ಸಿಇಟಿ ಅಭ್ಯರ್ಥಿಗಳಿಗೆ ಆರ್‌ ಡಿ ಸಂಖ್ಯೆ ಸರಿಪಡಿಸಿಕೊಳ್ಳಿ ಎಂದ ಕೆಇಎ

Date:

  • ಜೂನ್‌ 6ರಿಂದ 12ರವರೆಗೆ ಆರ್ ಡಿ ನಂಬರ್ ತಿದ್ದುಪಡಿ ಮಾಡಿ ಎಂದ ಕೆಇಎ
  • ಅಭ್ಯರ್ಥಿಗಳು ನೀಡಿರುವ ಪ್ರಮಾಣ ಪತ್ರಗಳ ಆರ್‌ ಡಿ ಸಂಖ್ಯೆ ಸರಿಪಡಿಸಿಕೊಳ್ಳಿ

ಯುಜಿಸಿಇಟಿ 2023ರ ಪ್ರವೇಶ ಪರೀಕ್ಷೆ ಬರೆದಿರುವ 2.6 ಲಕ್ಷ ಅಭ್ಯರ್ಥಿಗಳ ಪೈಕಿ 80 ಸಾವಿರಕ್ಕೂ ಹೆಚ್ಚು ಮಂದಿ ಆರ್.ಡಿ ಸಂಖ್ಯೆಯನ್ನು ತಪ್ಪಾಗಿ ಅರ್ಜಿಯಲ್ಲಿ ನಮೂದಿಸಿದ್ದು, ಜೂನ್ 7ರಿಂದ 12ರವರೆಗೆ ತಿದ್ದುಪಡಿಗೆ ಕೊನೆಯ ಅವಕಾಶ ನೀಡಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಸುವಾಗ ನಮೂದಿಸಿದ್ದ ಆರ್.ಡಿ ಸಂಖ್ಯೆಯನ್ನು ನೋಡಿ ತಿದ್ದುಪಡಿ ಮಾಡಿ ಎಂದು ಅಭ್ಯರ್ಥಿಗಳಿಗೆ ಸೂಚನೆ ನೀಡಿದೆ.

ಪರಿಶೀಲನೆಯ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಹೆಸರು ಅಥವಾ ನಮೂದಿಸಿರುವ ಜಾತಿ ತಾಳೆಯಾಗದಿರುವುದು, ಪ್ರಮಾಣ ಪತ್ರವು ಚಾಲ್ತಿಯಲ್ಲಿ ಇಲ್ಲದೇ ಇರುವುದು, ಅಭ್ಯರ್ಥಿಗಳ ಹೆಸರಿನಲ್ಲಿ ಪ್ರಮಾಣ ಪತ್ರಗಳು ಇಲ್ಲದೇ ಇರುವುದು ಅಥವಾ ನಿಗದಿತ ನಮೂನೆಗಳಲ್ಲಿ ಪಡೆಯದೇ ಇರುವುದು, ಇನ್ನಿತರ ವಿವಿಧ ಕಾರಣಗಳಿಂದ ಆರ್‌ಡಿ ಸಂಖ್ಯೆಗಳು ತಾಳೆ ಹೊಂದದೇ ತಿರಸ್ಕೃತಗೊಂಡಿರುವ ಅಭ್ಯರ್ಥಿಗಳ ಪಟ್ಟಿ ಮಾಡಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಆರ್‌ ಡಿ ನಂಬರ್‌ ತಿದ್ದುಪಡಿ ಮಾಡಲು ಪಟ್ಟಿಯಲ್ಲಿ ಹೆಸರು ಇರುವಂತಹ ಅಭ್ಯರ್ಥಿಗಳು ಮಾತ್ರ ಜೂನ್‌ 6ರಿಂದ 12ರವರೆಗೆ ಪ್ರಾಧಿಕಾರದ ಪೋರ್ಟಲ್‌ನಲ್ಲಿ ಅಭ್ಯರ್ಥಿಗಳ ಲಾಗಿನ್ ಮತ್ತು ಪಾಸ್‌ವರ್ಡ್ ನಮೂದಿಸಿ ಸರಿಯಾದ ಆರ್‌ಡಿ ಸಂಖ್ಯೆಯನ್ನು ದಾಖಲಿಸಿ ಹಾಗೂ ಇತರೆ ಮಾಹಿತಿಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ ಎಂದು ಹೇಳಿದೆ.

“ಕಳೆದ ಕೆಲವು ದಿನಗಳ ಹಿಂದೆ ವೃತ್ತಿಪರ ಕೋರ್ಸ್‌ಗಳಿಗಾಗಿ ಪ್ರವೇಶಾತಿ ಬಯಸಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದರು. ಅಭ್ಯರ್ಥಿಗಳು ನೀಡಿರುವ ಪ್ರಮಾಣ ಪತ್ರಗಳ ಆರ್‌ ಡಿ ಸಂಖ್ಯೆಯನ್ನು ಸರಿಪಡಿಸಿಕೊಳ್ಳಿ ಇಲ್ಲದಿದ್ದರೇ, ಮೀಸಲಾತಿ ಸೌಲಭ್ಯಗಳು ರದ್ದಾಗಲಿವೆ” ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ದಲಿತರ ನ್ಯಾಯಯುತ ಬೇಡಿಕೆಗಳ ಅನುಷ್ಠಾನಕ್ಕೆ ‍ಸರ್ಕಾರ ಬದ್ಧ, ನಿಮ್ಮ ಋಣ ತೀರಿಸುತ್ತೇವೆ: ಡಿಕೆ ಶಿವಕುಮಾರ್

“ಅಭ್ಯರ್ಥಿಗಳು ಜಾತಿ/ಆದಾಯ/ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರಗಳ ಆರ್.ಡಿ ಸಂಖ್ಯೆಯನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳಿ ಇಲ್ಲದಿದ್ದರೆ, ಮೀಸಲಾತಿ ಸೌಲಭ್ಯ ರದ್ದಾಗಿ ಜನರಲ್ ಮೆರಿಟ್ ಕೋಟಾದಡಿ ಬರಬೇಕಾಗುತ್ತದ. ಹಾಗಾಗಿ, ಕೂಡಲೇ ಕಂದಾಯ ಇಲಾಖೆಯ ಆರ್‌ ಡಿ ಸಂಖ್ಯೆ ಜತೆ ತಾಳೆಯಾಗುವಂತೆ ಸರಿಪಡಿಸಿಕೊಳ್ಳಿ” ಎಂದು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾವೇರಿ ವಿವಾದ | ಬೆಂಗಳೂರು ಬಂದ್‌ಗೆ ಎಫ್‌ಐಟಿಯು ಬೆಂಬಲ: ಅಬ್ದುಲ್ ರಹಿಮಾನ್

ಕಾವೇರಿ ಜಲ ವಿವಾದದ ಹಿನ್ನಲೆಯಲ್ಲಿ ಮಂಗಳವಾರ ನಡೆಯಲಿರುವ ಬೆಂಗಳೂರು ಬಂದ್‌ಗೆ ಫೆಡರೇಶನ್...

ಬೀದರ್‌ | ಪಡಿತರದಲ್ಲಿ ಅಕ್ರಮ; 22 ನ್ಯಾಯಬೆಲೆ ಅಂಗಡಿಗಳ ಅಮಾನತು

ಪಡಿತರ ಮಾರಾಟದಲ್ಲಿ ನಿಗದಿತ ಬೆಲೆಗಿಂತ ಹೆಚ್ಚು ದರ ವಿಧಿಸುವುದು, ಇಲ್ಲವೇ ಬಯೋಮೆಟ್ರಿಕ್‌...

ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ: ತುರ್ತು ವರದಿಗೆ ಬೆಂಗಳೂರು ವಿವಿಗೆ ಹೈಕೋರ್ಟ್‌ ನೋಟಿಸ್‌

ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಹಲವು ಅಕ್ರಮಗಳು ನಡೆದಿದ್ದ ಹಿನ್ನಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು...

ಕಂದಾಯ ಕರ್ಮಕಾಂಡ -3 | ಲಂಚವಿಲ್ಲದೆ ಈ ಇಲಾಖೆಯಲ್ಲಿ ಒಂದು ಕಡತವೂ ಚಲಿಸುವುದಿಲ್ಲ!

'ಇತ್ತೀಚಿನ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಉನ್ನತ ಶ್ರೇಣಿಯಿಂದ ಕೆಳಹಂತದವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ....