ಐಐಟಿ ಜೆಇಇ ಪರೀಕ್ಷೆ: ಒಸಿಐ ಮತ್ತು ಪಿಐಒಗಳು ವಿದೇಶಿಗರಲ್ಲ

Date:

  • ಒಸಿಐ ಮತ್ತು ಪಿಐಒಗಳಿಗೆ ಶೇ.10 ಮೀಸಲಾತಿ ಪರಿಗಣನೆ ಇಲ್ಲ
  • ಜೆಇಇ ಪರೀಕ್ಷೆ ಎದುಸಲಿರುವ 2.3 ಲಕ್ಷ ಭಾರತೀಯ ವಿದ್ಯಾರ್ಥಿಗಳು

ಭಾರತೀಯ ತಂತ್ರಜ್ಞಾನ ಸಂಸ್ಥೆಗೆ(ಐಐಟಿ) ಪ್ರವೇಶಾತಿ ಪಡೆಯಲು ಜೆಇಇ ಪರೀಕ್ಷೆ ಎದುರಿಸುವ ಸಾಗರೋತ್ತರ ಭಾರತೀಯ ನಾಗರಿಕರು (ಒಸಿಐ) ಮತ್ತು ಭಾರತೀಯ ಮೂಲದ ವ್ಯಕ್ತಿ (ಪಿಐಒ)ಗಳಿಗೆ ಸಂಬಂಧಿಸಿದಂತೆ ಕೆಲ ನಿಯಮ ಜಾರಿ ಮಾಡಲಾಗಿದೆ. ಈ ಹಿಂದೆ ಒಸಿಐ ಮತ್ತು ಪಿಐಒ ಶೇ.10 ಮೀಸಲಾತಿ ಇತ್ತು ಈಗ ಇದನ್ನು ಹಿಂಪಡೆದಿದ್ದು, ಮಂದಿನ ದಿನಗಳಿಂದ ಅವರನ್ನು ಭಾರತೀಯರು ಎಂದು ಪರಿಗಣಿಸಲಾಗುತ್ತದೆ ಎನ್ನಲಾಗಿದೆ.

ಐಐಟಿ ಪ್ರವೇಶಾತಿಗೆ ಜಿಇಇ ಮುಖ್ಯ ಪರೀಕ್ಷೆ ಎದುರಿಸುವುದು ಕಡ್ಡಾಯವಾಗಿರುತ್ತದೆ. ಆದರೆ, ಸಾಗರೋತ್ತರ ಒಸಿಐ ಮತ್ತು ಪಿಐಒ ಸಮುದಾಯಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಪ್ರಸಕ್ತ ವರ್ಷ ಮಾತ್ರ ಜಿಇಇ (ಮೇನ್) ಪರೀಕ್ಷೆ ಬರೆಯುವ ಅಗತ್ಯವಿಲ್ಲ ಎಂದು  2023 ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಆ ಆದೇಶದ ಆಧಾರದ ಮೇಲೆ, ಐಐಟಿ ಗುವಾಹಟಿ ಪತ್ರಿಕಾ ಹೇಳಿಕೆ ಹೊರಡಿಸಿದೆ. ಒಸಿಐ ಮತ್ತು ಪಿಐಒಗಳನ್ನು ಭಾರತೀಯರು ಎಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ.

ಈ ಸುದ್ದಿ ಓದಿದ್ದೀರಾ?: ಎನ್‌ಸಿಇಆರ್‌ಟಿ ಯಡವಟ್ಟು | 12ನೇ ತರಗತಿಯ ಪಠ್ಯದಿಂದ ಗಾಂಧಿ ಕುರಿತ ಕೆಲ ಉಲ್ಲೇಖಗಳೇ ಮಾಯ!

 ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಇಇ ಸಂಘಟನಾ ಅಧ್ಯಕ್ಷ ಬಿಷ್ಣುಪಾದ ಮಂಡಲ್, “ಪ್ರಸಕ್ತ ವರ್ಷ ಮಾತ್ರ ಪಿಐಒ ಮತ್ತು ಒಸಿಐ ಮೂಲದ ವಿದ್ಯಾರ್ಥಿಗಳು ಜೆಇಇ (ಮೇನ್) ಎದುರಿಸುವ ಅವಶ್ಯಕತೆ ಇಲ್ಲ. ಮುಂಬರುವ ವರ್ಷದ ಬಗ್ಗೆ ಜಂಟಿ ಪ್ರವೇಶ ಮಂಡಳಿ (ಜೆಎಬಿ) ನಿರ್ಧರಿಸುತ್ತದೆ. ಈ ವರ್ಷ ಶೇ.10 ಮೀಸಲಾತಿ ಸಹ ಪರಿಗಣನೆಯಲ್ಲಿ ಇರುವುದಿಲ್ಲ” ಎಂದು ಹೇಳಿದ್ದಾರೆ.

2.3 ಲಕ್ಷ ಭಾರತೀಯ ವಿದ್ಯಾರ್ಥಿಗಳು ಐಐಟಿ ಪರೀಕ್ಷೆ ಎದುರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಎನ್ಇಪಿ ಅಧಿಕೃತವಾಗಿ ರದ್ದಾಗಿದೆಯೇ?’ ಬಗೆಹರಿಯದ ಬಿಕ್ಕಟ್ಟುಗಳು

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು 'ನಾವು ಎನ್‌ಇಪಿ 2020ಯನ್ನು ತಿರಸ್ಕರಿಸಿದ್ದೇವೆ....

ರಾಜ್ಯದಲ್ಲಿ 1,600 ಅಕ್ರಮ ಶಾಲೆಗಳು, ಪಿಯು ಕಾಲೇಜುಗಳಿವೆ: ಸಚಿವ ಮಧು ಬಂಗಾರಪ್ಪ

ರಾಜ್ಯದಲ್ಲಿ 1,600ಕ್ಕೂ ಹೆಚ್ಚು ಶಾಲೆಗಳು ಮತ್ತು ಪಿಯು ಕಾಲೇಜುಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ....

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ಫಲಿತಾಂಶ ಪ್ರಕಟ

ಆಗಸ್ಟ್‌/ಸೆಪ್ಟೆಂಬರ್ 2023ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ಫಲಿತಾಂಶ ಪ್ರಕಟವಾಗಿದ್ದು, karresult.nic.in...

ಸೆ.12 ಸಂಜೆ 4 ಗಂಟೆ ನಂತರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ಫಲಿತಾಂಶ ಪ್ರಕಟ

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ರ ಪರೀಕ್ಷಾ ಮೌಲ್ಯಮಾಪನ ಪೂರ್ಣಗೊಂಡಿದ್ದು, ಸೆ.12...