ಜೆಇಇ ಮುಖ್ಯ ಪರೀಕ್ಷೆ: ಬೆಂಗಳೂರಿನ ಮೂವರು ವಿದ್ಯಾರ್ಥಿಗಳಿಗೆ ಶೇ.100 ಅಂಕ

Date:

ದೇಶದಾದ್ಯಂತ ನಡೆದ ಜಂಟಿ ಪ್ರವೇಶ ಪರೀಕ್ಷೆ (ಜೆಇಇ)ಯ ಮುಖ್ಯ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ರಾಜ್ಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

ಐಐಟಿ ಸೇರಿದಂತೆ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಈ ಪರೀಕ್ಷೆ ನಡೆಸಿತ್ತು. ಜೆಇಇ ಮುಖ್ಯ ಪರೀಕ್ಷೆಯಲ್ಲಿ ಕರ್ನಾಟಕದ ಮೂವರು ವಿದ್ಯಾರ್ಥಿಗಳು ನೂರಕ್ಕೆ ನೂರು (ಶೇ.100) ಅಂಕ ಗಳಿಸಿದ್ದಾರೆ.

ಜಯನಗರದ ಅಲೆನ್ ಕರಿಯರ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳಾದ ತನಿಶ್ ಸಿಂಗ್ ಖುರಾನಾ, ಅಖಿಲ ಎಂಬವರು ಭಾರತದಲ್ಲೇ 22ನೇ ಸ್ಥಾನಗಳಿಸಿದ್ದಾರೆ. ರಿಧಿ ಕಮಲೇಶ್ ಕುಮಾರ್, ಮಹೇಶ್ವರಿ ಹಾಗೂ ನಿವೇದ್ ಅಯಿಲ್ಲಿತ್ ನಂಬಿಯಾರ್ ಎಂಬ ವಿದ್ಯಾರ್ಥಿಗಳು ದೇಶದಲ್ಲೇ 23ನೇ ಸ್ಥಾನ ಪಡೆದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜೆಇಇ ಮುಖ್ಯ ಪರೀಕ್ಷೆಯ ನಂತರ ನಡೆಯುವ ಜೆಇಇ ಅಡ್ವಾನ್ಸ್ 2023 ಪರೀಕ್ಷೆ ಜೂನ್ 4 ರಂದು ನಡೆಯಲಿದೆ. ಪರೀಕ್ಷೆಯ ನೋಂದಣಿ ಪ್ರಕ್ರಿಯೆಯು ಏಪ್ರಿಲ್ 30 ರಿಂದ ಪ್ರಾರಂಭವಾಗಲಿದೆ ಎಂದು ಐಐಟಿ ಗುವಾಹಟಿ ಈಗಾಗಲೇ ಪ್ರಕಟಿಸಿದೆ. ಪ್ರತಿ ವರ್ಷ ಅಡ್ವಾನ್ಸ್ಡ್ ಬರೆಯಲು ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆಯು ಮುಖ್ಯ ಶ್ರೇಣಿಯ ಫಲಿತಾಂಶದ ಮರುದಿನದಿಂದ ಪ್ರಾರಂಭವಾಗುತ್ತದೆ ಎಂದು ತಿಳಿಸಿದೆ.

ಈ ಸುದ್ದಿ ಓದಿದ್ದೀರಾ?: ಬೈಜೂಸ್ ಸಿಇಒ ಕಚೇರಿ, ನಿವಾಸದ ಮೇಲೆ ಇ.ಡಿ ದಾಳಿ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಶತಮಾನದ ಶಾಲೆಗೆ ಗತವೈಭವ ಮರಳಿ ತಂದ ಯುವಕರ ಗುಂಪು

ತಾವು ಕಲಿತಾ ಸರ್ಕಾರಿ ಶಾಲೆ ಶತಮಾನೋತ್ಸವ ಆಚರಿಸಿಕೊಂಡು ಆರು ವರ್ಷಗಳೇ ಕಳೆದಿವೆ....

ಎಮ್‌ಎಇಎಫ್‌ ಮುಚ್ಚಲು ಕೇಂದ್ರ ಆದೇಶ; ಶಿಕ್ಷಣ ತಜ್ಞರ ಖಂಡನೆ

“ಪಂಡಿತ್ ಜವಾಹರಲಾಲ್ ನೆಹರು ಅವರ ಸಂಪುಟದಲ್ಲಿ ಸ್ವತಂತ್ರ ಭಾರತದ ಮೊದಲ ಶಿಕ್ಷಣ...