ದ್ವಿತೀಯ ಪಿಯುಸಿ | ಪೂರಕ ಪರೀಕ್ಷೆ ಬರೆಯುವವರು ಸಿಇಟಿ ಬರೆಯಲು ಅವಕಾಶ

Date:

  • ಸಿಇಟಿಗೆ ಅರ್ಜಿ ಸಲ್ಲಿಸಲು ಮೇ 2 ಕೊನೆಯ ದಿನ
  • ಸಿಇಟಿಗೆ ಹಾಜರಾದರೆ ಪೂರಕ ಪರೀಕ್ಷೆಯ ಅಂಕ ಪರಿಗಣನೆ

ನಿರೀಕ್ಷೆಗಿಂತ ಕಡಿಮೆ ಫಲಿತಾಂಶ ಗಳಿಸಲಾಗಿದೆ ಎಂದು ಪೂರಕ ಪರೀಕ್ಷೆ ಎದುರಿಸಲಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಹ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಬರೆಯಬಹುದೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಎಸ್‌ಇಎಬಿ)ದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಸ್ಪಷ್ಟಪಡಿಸಿದ್ದಾರೆ.

ಮೇ 20 ಮತ್ತು 21ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ದ್ವಿತೀಯ ಪಿಯುಸಿಯಲ್ಲಿ ನಿರೀಕ್ಷೆಗಿಂತ ಕಡಿಮೆ ಅಂಕಗಳು ಬಂದಿದೆ ಎಂದು ಪೂರಕ ಪರೀಕ್ಷೆ ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ‘ಸಿಇಟಿ’ಗೆ ಹಾಜರಾಗಬೇಕು ಎಂದು ಪಿಯು ಮಂಡಳಿ ಹೇಳಿದೆ.

ಸಿಇಟಿ-2023ಕ್ಕೆ ನೋಂದಣಿ ಮಾಡಿ ಶುಲ್ಕ ಪಾವತಿಸಿರುವ ಎಲ್ಲ ವಿದ್ಯಾರ್ಥಿಗಳಿಗೆ 2023ರ ಮೇ 20 ಮತ್ತು 21ರಂದು ಪರೀಕ್ಷೆ ನಡೆಯಲಿದೆ. ಪರೀಕ್ಷೆ ಎದುರಿಸುವವರಿಗೆ ಮಾತ್ರ, ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ, ಸೀಟು ಹಂಚಿಕೆ ಮಾಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧೀಕಾರ ಹೇಳಿದೆ.

ಈ ಸುದ್ದಿ ಓದಿದ್ದೀರಾ?: ಜೂ.5ರಿಂದ ಸಿಯುಇಟಿ-ಪಿಜಿ ಪರೀಕ್ಷೆ

ಹಿಂದಿನ ವರ್ಷಗಳಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಆಯಾ ವರ್ಷದ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರೆ ಮಾತ್ರ ನಿಯಮಗಳ ಪ್ರಕಾರ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತಿತ್ತು ಎಂಬ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಂಚಿಕೊಂಡಿದೆ.

ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆಯಾದ ದಿನದಿಂದ ನೋಂದಣಿ ಪ್ರಾರಂಭವಾಗಿದ್ದು, ದಂಡವಿಲ್ಲದೆ ಏಪ್ರಿಲ್ 26ರವರೆಗೆ ಅರ್ಜಿ ಸಲ್ಲಿಸಬಹುದಾಗಿತ್ತು. ಇದೀಗ ದಂಡ ಪಾವತಿಯೊಂದಿಗೆ ಏಪ್ರಿಲ್ 27ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಮೇ 2 ಅರ್ಜಿ ಸಲ್ಲಿಕೆಗೆ ಅಂತಿಮ ದಿನವೆಂದು ಕೆಎಸ್‌ಇಎಬಿ ಹೇಳಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಇನ್ಮುಂದೆ ವರ್ಷಕ್ಕೆ ಮೂರು ಪರೀಕ್ಷೆ : ರಾಜ್ಯ ಸರ್ಕಾರದ ನಿರ್ಧಾರ

ಶೈಕ್ಷಣಿಕ ಪ್ರಗತಿ, ಅರ್ಥಪೂರ್ಣ ಕಲಿಕೆ, ಜ್ಞಾನ ಹೆಚ್ಚಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೆಲ...

ಎನ್‌ಇಪಿಯಿಂದ ಕನ್ನಡವನ್ನೇ ಮರೆತುಬಿಡುವ ಅಪಾಯ: ಸಚಿವ ಮಧು ಬಂಗಾರಪ್ಪ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೊಳಿಸುವ ಮೂಲಕ ಹಿಂದಿ ಭಾಷೆ...

ಕೇಂದ್ರ ಸರ್ಕಾರದ ‘ರಗಳೆ’ | ವಿದ್ಯಾರ್ಥಿ ವೇತನಕ್ಕೆ ‘ಕಡ್ಡಾಯ ಬಯೋಮೆಟ್ರಿಕ್’ ಆದೇಶ; ವಿದ್ಯಾರ್ಥಿಗಳು ಸುಸ್ತು!

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ್ದ ಲಕ್ಷಾಂತರ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹಾಗೂ ಸಂಸ್ಥೆಗಳ...

ಶಿವಮೊಗ್ಗ | ಬಿಸಿಯೂಟದ ಜೊತೆ ಮೊಟ್ಟೆ ವಿತರಣೆ; ಆಗಸ್ಟ್‌ 18ರಂದು ಚಾಲನೆ

ರಾಜ್ಯದಲ್ಲಿ ಒಂದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆಯನ್ನು ನೀಡಲಾಗುತ್ತದೆ....