ಹೊನ್ನಾಳಿ ಸೀಮೆಯ ಕನ್ನಡ | ಸವಂತ್ಗಿ ಅಂದ್ರ ಸರ್ವೂತ್ನಾಗು ಬದ್ಕು

Date:

ವತ್ತು ಮುಂಚೆ ಅಡ್ಗಿ ಮಾಡಿಟ್, ಬಗ್ಲಾಗ ಪುಟ್ಟಿ ಇಡ್ಕಂದು ಹೆಣ್ಣಾಳು ಕೂಲಿಗೆ ವೊಕರ. ಬೆಳಗಿಂಜಾವ ಐದುವರಿ, ಆರ್ಗಂಟಿಗೆ ಮಟ್ಟಿವಲ್ದಾಗ ಹೆಂಗಸರ ಸೊಂಟ ಸವಂತ್ಗಿ ಕೀಳಾಕಂತ ಬಗ್ಗಿ-ಬಗ್ಗಿ ದಿನಾಲು ಸರ್ಕಸ್ ಮಾಡಾಕ್ ಸುರ್ವಾಗಿರ್ತವು. ಬಿಸ್ಲು ಹೂವಿಮ್ಯಾಲ ಬೀಳತ್ಗೆ ಕೂಲಿ ಕೆಲ್ಸ ಮುಗಿತತಿ

ಗಲಾಟೆ, ಕಡೂರು, ಕುಚ್ಚು, ಪೂರ್ಣಿಮಾ, ಕಾವೇರಿ, ಬೆಳ್ಳಟ್ಟಿ, ಬಟನ್ಸ್, ಪಚ್ಚಿ, ನಾಗಿಣಿ, ಶ್ಯಾವಂತ್ಗಿ, ಚಾಂದಿನಿ, ರೂಬಿ, ಹೆಮ್ಮಾಡಿ, ಮಂಜರಿ, ಮಾರಿಗೊಲ್ಡ್…ಇವೆಲ್ಲಾ ಮನ್ಶಾರ್ ಹೆಸ್ರಲ್ಲ, ಹಬ್ಬಕ್ಕೊಂದ್ಸರಿ ಮಾತ್ರ ಮುಗಿಲೇರಿ ನಿಂತು ಬೆಲಿಬಾಳೋ ಸವಂತ್ಗಿ ಹೂವಿನ ಬ್ಯಾರ್‍ಬ್ಯಾರೆ ಹೆಸ್ರು. ಈ ಹೂಗಿಡಕ್ಕ ಅಂಟು ಅಂತನು ಕರಿತಾರ. ಅಂಟ್ ಅಚ್ಚಿದ್ರ ವಲವಲ ಅಂತ ವಲುಕ್ ಅಂಟ್ಗೆಂದ್ ಇರ್ಬಕು. ಅಟಕಣ ಬದುಕಿರ್ತತಿ ಜನ ಮಂತ್ಯಾಕ್ ಇರದೇ ಕಮ್ಮಿ. ಮೊದ್ಮೊದ್ಲು ಹಳೆ ಗಿಡ್ದಾಗಿನ್ ಬೇರ್ನ ಗುದ್ಲಿಯಿಂದ ಬಗ್ದು ಬೆರ್ಳುದ್ದ ಸೋಸಿ ವಸ್ಮಡಿಗೆ ನೆಟ್ಟು ಹೂ ಬೆಳಿತಿದ್ರು. ಕಾಲದ ಮಹಿಮಾ… ಇತ್ತಿತ್ಲಾಗ ಎಲ್ರು ತಮಿಳ್ನಾಡಿಂದ ರೆಡಿಮೆಂಟ್ ಸಸಿ ತಂದು ಹಚ್ತಾರ. ಸವಂತ್ಗಿ ಮಡಿಯಂದ್ರ ಹೂ ಗಿಡವೊಂದೇ ಅಲ್ಲ, ಹೂ ಬಿಡಕ್ಮುಂಚೆ ಅದೃಜೊತಿಗೆ ಬೆಳ್ಳುಳ್ಳಿ, ಅರುಶ್ಣ, ಸುಂಠಿ, ಮೆಣ್ಸಿನ್ಕಾಯಿ, ಜವ್ಳಿ, ಬೆಂಡಿಕಾಯಿ, ಗೆಜ್ರಿ, ತಮಾಟಿ ಹಣ್ಣು, ಮೂಲಂಗಿ, ಕೊತುಂಬ್ರಿ, ಮುಳ್ಗಾಯಿ, ಎಲಿಕೋಸು, ತಗ್ರಿಕಾಯಿ, ಅವ್ರಿಕಾಯಿ, ಅಲ್ಸಂದಿಕಾಯಿ, ಸಬ್ಬಾಸ್ಗಿ, ಪಾಲಕ್, ಅರ್ಬಿ, ಮೆಂತಿ ಸೊಪ್ಪು… ಹಿಂಗಾ ಮನಿಗ್ ಬೇಕಾದಷ್ಟು ಕಾಳ್ಕಡಿ, ತರ್ಕಾರಿ ಬೆಳ್ಕಂತಾರ.

ಈ ನುಡಿಗಟ್ಟು ಕೇಳಿದ್ದೀರಾ?: ದೇಸಿ ನುಡಿಗಟ್ಟು – ಕುಂದಾಪುರ ಸೀಮೆ | ಗಂಜಿ ಊಟದ ಗಮ್ಮತ್ತು

ಹೂವು ಬಿಡದು ಸುರ್ವಾದ್ಮ್ಯಾಗ ಪಷ್ಟಿಗೆ ಕಣ್ಬಿಟ್ಟ ಹೂವನ್ನ ಊರಾಗಿನ್ ಅನ್ಮಪ್ಪ, ಮತಂಗೆವ್ವ, ಚೊಡವ್ನು ಗುಡೀಗ್ ಸಿಸ್ತಗ ಕೊಡ್ತರ. ಅಮ್ಯಕಡೆ ಮಾರ್ಕೆಟ್ ಮಕ ನೊಡದು. ವತ್ತು ಮುಂಚೆ ಎದ್ದು ಮನ್ಯಾರಿಗೇನಾರ ಅಡ್ಗಿ ಮಾಡಿಟ್, ಬಗ್ಲಾಗ ಒಂದ್ ಪುಟ್ಟಿ ಇಡ್ಕಂದು ಹೆಣ್ಣಾಳು ಕೂಲಿಗೆ ವೊಕರ. ಬೆಳಗಿಂಜಾವ ಐದುವರಿ, ಆರ್ಗಂಟಿಗೆ ಮಟ್ಟಿವಲ್ದಾಗ ಹೆಂಗಸರ ಸೊಂಟ ಹೂ ಕೀಳಾಕಂತ ಬಗ್ಗಿಬಗ್ಗಿ ದಿನಾಲು ಸರ್ಕಸ್ ಮಾಡಾಕ್ ಸುರ್ವಾಗಿರ್ತವು. ಬೆಳಗಿನ್ ಬಿಸ್ಲು ಹೂವಿಮ್ಯಾಲ ಬೀಳತ್ಗೆ ಕೂಲಿ ಕೆಲ್ಸ ಮುಗಿತತಿ. ಮೂರ್ತಾಸ್ ಕೆಲ್ಸ ಮಾಡಿದ್ರ ನೂರುಪೆ ದುಡ್ದಂಗ ಜೊತಿಗ್ ಅವತ್ತಿನ ಸಾರಿಗೆನಾರ ಕಾಯ್ಪಲ್ಯ ತಗಂಬರ್ತಾರ. ಮೂರ್ತಾಸ್ ಕೆಲ್ಸ ಅಷ್ಟೆಯಾ ಅನ್ನದೆನೋ ಸುಲ್ಬ. ಆದ್ರ ಎರ್ಡು ಕೈಗಳ ಹೆಬ್ಬೆರಳು ತೋರ್ಬೆರಳ ಉಗುರಲ್ಲಿಯೇ ಹೂ ಚಿವ್ಟಿ ಆಕ್ಬಕು ಅಂದ್ರ ಹೆಣ್ಣಾಳಿನ ಬೆನ್ನು ಬಾಗಿಯೇ ಪದ ಹಾಡ್ಬಕು. ತಿರ್ಬೆಳೆಗ್ಗೆನೆ ಮತ್ತೊಲುಕ್ ವೂದ್ರ ಕೂಲೇರು ಸಿಸ್ಸಿವಾ ಉಗುರ್ಕಣ್ಣಿ ಕಿತಿಕಿತಿ ಅಂತವು, ಸುಕಾಸುಮ್ನೆ ಮಂಡಿನುವ್ತವು, ಕುಂತ್ರ ಸೊಂಟ ಎದ್ಯಳಕ ಬರಲ್ಲವ… ಅಂತ ಮಾತಾಡ್ತಿರ್ತರ. 

ಹತ್ತಿಯಂಗ ಹಗೂರಾಗಿ ಕಾಣೋ ಹೂಗಳ ನೊಡ ಕುಶಿ ಒಂತರದ್ದಾದ್ರ, ಇಬ್ನಿಯಲ್ಲಿ ಕಿತ್ತ ಹೂವು ತುಂಬಿದ ಮಣಭಾರದ ಬಟಾರ ಬೆನ್ಮಾಲ ಹೊತ್ತೊಯ್ಯೊ ಗಣುಸ್ರು ಕಷ್ಟ ಇನ್ನೊಂತರದ್ದು. ಮಾರ್ಕೆಟ್ನಾಗ ಚಲೋ ರೇಟಿದ್ರ ಅಂಗಿಬಕಾಣ ದಪ್ಪಆಗಿ ಮನಿ ಮಕ್ಳೀಗೆ ಹಣ್ಣು, ಸಿಹಿ, ಖಾರ ತಿನಿಸು ಬರ್ತವ. ಇಲ್ಲಾಂದ್ರ ಕಣ್ತುಂಬ ಕುಶಿ ತುಂಬ್ಕಂಡ್ ಮಾರ್ಕೆಟ್ ದಾರಿಕಡೆ ವೊಗಾಕರೆ ಇದ್ದ ಮಾತುಕತಿ ವಾಪಾಸ್ ಬರ್ವಾಗ ಸಪ್ಪೆ ಆಗಿರ್ತಿತಿ. ಒಂದೊಂದ್ಸರಿ ಮಾರ್ಕೆಟ್ ಬಿದ್ರೆ ತಗಂದೊದ ಹೂವ್ನೆಲ್ಲಾ ಶಿಮೊಗ ಡಾಂಬರ್ ರಸ್ತಿಯುದ್ಕು ಚಲ್ಕೆಂತ ಬರಿಗೈಲಿ ಮನಿಗೆ ಬಂದದ್ದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಈ ನುಡಿಗಟ್ಟು ಕೇಳಿದ್ದೀರಾ?: ದೇಸಿ ನುಡಿಗಟ್ಟು – ಕಲಬುರಗಿ ಸೀಮೆ | ಮಾತು ಮುಗಿವಷ್ಟರಲ್ಲಿ ಅವಳ ಮಗಳು ‘ಮಮ್ಮಿ ಮೈಯಾಗ ದೇವರು ಬರತಾರ’ ಅಂದಳು!

ಸವಂತ್ಗಿ ಬೆಳಿಯತ್ಗೆ ಪಡಿಪಾಟ್ಲು ಬಿಟ್ಟೊಕತಿ. ಪರ್ಮತ್ಮ ಕಣ್ಬಿಟ್ರ ಕೊಡದೆಟತ್ತು ಅಂತ ನಂಬಿನೆಚ್ಚಿ ಅದುಕ್ ರೇಟ್ ಸಿಗ್ತತೋ ಬಿಡ್ತತೋ ನೊಡಲ್ಲ ಹಿಂದಾಮುಂದಾ ಹೂವು ಬರಂಗ ಗಿಡ ಹಚ್ಚಿದ್ದೆ ಹಚ್ಚಿದ್ದು. ಮಾರ್ಕೆಟ್ ಬೆಲಿ ಅಂದ್ರ ಲಾಟ್ರಿ ವಡ್ದಂಗ, ಒಂದ್ಕೇಜಿ ಹೂವಿನ್ಬೆಲಿ ಇವತ್ ಇಪ್ಪತ್ರುಪೆ ಇದ್ರ ಹಬ್ಬ, ಜಾತ್ರಿ, ಮದ್ವಿ ಸೀಜನಾಗ ಮೂರ್ದಿನ ಮಾತ್ರ ಕೆಜಿ ಇನ್ನೂರುಪೆ ರೆಟ್ ದ್ಯಾಸ್ತಿಯಕತಿ. ಅವಾಗ್ಲೆ ಅವುಷ್ದಿ, ಗ್ವಬ್ರ, ಕಳಿ ಕೂಲಿ ಬೆಳಿ ಖರ್ಚು ಕಳ್ದು ಸೊಸೊಲ್ಪ ಎನಾರ ಉಳಿಬಕು. ಮತ್ತದೆ ಸರ್ದಿ… ದಷ್ಟಪುಷ್ಟ ಬೆಳಿಯೊ ಮಂಜರಿ, ಕಮ್ಮಿ ಆಯಸ್ಸಿನ ಪೂರ್ಣಿಮಾ, ಗಲಾಟಿ ಹೂವಿನ ಗದ್ದಲ, ಸೇಂಟ್ ಹೂವಿನ ಸುವಾಸನಿ, ಚಾಂದಿನಿಯ ಚೆಲುವು, ಕಾವೇರಿಯ ಕಸುವು ಹೂ ಬೆಳಿಯೋರ್ ಬದ್ಕಲ್ಲೂ ಇದ್ದದ್ದೇ ಅಲ್ವಾ?

ಪೋಸ್ಟ್ ಹಂಚಿಕೊಳ್ಳಿ:

ರಾಧ ಹರಗನಹಳ್ಳಿ
ರಾಧ ಹರಗನಹಳ್ಳಿ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹರಗನಹಳ್ಳಿಯವರು. ಸದ್ಯ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿ. ಸಾಹಿತ್ಯ, ಹೆಣಿಗೆ, ಚಿತ್ರಕಲೆ ಮೇಲೆ ಪ್ರೀತಿ.

1 COMMENT

  1. ಲೌಲಿಯಾಗಿದೆ. ರೈತರ ಕಷ್ಟ, ಹೆಣ್ಮಕ್ಕಳ ಶ್ರಮ, ಮಾರುಕಟ್ಟೆ ಏರಿಳಿತವನ್ನು ಬದುಕಿನ ಏರಿಳಿತದ ಜೊತೆ ಹೆಣೆಯಲಾಗಿದೆ. ಭಾಷೆಯ ಸೊಗಸು ಅಕ್ಷರದಲ್ಲಿ ಇಳಿವಾಗ , ಕನ್ನಡದ ಬರವಣಿಗೆ ಮಾತಾಡಿದಷ್ಟು ಸುಲಭವಲ್ಲ ಎಂಬುದು ಕಾಣುತ್ತದೆ. ಈ ಬರಹದಲ್ಲಿ ಹೂ ಕೀಳುವಾಗ ನಡೆವ ಸಂಭಾಷಣೆಯನ್ನು ಸಹ ಸೇರಿಸಿದ್ದರೆ ಸೊಗಸು ಇಮ್ಮಡಿಸುತ್ತಿತ್ತು….

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಂಜನಗೂಡು ಸೀಮೆಯ ಕನ್ನಡ | ‘ನಮ್ಮೆಣ್ಣು ಬಾರಿ ಒಳ್ಳೆದು ಕಣ, ಆಸ್ತಿ ಬ್ಯಾಡಾಂತ ಸೈನ್ ಆಕೊಡ್ತದ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...