ಬೆಂಗಳೂರು | ₹20 ಕೋಟಿ ಮೌಲ್ಯದ 99 ಕೊಕೇನ್ ಕ್ಯಾಪ್ಸುಲ್‌ಗಳನ್ನು ನುಂಗಿದ್ದ ನೈಜೀರಿಯನ್ ಪ್ರಜೆ ಬಂಧನ

Date:

ಬರೋಬ್ಬರಿ 2 ಕೆಜಿ ತೂಕದ ₹20 ಕೋಟಿ ಮೌಲ್ಯದ ಕೊಕೇನ್ ಅನ್ನು ಹೊಟ್ಟೆಯೊಳಗೆ ಇಟ್ಟುಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅಡಿಸ್ ಅಬಾಬಾದಿಂದ ಇಥಿಯೋಪಿಯಾ ಏರ್ಲೈನ್ಸ್‌ನಲ್ಲಿ ಬೆಂಗಳೂರಿಗೆ ಡಿಸೆಂಬರ್ 11ರಂದು ಆಗಮಿಸಿದ್ದನು. ಆತನ ಹೊಟ್ಟೆಯಲ್ಲಿ ಸುಮಾರು 99 ಕೊಕೇನ್ ಕ್ಯಾಪ್ಸೂಲ್ಸ್ ಪತ್ತೆಯಾಗಿವೆ.

ಕ್ಯಾಪ್ಸೂಲ್‍ಗಳಲ್ಲಿ ಕೊಕೇನ್ ತುಂಬಿ ಅದನ್ನು ಆರೋಪಿ ನುಂಗಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದನು. ಬಳಿಕ, ಆತನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿ, ಹೊಟ್ಟೆಯಲ್ಲಿದ್ದ ಕ್ಯಾಪ್ಸೂಲ್‍ಗಳನ್ನು ವೈದ್ಯರು ಹೊರಗೆ ತೆಗೆದಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು 99 ಕ್ಯಾಪ್ಸುಲ್‌ಗಳಲ್ಲಿ ಬಚ್ಚಿಟ್ಟಿದ್ದ 2 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವರದಿ ಪ್ರಕಾರ, 5 ದಿನಗಳ ಕಾಲ ಆತನನ್ನು ಆಸ್ಪತ್ರೆಯಲ್ಲಿ ಇರಿಸಿ 99 ಕೊಕೇನ್ ಕ್ಯಾಪ್ಸುಲ್‌ಗಳನ್ನು ಹೊರ ತೆಗೆಯಲಾಗಿದೆ. ನೈಜೀರಿಯಾ ಪ್ರಜೆ ವೈದ್ಯಕೀಯ ಚಿಕಿತ್ಸೆ ವೀಸಾದಲ್ಲಿ ಭಾರತಕ್ಕೆ ಬಂದಿರುವುದಾಗಿ ವರದಿಯಾಗಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರೌಡಿಶೀಟರ್​, ಮೀಟರ್​ ಬಡ್ಡಿ ದಂಧೆ ನಡೆಸುತ್ತಿದ್ದವರ ಮನೆ ಮೇಲೆ ಸಿಸಿಬಿ ದಾಳಿ

ಆತನ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಅತಿದೊಡ್ಡ ಕೊಕೇನ್ ಡ್ರಗ್ ಸರಬರಾಜು ಯತ್ನ ಇದಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಸ್ತಿ ತೆರಿಗೆ | ಓಟಿಎಸ್ ಸೌಲಭ್ಯವನ್ನು ಆನ್‌ಲೈನ್ ಮೂಲಕ ಪಡೆದು ಪಾವತಿಸಲು ಅವಕಾಶ

ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡಿರುವ ಮಾಲೀಕರಿಗಾಗಿ 'ಒನ್ ಟೈಮ್ ಸೆಟ್ಲ್ ಮೆಂಟ್'(OTS)...

ಕಾಂಗ್ರೆಸ್‌ ಸರ್ಕಾರಕ್ಕೆ ಪ್ರತಿಯಾಗಿ ಅಧಿವೇಶನದಲ್ಲಿ ನಿರ್ಣಯ ಮಂಡಿಸಿದ ಬಿಜೆಪಿ

ತೆರಿಗೆ ಅನ್ಯಾಯ ವಿಚಾರವಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ಖಂಡನಾ...

ಇಂಡಿಯಾ ಒಕ್ಕೂಟಕ್ಕೆ ಹೆದರಿ ಅರವಿಂದ್ ಕೇಜ್ರಿವಾಲ್‌ ಬಂಧಿಸಲು ಕೇಂದ್ರದಿಂದ ಸಂಚು: ಮೋಹನ್ ದಾಸರಿ

"ಇಂಡಿಯಾ ಒಕ್ಕೂಟದಲ್ಲಿ ಎಎಪಿ-ಕಾಂಗ್ರೆಸ್ ನಡುವೆ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ...

ಮಂಡ್ಯ | ನನಗೆ ಬೇರೆಡೆ ಟಿಕೆಟ್​ ಪಡೆಯುವುದು ಕಷ್ಟವಲ್ಲ: ಸುಮಲತಾ ಅಂಬರೀಶ್

ನಿನ್ನೆ(ಫೆ.22) ದೆಹಲಿಯಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ...