು...

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಡೀ ದಿನ ಕಳೆದೆ ಎಂದು ಸುಳ್ಳು ಹೇಳಿದ ಯೂಟ್ಯೂಬರ್‌ ಬಂಧನ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿ ವಿಡಿಯೋ ರೆಕಾರ್ಡ್ ಮಾಡಿ...

ಯಾವುದೇ ಆಮೀಷ, ಪ್ರೇರೇಪಣೆಗಳಿಗೆ ಒಳಗಾಗದೆ ಮತ ಚಲಾಯಿಸಿ: ತುಷಾರ್ ಗಿರಿನಾಥ್

ಪ್ರತಿಯೊಬ್ಬ ಯುವ ಮತದಾರರು ಚುಣಾವಣಾ ರಾಯಭಾರಿಗಳಾಗಿದ್ದು, ಯಾವುದೇ ಆಮೀಷ, ಪ್ರೇರೇಪಣೆಗಳಿಗೆ ಒಳಗಾಗದೆ...

ಬೆಂಗಳೂರು | ಕೈಬಿಟ್ಟ 1,412 ವಾಹನಗಳ ಪೈಕಿ 918 ವಾಹನಗಳ ವಿಲೇವಾರಿ

ರಾಜ್ಯ ರಾಜಧಾನಿ ಬೆಂಗಳೂರಿನ ಸಂಚಾರ ಪೊಲೀಸ್ ಠಾಣೆಗಳಲ್ಲಿ ರಚಿಸಲಾದ ವಿಶೇಷ ತಂಡಗಳು...