ಈದಿನ ಜನಾಭಿಮತ

ಈ ಜನಾಭಿಮತದಲ್ಲಿ ನೀವೂ ಪಾಲ್ಗೊಳ್ಳಿ. ನಿಮ್ಮ ಮತ ಚಲಾಯಿಸಲು ಈ ಬರಹವನ್ನು ಓದಿದ ನಂತರ ಕೆಳಗೆ ‘ಸ್ಕ್ರೋಲ್‌’ ಮಾಡಿ
ಕರ್ನಾಟಕದಲ್ಲಿ ಚುನಾವಣೆ ಮುಗಿದು ಸರಿಯಾಗಿ ಐದು ತಿಂಗಳು ಕಳೆದಿವೆ. ಅಂದರೆ ಇನ್ನೊಂದು ತಿಂಗಳು ಕಳೆದರೆ ಹೊಸ ವಿಧಾನಸಭೆಯ ಮೊದಲ ವರ್ಷದ ಅರ್ಧ ಭಾಗ ಮುಗಿದಿರುತ್ತದೆ. ಆದರೆ ಪ್ರಧಾನ ವಿರೋಧ ಪ್ರಕ್ಷವಾಗಿರುವ ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನನ್ನು ಆರಿಸಿಲ್ಲ. ದೇಶದ ಚರಿತ್ರೆಯಲ್ಲಿ ಹೀಗಾಗುತ್ತಿರುವುದು ಇದೇ ಮೊದಲು. ʼಲೋಕಸಭೆಯಲ್ಲೂ ವಿರೋಧ ಪಕ್ಷದ ನಾಯಕನಿಲ್ಲ, ಏನಾಯಿತೀಗ?ʼ ಎನ್ನುವಂತೆ ಬಿಜೆಪಿಯ ಕೆಲ ನಾಯಕರು ಅಸಂಬದ್ಧ ಸಮರ್ಥನೆ ನೀಡುತ್ತಿದ್ದಾರೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರ ಆಯ್ಕೆ ಆಗಿದೆ. ಸರಕಾರ ಆ ನಾಯಕರಿಗೆ ತಾಂತ್ರಿಕ ಕಾರಣಕ್ಕೆ ಅಧಿಕೃತ ಸ್ಥಾನಮಾನ ನೀಡಿಲ್ಲ. ಅದಿರಲಿ, ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ಇರುವುದು ಬಿಜೆಪಿ ಜನಾಭಿಮತಕ್ಕೆ ಬಿಜೆಪಿ ಬಗೆಯುವ ದ್ರೋಹ. ಮತದಾರರು ಬಿಜೆಪಿಯನ್ನು ಸೋಲಿಸಿದರೂ 66 ಸ್ಥಾನಗಳನ್ನು ನೀಡಿದ್ದು ಯಾಕೆಂದರೆ, ಆ ಪಕ್ಷ ಪ್ರಧಾನ ವಿರೋಧ ಪಕ್ಷವಾಗಿ ಕಾರ್ಯವೆಸಗಬೇಕು ಎನ್ನುವುದು ಅವರ ಅಭಿಮತವಾಗಿತ್ತು. ಇಲ್ಲದೆ ಹೋಗಿದ್ದರೆ, ಬಿಜೆಪಿಯನ್ನು ಮೂರನೆಯ ಸ್ಥಾನಕ್ಕಿಳಿಸಿ ಕುಮಾರಸ್ವಾಮಿ ಮತ್ತು ದೇವೇಗೌಡರ ಜನತಾದಳಕ್ಕೆ ಎರಡನೆಯ ಸ್ಥಾನ ನೀಡುತ್ತಿದ್ದರು. ಮುಖ್ಯಮಂತ್ರಿಯನ್ನು ಹೊಂದುವುದು ಹೇಗೆ ಜನರ ಹಕ್ಕು ಆಗುತ್ತದೋ ಹಾಗೇನೇ ವಿರೋಧ ಪಕ್ಷದ ನಾಯಕನನ್ನು ಹೊಂದುವುದು ಕೂಡ ಜನರ ಪ್ರಜಾಸತ್ತಾತ್ಮಕ ಹಕ್ಕು. ಅದನ್ನು ನಿರಾಕರಿಸುವುದು ನೈತಿಕವಾಗಿಯೂ, ಕಾನೂನಾತ್ಮಕವಾಗಿಯೂ ತಪ್ಪು. ಬಿಜೆಪಿಗೆ ನೈತಿಕತೆ ಮತ್ತು ಕಾನೂನು ಎರಡೂ ಮುಖ್ಯವಲ್ಲದೆ ಇರಬಹುದು, ಆದರೆ ರಾಜ್ಯದ ಜನ ತೀವ್ರ ಬರ ಎದುರಿಸುತ್ತಿದ್ದಾರೆ, ಹೊಸ ಸರಕಾರ ಬಂದರೂ ಭ್ರಷ್ಟಾಚಾರದ ವಾಸನೆ ಇನ್ನೂ ತೊಲಗಿಲ್ಲ, ಸಾಲದ್ದಕ್ಕೆ ಮಹಿಷಾಸುರ ದಸರಾಕ್ಕೆ ವಿರೋಧ ಮುಂತಾದ ವಿವಾದಗಳು ಸಾಮಾಜಿಕ ಘರ್ಷಣೆಗೆ ಕಾರಣವಾಗಿಬಿಡಬಹುದೋ ಎನ್ನುವ ಮಟ್ಟಕ್ಕೆ ಸುದ್ದಿ ಮಾಡುತ್ತಿವೆ. ಇವೆಲ್ಲದರ ಬಗ್ಗೆ ವಿರೋಧ ಪಕ್ಷದ ಅಧಿಕೃತ ನಿಲುವು ಏನು ಎನ್ನುವುದೇ ರಾಜ್ಯದ ಜನರಿಗೆ ತಿಳಿಯದಾಗಿದೆ. ಬಿಜೆಪಿಯ ಸಣ್ಣಪುಟ್ಟ ನಾಯಕರೆಲ್ಲಾ ಬಾಯಿಗೆ ಬಂದಂತೆ ಮಾತನಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಆದುದರಿಂದ ಕರ್ನಾಟಕ ರಾಜ್ಯದ ಜನರ ಪ್ರಜಾಸತ್ತಾತ್ಮಕ ಹಕ್ಕನ್ನು ಎತ್ತಿ ಹಿಡಿಯಲು ಈದಿನ.ಕಾಮ್‌ ಹೀಗೊಂದು ಪ್ರಯತ್ನ ಮಾಡುತ್ತಿದೆ. ಬಿಜೆಪಿ ವಿರೋಧ ಪಕ್ಷವಾಗಿ ತನ್ನ ಕರ್ತವ್ಯ ಮಾಡದಿರಬಹುದು. ಆದರೆ ‘ಈದಿನ’ ಜವಾಬ್ದಾರಿಯುತ ಮಾಧ್ಯಮವಾಗಿ ತನ್ನ ಕರ್ತವ್ಯ ನಿರ್ವಹಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಪ್ರಯತ್ನ.
ಇನ್ನು ಈ ಕೆಳಗಿನ ಎಣಿಕೆ (Poll)ಯಲ್ಲಿ ನೀವು ಪಾಲ್ಗೊಂಡು, ನಿಮ್ಮ ಅಭಿಮತವನ್ನು ದಾಖಲಿಸಬೇಕಾಗಿ ವಿನಂತಿ.

ಕರ್ನಾಟಕ ರಾಜ್ಯದಲ್ಲಿ ಪ್ರಧಾನ ವಿರೋಧ ಪಕ್ಷವಾಗಿರುವ ಬಿಜೆಪಿ ಈ ತನಕ ಅಧಿಕೃತ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದಿರಲು ಕಾರಣ
ಸೂಕ್ತ ಹೆಸರನ್ನು ಇಲ್ಲಿ ಆಯ್ಕೆ ಮಾಡಿ
‘ಈದಿನ’ ವಿರೋಧ ಪಕ್ಷದ ನಾಯಕನನ್ನು ಈ ವಿಶಿಷ್ಟ ವಿಧಾನದಿಂದ ಆಯ್ಕೆ ಮಾಡುತ್ತಿರುವುದರ ಬಗ್ಗೆ ತಮ್ಮ ಅಭಿಪ್ರಾಯವೇನು?