ಬೈಯಪ್ಪನಹಳ್ಳಿ-ಶೆಟ್ಟಿಗೆರೆ ಏರ್‌ಪೋರ್ಟ್ ಲೈನ್ ಮೆಟ್ರೋ ಘಟಕ ನಿರ್ಮಾಣಕ್ಕೆ ಗುತ್ತಿಗೆ ನೀಡಿದ ಬಿಎಂಆರ್‌ಸಿಎಲ್

Date:

  • ಕೆ.ಆರ್.ಪುರ ಮತ್ತು ವೈಟ್‌ಫೀಲ್ಡ್‌ ನಡುವಿನ ಪ್ರಯಾಣದ ಸಮಯ 25 ನಿಮಿಷವಾಗಲಿದೆ
  • ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಚಾರ ಡಿಸೆಂಬರ್ 2024 ಅಥವಾ 2025ರಲ್ಲಿ ಆರಂಭ

ರಾಜಧಾನಿ ಬೆಂಗಳೂರಿನಲ್ಲಿ ಬೈಯಪ್ಪನಹಳ್ಳಿ ಮತ್ತು ಶೆಟ್ಟಿಗೆರೆಯಲ್ಲಿ ಏರ್‌ಪೋರ್ಟ್ ಲೈನ್ ಮೆಟ್ರೋ ಘಟಕ ನಿರ್ಮಾಣಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಗುತ್ತಿಗೆ ನೀಡಿದೆ.

ಮಾರ್ಚ್ 18ರಂದು ಮೆಟ್ರೋ ಘಟಕ ನಿರ್ಮಾಣದ ಗುತ್ತಿಗೆಯನ್ನು ಜೆ.ಕುಮಾರ್ ಇನ್‌ಫ್ರಾಜೆಕ್ಟ್ಸ್-ಎಐಸಿಪಿಎಲ್‌ಗೆ ನೀಡಲಾಗಿದೆ. ಶೆಟ್ಟಿಗೆರೆಯಲ್ಲಿ ಏರ್‌ಪೋರ್ಟ್ ಲೈನ್ ಮೆಟ್ರೋ ಘಟಕ ನಿರ್ಮಾಣಕ್ಕೆ ಒಟ್ಟು ₹182.33 ಕೋಟಿ ಒಪ್ಪಂದವಾಗಿದೆ. ಬೈಯಪ್ಪನಹಳ್ಳಿ ಘಟಕ ಮರುರೂಪಿಸಲು ₹249.19 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಹಂತ 2ಎ ಅಡಿಯಲ್ಲಿ 18.236-ಕಿಮೀ ಸಿಲ್ಕ್ ಬೋರ್ಡ್ ಜಂಕ್ಷನ್-ಕೆಆರ್ ಪುರಂ ಮಾರ್ಗದ ಸೇವೆ ಬೈಯಪ್ಪನಹಳ್ಳಿ ಡಿಪೋವನ್ನು ಮರುರೂಪಿಸಲಾಗುತ್ತಿದೆ.

ಈಗಿರುವ 25 ಎಕರೆ ಭೂಮಿಯಲ್ಲಿ ಹೊಸ ಘಟಕ ಎರಡು ಹಂತದ ಸೌಲಭ್ಯವಾಗಲಿದೆ. ಇದು 28 ಸ್ಥಿರ ರೇಖೆಗಳನ್ನು ಹೊಂದಿರುತ್ತದೆ. 14 ಗ್ರೇಡ್ ಮತ್ತು 14 ಭೂಗತ ಹಾಗೂ ಹೊಸ ಸೌಲಭ್ಯವನ್ನು ನಿರ್ಮಿಸಲು ಈಗಿರುವ ಘಟಕವನ್ನು ತೆಗೆಯಲಾಗುತ್ತದೆ.

ಮರುರೂಪಿಸಲಾಗುವ ಬೈಯಪ್ಪನಹಳ್ಳಿ ಡಿಪೋ ಸಿಲ್ಕ್ ಬೋರ್ಡ್-ಕೆ.ಆರ್.ಪುರ-ವಿಮಾನ ನಿಲ್ದಾಣ ಮಾರ್ಗದಲ್ಲಿ ಶೆಟ್ಟಿಗೆರೆ ಡಿಪೋ-ವರ್ಕ್ ಶಾಪ್ ಸಿದ್ಧವಾಗುವವರೆಗೆ ಸೇವೆ ಸಲ್ಲಿಸುತ್ತದೆ. ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಚಾರ ಡಿಸೆಂಬರ್ 2024 ಅಥವಾ 2025 ರ ಆರಂಭವಾಗುವ ನಿರೀಕ್ಷೆಯಿದೆ.

ವೈಟ್‌ಫೀಲ್ಡ್‌ ಮೆಟ್ರೋ ಭಾನುವಾರದಿಂದ ಸಾರ್ವಜನಿಕರಿಗೆ ಮುಕ್ತ

ಮಾರ್ಚ್ 26 (ಭಾನುವಾರ) ಬೆಳಗ್ಗೆ 7 ಗಂಟೆಗೆ 13.71 ಕಿಮೀ ಮಾರ್ಗದ ಕೆ.ಆರ್.ಪುರಂ-ವೈಟ್‌ಫೀಲ್ಡ್‌ ಮೆಟ್ರೋ ಆರಂಭವಾಗಲಿದೆ. ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ.

ಶನಿವಾರ ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಭಾನುವಾರ ಬೆಳಗ್ಗೆ 7 ಗಂಟೆಗೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆ.ಆರ್.ಪುರ ಮತ್ತು ವೈಟ್‌ಫೀಲ್ಡ್‌ ನಡುವಿನ ಪ್ರಯಾಣದ ಸಮಯ 25 ನಿಮಿಷ ಹಾಗೂ ಪ್ರಯಾಣ ದರ ₹35 ಇರಲಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಕ್ತಿ ಯೋಜನೆಗೆ ಚಾಲನೆ | ಬಿಎಂಟಿಸಿ ಬಸ್‌ಗೆ ಭಾನುವಾರ ಸಿಎಂ ಸಿದ್ದರಾಮಯ್ಯ ಕಂಡಕ್ಟರ್‌

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ, ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಒದಗಿಸುವ...

ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಸೋಲಿಸಬೇಕು; ಸಿಎಂ ಜೊತೆ ‘ಎದ್ದೇಳು ಕರ್ನಾಟಕ’ ನಿಯೋಗ ಚರ್ಚೆ

ನಾಡಿನ ಜನತೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಚುನಾವಣೆಯಲ್ಲಿ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ....

ಬೆಂಗಳೂರು | ಕೆಐಎ ಒಂದನೇ ಟರ್ಮಿನಲ್‌ ಶೀಘ್ರ ನವೀಕರಣ

ಹದಿನೈದು ವರ್ಷಗಳಲ್ಲಿ 250 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದ ಟರ್ಮಿನಲ್...

ಬೆಂಗಳೂರು | ಸ್ನೇಹಿತನ ಜತೆ ಸೇರಿ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿದ ಪ್ರಿಯಕರ

ಗಿರಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಜೂ. 6ರಂದು ನಡೆದಿದ್ದ ಘಟನೆ...