ರಾಜ್ಯ ರಾಜಧಾನಿ ಬೆಂಗಳೂರಿನ ಜೆ ಪಿ ನಗರದಲ್ಲಿರುವ ಚುಂಚಘಟ್ಟ ಕೆರೆಯ ದಂಡೆ ಮೇಲೆ ಕಸದ ರಾಶಿ ತುಂಬಿದ್ದು, ಕೆರೆಯ ತುಂಬ ಗಿಡ-ಗಂಟಿಗಳು ಬೆಳೆದಿದ್ದವು. ಈ ಸಮಸ್ಯೆಯ ಬಗ್ಗೆ ಈ ದಿನ.ಕಾಮ್ ವರದಿ ಮಾಡಿತ್ತು.
ವರದಿಯಿಂದ ಎಚ್ಚೆತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಕೆರೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಎಂಜಿನಿಯರ್ (ಕೆರೆ) ವಿಜಯಕುಮಾರ್ ಹರಿದಾಸ್, “ಚುಂಚಘಟ್ಟ ಕೆರೆಯ ಸುತ್ತ ಬೆಳೆದಿರುವ ಗಿಡಗಳನ್ನು ತೆರವು ಮಾಡಲಾಗುತ್ತಿದೆ. ಹಾಗೂ ಕೆರೆಯ ದಂಡೆ ಮೇಲೆ ಹಾಕಿರುವ ಕಸವನ್ನು ಸ್ವಚ್ಛಗೊಳಿಸಲಾಗುತ್ತದೆ” ಎಂದರು.