ವೈಟ್‌ ಫೀಲ್ಡ್‌-ಕೆ.ಆರ್‌.ಪುರ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

Date:

  • ₹4,249 ಕೋಟಿ ವೆಚ್ಚದ 13.71 ಕಿಲೋಮೀಟರ್ ಉದ್ದದ ನೂತನ ಮೆಟ್ರೋ ಮಾರ್ಗ
  • 13.71 ಕಿಲೋ ಮೀಟರ್‌ ಉದ್ದದ ನೇರಳೆ ಬಣ್ಣದ ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳಿವೆ

ಬಹು ನಿರೀಕ್ಷಿತ ವೈಟ್‌ ಫೀಲ್ಡ್‌-ಕೆ.ಆರ್‌.ಪುರಂ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ನೂತನ ಮೆಟ್ರೋ ಮಾರ್ಗದ ಕಾರ್ಯಾಚರಣೆಯೊಂದಿಗೆ ಬೆಂಗಳೂರು ದೇಶದಲ್ಲೇ ಎರಡನೇ ಅತಿ ದೊಡ್ಡ ಮೆಟ್ರೋ ಮಾರ್ಗ ಹೊಂದಿದ ನಗರವೆಂಬ ಖ್ಯಾತಿ ಪಡೆದುಕೊಂಡಿದೆ.

ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೆಟ್ರೋದಲ್ಲಿ ಪ್ರಯಾಣಿಸಿದರು. ಪ್ರಯಾಣದ ವೇಳೆ, ವಿದ್ಯಾರ್ಥಿಗಳೊಂದಿಗೆ ಹಾಗೂ ಮೆಟ್ರೋ ಸಿಬ್ಬಂದಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು.

₹4,249 ಕೋಟಿ ವೆಚ್ಚದ 13.71 ಕಿಲೋಮೀಟರ್ ಉದ್ದದ ನೂತನ ಮೆಟ್ರೋ ಮಾರ್ಗ ಇದಾಗಿದೆ. 13.71 ಕಿಲೋ ಮೀಟರ್‌ ಉದ್ದದ ನೇರಳೆ ಬಣ್ಣದ ಈ ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳು ಇವೆ.

ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಗುಡುಗು ಸಹಿತ ಮಳೆ; 9 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’

ಕೃಷ್ಣರಾಜಪುರ, ಸಿಂಗಯ್ಯನಪಾಳ್ಯ, ಗರುಡಾಚಾರ್ ಪಾಳ್ಯ, ಹೂಡಿ, ಸೀತಾರಾಮಪಾಳ್ಯ, ಕುಂದಲಹಳ್ಳಿ, ನಲ್ಲೂರು ಹಳ್ಳಿ, ಶ್ರೀ ಸತ್ಯಸಾಯಿ ಆಸ್ಪತ್ರೆ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ ಟ್ರೀ ಪಾರ್ಕ್, ಹೋಪ್ ಫಾರ್ಮ್ ಚನ್ನಸಂದ್ರ, ವೈಟ್ ಫೀಲ್ಡ್ (ಕಾಡುಗೋಡು) ಸೇರಿ ಒಟ್ಟು 12 ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿವೆ.

ವೈಟ್​​ಫೀಲ್ಡ್​​ನಲ್ಲಿ ನಮ್ಮ ಮೆಟ್ರೋ ಕಾಮಗಾರಿ ಸಂಪೂರ್ಣವಾಗಿದೆ. ಆದರೆ, ಕೆ.ಆರ್.ಪುರ ನಿಲ್ದಾಣದಲ್ಲಿ ಇನ್ನೂ ಪಿಲ್ಲರ್‌ಗಳು, ಸೀಮೆಂಟ್ ಕಾರ್ಯ, ಸ್ಟೇಷನ್‌ಗೆ ಕಂಬಿಗಳನ್ನು ಅಳವಡಿಸುವುದು ಸೇರಿದಂತೆ ಅನೇಕ ಕಾಮಗಾರಿಗಳು ಬಾಕಿ ಉಳಿದಿವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರವೀಣ್ ಪತ್ನಿಗೆ ಖಾಯಂ ಉದ್ಯೋಗ ಕೊಡಿಸಲಾಗದ ಸಂಸದ ನಳಿನ್ ರಾಜೀನಾಮೆ ನೀಡಲಿ: ಪ್ರತಿಭಾ ಕುಳಾಯಿ

ಬಿಜೆಪಿ ಕೊಡಿಸಿರುವ ಗುತ್ತಿಗೆ ಆಧಾರದ ಕೆಲಸದ ಅವಧಿ ಮುಗಿದಿದೆ ನೂತನ ಸರ್ಕಾರ ಬಂದ...

ಆನೇಕಲ್ |ಕಾಡಾನೆ ದಾಳಿಗೆ ಕುರಿ ಕಾಯುತ್ತಿದ್ದ ಮಹಿಳೆ ಬಲಿ

ಮನವಿ ಮಾಡಿದ್ದರೂ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಸಿಬ್ಬಂದಿ ಮಹಿಳೆಯನ್ನು ಕಾಲಿನಿಂದ ತುಳಿದು...

ಪ್ರವೀಣ್‌ ಪತ್ನಿಗೆ ಮತ್ತೆ ಉದ್ಯೋಗ ಕೊಡುತ್ತೇವೆ: ಸಿಎಂ ಸಿದ್ಧರಾಮಯ್ಯ

ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಮರು ನೇಮಕ...

ಟಿಕೆಟ್‌ ರಹಿತ ಪ್ರಯಾಣ: ₹5,54,832 ದಂಡ ವಸೂಲಿ ಮಾಡಿದ ಕೆಎಸ್‌ಆರ್‌ಟಿಸಿ

ಟಿಕೆಟ್‌ ರಹಿತ 3,415 ಪ್ರಯಾಣಿಕರಿಗೆ ದಂಡ ವಿಧಿಸಿದ ನಿಗಮ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ...