ಬೆಂಗಳೂರು ಮಳೆ | ಕಬ್ಬನ್‌ಪಾರ್ಕ್‌ನಲ್ಲಿ ನೆಲಕ್ಕೊರಗಿದ 50 ವರ್ಷದ 150ಕ್ಕೂ ಹೆಚ್ಚು ಮರಗಳು

Date:

  • ಇತಿಹಾಸದಲ್ಲಿ ಮೊದಲ ಬಾರಿ ನೆಲಕ್ಕೊರಗಿದ 50 ವರ್ಷದ ಮರಗಳು
  • ಮರಗಳನ್ನು ರಕ್ಷಿಸುವಲ್ಲಿ ಬಿಬಿಎಂಪಿ ಅಧಿಕಾರಿಗಳು ಸಂಪೂರ್ಣ ವಿಫಲ

ಬೆಂಗಳೂರಿನಲ್ಲಿ ಅರ್ಧ ಗಂಟೆ ಸುರಿದ ಧಾರಾಕಾರ ಮಳೆಗೆ ಇಡೀ ರಾಜಧಾನಿ ತತ್ತರಿಸಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನಗರದಲ್ಲಿ ಜೋರು ಮಳೆಗೆ ನೂರಾರು ಮರಗಳು ನೆಲಕ್ಕೊರಗಿವೆ. ಕಬ್ಬನ್‌ಪಾರ್ಕ್‌ನಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ 50 ವರ್ಷಕ್ಕೂ ಹೆಚ್ಚು ಹಳೆಯ ಮರಗಳು ಮತ್ತು ಬೆಲೆಬಾಳುವ ಮರಗಳು ಧರೆಗುರುಳಿವೆ.

ಈ ಬಗ್ಗೆ ಮಾಹಿತಿ ನೀಡಿರುವ ಕಬ್ಬನ್‌ಪಾರ್ಕ್‌ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್, “ಭಾನುವಾರ ಸುರಿದ ಧಾರಕಾರ ಮಳೆಗೆ 50 ವರ್ಷಕ್ಕೂ ಹೆಚ್ಚು ವಯಸ್ಸಾಗಿರುವ 150ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಇದರಲ್ಲಿ ಹೆಚ್ಚು ಬೆಲೆಬಾಳುವ ಮರಗಳಿವೆ. ಕಬ್ಬನ್ ಪಾರ್ಕ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಪರಿಣಾಮ ಬಹುತೇಕ ಮರಗಳ ಬೇರುಗಳು ಹಾನಿಗೊಳಗಾಗಿವೆ. ಇದರಿಂದ ಮರಗಳು ಬಿದ್ದಿವೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ಮಳೆ | ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಯುವಕ

“ಸ್ಮಾರ್ಟ್ ಸಿಟಿ ಯೋಜನೆಯಡಿ ಕಬ್ಬನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ತಡೆದು, ಮರಗಳನ್ನು ರಕ್ಷಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ” ಎಂದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ನಮ್ಮ ಮೆಟ್ರೋ’ ಯೋಜನೆಗಾಗಿ 203 ಮರ ಕಡಿಯಲು ಅನುಮತಿ ನೀಡಿದ ಹೈಕೋರ್ಟ್‌

ನಮ್ಮ ಮೆಟ್ರೋ ಕಾಮಗಾರಿ ವಿಳಂಬವಾದರೆ ಸಾರ್ವಜನಿಕರಿಗೆ ದೊಡ್ಡ ಸಮಸ್ಯೆ ನಮ್ಮ ಮೆಟ್ರೋ ಸಾರ್ವಜನಿಕ...

ಬೆಂಗಳೂರು | ವಾಹನ ಕಳ್ಳರನ್ನು ಬಂಧಿಸಿದ ಪೊಲೀಸರು

10 ದ್ವಿಚಕ್ರ ವಾಹನಗಳೊಂದಿಗೆ ಜೂ. 3ರಂದು ಆರೋಪಿಗಳ ಬಂಧನ ವಾಹನಗಳನ್ನು ಕಡಿಮೆ ಬೆಲೆಗೆ...

ಶಕ್ತಿ ಯೋಜನೆಗೆ ಚಾಲನೆ | ಬಿಎಂಟಿಸಿ ಬಸ್‌ಗೆ ಭಾನುವಾರ ಸಿಎಂ ಸಿದ್ದರಾಮಯ್ಯ ಕಂಡಕ್ಟರ್‌

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ, ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಒದಗಿಸುವ...

ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಸೋಲಿಸಬೇಕು; ಸಿಎಂ ಜೊತೆ ‘ಎದ್ದೇಳು ಕರ್ನಾಟಕ’ ನಿಯೋಗ ಚರ್ಚೆ

ನಾಡಿನ ಜನತೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಚುನಾವಣೆಯಲ್ಲಿ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ....