ರಾಜಧಾನಿಯಲ್ಲಿ ಕಣ್ಮರೆಯಾಗುತ್ತಿರುವ ಬಸ್‌ ತಂಗುದಾಣಗಳು

Date:

  • ‘ಬಸ್ ಸ್ಟ್ಯಾಂಡ್ ಹುಡುಕಿ ಕೊಡಿ’ ಎಂದು ಠಾಣೆಗೆ ದೂರು
  • ಬಳಕೆ ಇಲ್ಲದ ಬಸ್‌ ಸ್ಟ್ಯಾಂಡ್‌ಗಳ ತೆರುವು ಕಾರ್ಯಾಚರಣೆ

ರಾಜಧಾನಿ ಬೆಂಗಳೂರಿನಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್‌ ತಂಗುದಾಣಗಳು ಒಂದೊಂದಾಗಿ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗುತ್ತಿವೆ. ಇದೀಗ ಚಾಮರಾಜಪೇಟೆಯ ರಾಯನ್ ಸರ್ಕಲ್‌ನಲ್ಲಿ ನೆನ್ನೆ ಇದ್ದ ಬಸ್‌ ತಂಗುದಾಣ ಇವತ್ತು ಕಾಣೆಯಾಗಿದೆ.

ಈ ಹಿಂದೆ, ನಗರದ ಹೆಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಲಯನ್ಸ್‌ ಬಸ್‌ ತಂಗುದಾಣ ರಾತ್ರೋರಾತ್ರಿ ಮಾಯವಾಗಿತ್ತು.

ಬಸ್‌ ಸ್ಟಾಪ್ ಕಣ್ಮರೆಯಾಗಿರುವ ಬಗ್ಗೆ ಈ ದಿನ.ಕಾಮ್‌ ಜತೆಗೆ ಮಾತನಾಡಿದ ವಂದೆ ಮಾತರಂ ಸಂಘಟನೆಯ ರಾಜ್ಯಾದ್ಯಕ್ಷ ಸಿಎಂ ಶಿವಕುಮಾರ್ ನಾಯ್ಕ, “ಚಾಮರಾಜಪೇಟೆಯ ರಾಯನ್ ಸರ್ಕಲ್‌ನಲ್ಲಿ ನೆನ್ನೆ ಇದ್ದ ಬಸ್ ನಿಲ್ದಾಣ ಇವತ್ತು ಇಲ್ಲವಾಗಿದೆ. ಆದ್ದರಿಂದ, ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಚಾಮರಾಜಪೇಟೆಯ ಪೊಲೀಸ್ ಠಾಣೆಗೆ ‘ಬಸ್ ಸ್ಟ್ಯಾಂಡ್ ಹುಡುಕಿ ಕೊಡಿ’ ಎಂದು ದೂರು ದಾಖಲಿಸಲಾಗುವುದು. ಬಸ್‌ ನಿಲ್ದಾಣ ಬಳಕೆಯಲ್ಲಿತ್ತು. ಯಾವುದೇ ಸೌಕರ್ಯದ ಕೊರತೆ ಇರಲಿಲ್ಲ” ಎಂದರು.

“ಬೆಂಗಳೂರಿನಲ್ಲಿ ಬಳಕೆ ಇಲ್ಲದ ಕೆಲವು ಬಸ್‌ ಸ್ಟ್ಯಾಂಡ್‌ಗಳನ್ನು ತೆರುವು ಮಾಡಲಾಗುತ್ತಿದೆ. ಈ ಹಿಂದೆ ಹೆಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಲಯನ್ಸ್‌ ಬಸ್‌ ನಿಲ್ದಾಣವನ್ನು ತೆರುವು ಮಾಡಲಾಗಿದೆ. ಅದು ಬಳಕೆಯಿಲ್ಲದ ಕಾರಣ ತೆರುವು ಮಾಡಲಾಗಿತ್ತು. ಇನ್ನುಳಿದಂತೆ, ಕೆಲವು ಬಸ್‌ ನಿಲ್ದಾಣಗಳಿಂದ ಫುಟ್‌ಪಾತ್ ಒತ್ತುವರಿಯಾಗಿದ್ದರೆ, ಅವುಗಳನ್ನು ತೆರುವು ಮಾಡಲಾಗುತ್ತಿದೆ” ಎಂದು ಬಿಬಿಎಂಪಿ ಸಾರ್ವಜನಿಕ ಸಂಪರ್ಕಾಧಿಕಾರಿ ಸುರೇಶ್ ಈ ದಿನ.ಕಾಮ್‌ಗೆ ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡ ನಿವಾಸಿಗಳು : ಎಫ್‌ಐಆರ್‌ ದಾಖಲು

ಬುಧವಾರ ಬೆಳಗ್ಗೆಯಿಂದ ಜ್ವರ ಹಾಗೂ ವಾಂತಿ–ಭೇದಿಯಿಂದ ಬಳಲಿದ ಮಕ್ಕಳು 140 ಜನರನ್ನು ಮತ್ತೆ...

‘ನಮ್ಮ ಮೆಟ್ರೋ’ ಯೋಜನೆಗಾಗಿ 203 ಮರ ಕಡಿಯಲು ಅನುಮತಿ ನೀಡಿದ ಹೈಕೋರ್ಟ್‌

ನಮ್ಮ ಮೆಟ್ರೋ ಕಾಮಗಾರಿ ವಿಳಂಬವಾದರೆ ಸಾರ್ವಜನಿಕರಿಗೆ ದೊಡ್ಡ ಸಮಸ್ಯೆ ನಮ್ಮ ಮೆಟ್ರೋ ಸಾರ್ವಜನಿಕ...

ಬೆಂಗಳೂರು | ವಾಹನ ಕಳ್ಳರನ್ನು ಬಂಧಿಸಿದ ಪೊಲೀಸರು

10 ದ್ವಿಚಕ್ರ ವಾಹನಗಳೊಂದಿಗೆ ಜೂ. 3ರಂದು ಆರೋಪಿಗಳ ಬಂಧನ ವಾಹನಗಳನ್ನು ಕಡಿಮೆ ಬೆಲೆಗೆ...

ಶಕ್ತಿ ಯೋಜನೆಗೆ ಚಾಲನೆ | ಬಿಎಂಟಿಸಿ ಬಸ್‌ಗೆ ಭಾನುವಾರ ಸಿಎಂ ಸಿದ್ದರಾಮಯ್ಯ ಕಂಡಕ್ಟರ್‌

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ, ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಒದಗಿಸುವ...