2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಉಡುಪಿ ಜಿಲ್ಲೆಗೆ 2ನೇ ಸ್ಥಾನ ಲಭಿಸಿದೆ. ಕೊಡಗು 3, ಉತ್ತರ ಕನ್ನಡ 4, ಯಾದಗಿರಿ ಕೊನೆಯ ಸ್ಥಾನದಲ್ಲಿದೆ.
ಮೂರು ವಿಭಾಗಗಳಿಂದ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳು
ಕಲಾ ವಿಭಾಗದಲ್ಲಿ ಬೆಂಗಳೂರು ವಿದ್ಯಾರ್ಥಿ ತಬಸ್ಸಮ್ ಶೇಖ್ 600ಕ್ಕೆ 593 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನದಲ್ಲಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಅನನ್ಯಾ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ವಿಜ್ಞನಾ ಕೌಶಿಕ್ 600ಕ್ಕೆ 596 ಅಂಕಗಳನ್ನು ಗಳಿಸಿ ಮೊದಲನೇ ಸ್ಥಾನದಲ್ಲಿದ್ದಾರೆ.
ಜಿಲ್ಲಾವಾರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ಪಟ್ಟಿ
ಕಲಾ ವಿಭಾಗ
ಬೆಂಗಳೂರಿನ ಎನ್‌ಎಂಕೆಆರ್‍ವಿ ಮಹಿಳಾ ಪಿಯು ಕಾಲೇಜಿನ ವಿದ್ಯಾರ್ಥಿನಿ ತಬಸ್ಸುಮ್ ಶೇಖ್ 593 ಅಂಕ ಗಳಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ವಿದ್ಯಾರ್ಥಿ ಕುಶ ನಾಯ್ಕ್ ಜಿಎಲ್ 592 ಅಂಕಗಳನ್ನು ಗಳಿಸಿದ್ದಾರೆ. ದಡ್ಡಿ ಕರಿ ಬಸ್ಸಮ್ಮ 592 ಅಂಕಗಳನ್ನು ಗಳಿಸಿದ್ದಾರೆ. ಬೆಳಗಾವಿಯ ಸರ್ಕಾರಿ ಪಿಯು ಕಾಲೇಜಿನ ಸಹನಾ 600ಕ್ಕೆ 591 ಅಂಕ ಪಡೆದು ಮೂರನೇ ರ‍್ಯಾಂಕ್. ಒಟ್ಟಾರೆಯಾಗಿ ಕಲಾ ವಿಭಾಗದಲ್ಲಿ 10 ವಿದ್ಯಾರ್ಥಿಗಳು 591 ರಿಂದ 593 ಅಂಗಳನ್ನು ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ದ್ವಿತೀಯ ಪಿಯುಸಿ ಫಲಿತಾಂಶ | ಕಲಾ ವಿಭಾಗದಲ್ಲಿ ತಬಸ್ಸುಮ್ ರಾಜ್ಯಕ್ಕೆ ಪ್ರಥಮ
ವಾಣಿಜ್ಯ ವಿಭಾಗ
ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಅನನ್ಯ ವಾಣಿಜ್ಯ ವಿಭಾಗದಲ್ಲಿ600ಕ್ಕೆ 600 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಶಿವಮೊಗ್ಗದ ಅನ್ವಿತಾ 596 ಅಂಕ ಗಳಿಸಿದ್ದಾರೆ. ಬೆಂಗಳೂರು ಕಾಲೇಜಿನ ವಿದ್ಯಾರ್ಥಿನಿ ಛಾಯ ರವಿ ಕುಮಾರ್ 596 ಅಂಕ ಗಳಿಸಿದ್ದಾರೆ . ಒಟ್ಟಾರೆಯಾಗಿ ವಾಣಿಜ್ಯ ವಿಭಾಗದಲ್ಲಿ 23 ವಿದ್ಯಾರ್ಥಿಗಳು 595ರಿಂದ 600ರವರೆಗೂ ಅಂಕಗಳನ್ನು ಗಳಿಸಿದ್ದಾರೆ.
ವಿಜ್ಞಾನ ವಿಭಾಗ
ಕೋಲಾರದ ವಿದ್ಯಾರ್ಥಿ ಎಸ್ ಎಂ ಕೌಶಿಕ್ 596 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸುರಭಿ ಎಸ್ ಬೆಂಗಳೂರಿನ ವಿದ್ಯಾರ್ಥಿ 596 ಅಂಕ ಗಳಿಸಿದ್ದಾರೆ. ಉಡುಪಿಯ ಸಾತ್ವಿಕ್ ಪದ್ಮನಾಭ ಭಟ್ 594 ಅಂಕ ಗಳಿಸಿದ್ದಾರೆ. ಬೆಂಗಳೂರು ವಿದ್ಯಾರ್ಥಿ ಕಟ್ಟೋಜು ಜೈಶಿಕ್ 600ಕ್ಕೆ 595 ಅಂಕ ಗಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ. ಒಟ್ಟಾರೆಯಾಗಿ ವಿಜ್ಞಾನ ವಿಭಾಗದಲ್ಲಿ 20 ವಿದ್ಯಾರ್ಥಿಗಳು 600ರ ಆಸುಪಾಸಿನಲ್ಲಿ ಅಂಕ ಗಳಿಸಿದ್ದಾರೆ.
ವಿಭಾಗವಾರು ಫಲಿತಾಂಶ
ಕಲಾ ವಿಭಾಗಕ್ಕೆ ಶೇ.61.22 ಫಲಿತಾಂಶ ದಕ್ಕಿದ್ದು, ವಾಣಿಜ್ಯ ವಿಭಾಗದಲ್ಲಿ ಶೇ.75.89 ಫಲಿತಾಂಶ ಬಂದಿದೆ. ಇನ್ನೂ ವಿಜ್ಞಾನದಲ್ಲಿ ವಿಭಾಗದಲ್ಲಿ ಶೇ.85.71 ಫಲಿತಾಂಶ ಗಳಿಸಲಾಗಿದೆ.
ಕಲಿಕಾ ಮಾಧ್ಯಮವಾರು ಫಲಿತಾಂಶ
ಕನ್ನಡ ಮಾಧ್ಯಮದಲ್ಲಿ 2,87,727 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,83,221 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ 4,14,034 ಮಂದಿ ಪರೀಕ್ಷೆ ಬರೆದಿದ್ದು, 3,40,988 ವಿದ್ಯಾರ್ಥಿಗಳು ಪಾಸಾಗಿದ್ದಾರೆ.