ಚುನಾವಣೆ 2023 | ಕಣದಲ್ಲಿ ‘ಕಲಿ’ಗಳು – ಜಾಲತಾಣದಲ್ಲಿ ‘ಸೈಬರ್ ವಾರಿಯರ್‌’ಗಳ ಸಮರ

Date:

ಕಳೆದ ಐದು ವರ್ಷಗಳಲ್ಲಿ ಒಮ್ಮೆಯೂ ಕೆಲವು ಹಳ್ಳಿಗಳತ್ತ ನೋಡದ ಜನಪ್ರತಿನಿಧಿಗಳು, ಅಭ್ಯರ್ಥಿಗಳು ಈಗ ಹಳ್ಳಿಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ತಲುಪಲಾಗದ ಹಳ್ಳಿಗಳಿಗೆ 'ಸೈಬರ್‌ ವಾರಿಯರ್‌'ಗಳನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮಗಳ ಮೂಲಕ ತಲುಪಲು ಯತ್ನಿಸುತ್ತಿದ್ದಾರೆ. ಕಣದಲ್ಲಿ ಕಲಿಗಳು, ಜಾಲತಾಣದಲ್ಲಿ ಸೈಬರ್ ವಾರಿಯರ್ ಗಳು ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದಾರೆ. 

ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳಷ್ಟೇ ಬಾಕಿ ಇದೆ. ಗೆಲ್ಲಲೇಬೇಕೆಂಬ ಧಾವಂತದಲ್ಲಿರುವ ರಾಜಕೀಯ ಪಕ್ಷಗಳ ನಾಯಕರು ಬಿಸಿಲಿನ ಬೇಗೆಯನ್ನೂ ಲೆಕ್ಕಿಸದೇ ಪ್ರಚಾರದಲ್ಲಿ ನಿರತರಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಒಮ್ಮೆಯೂ ಕೆಲವು ಹಳ್ಳಿಗಳತ್ತ ತಿರುಗಿಯೂ ನೋಡದ ಜನಪ್ರತಿನಿಧಿಗಳು, ಅಭ್ಯರ್ಥಿಗಳು ಎಲ್ಲ ಹಳ್ಳಿಗಳನ್ನು ಸುತ್ತಲು ಯತ್ನಿಸುತ್ತಿದ್ದಾರೆ. ಅವರು ತಲುಪಲಾಗದ ಪ್ರದೇಶಗಳನ್ನು ‘ಸೈಬರ್‌ ವಾರಿಯರ್‌’ಗಳನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮಗಳ ಮೂಲಕ ತಲುಪಲು ಯತ್ನಿಸುತ್ತಿದ್ದಾರೆ. ಅಂತಹ ಸೋಷಿಯಲ್ ಮೀಡಿಯಾ ಪರಾಕ್ರಮಿಗಳು ರಾತ್ರೋರಾತ್ರಿ ತಮ್ಮದೇ ರೀತಿಯ ನಿರೂಪಣೆಗಳನ್ನು ಸೃಷ್ಟಿಸುತ್ತಿದ್ದಾರೆ. ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿಯೂ ಅಂತರ್ಜಾಲದ ಬಳಕೆ ಹೆಚ್ಚಾಗಿರುವುದರಿಂದ ಆ ಪ್ರದೇಶಗಳ ಮತದಾರರ ಮೊಬೈಲ್‌ಗಳಲ್ಲಿ ತಮ್ಮ, ತಮ್ಮ ಪಕ್ಷದ ಹೆಸರು, ಚಿತ್ರಗಳು ಪ್ರತಿದಿನ ಕಾಣಸಿಗುವಂತೆ ಮಾಡುವ ಪ್ರಯತ್ನಗಳನ್ನು ಎಲ್ಲ ಸ್ಪರ್ಧಿಗಳು ಮತ್ತು ಸ್ಪರ್ಧಾಕಾಂಕ್ಷಿಗಳು ಮಾಡುತ್ತಿದ್ದಾರೆ. ಅದಕ್ಕಾಗಿ, ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ತಮ್ಮದೇ ಆದ ‘ಸೈಬರ್‌ವಾರಿಯರ್‌’ಗಳ ತಂಡಗಳನ್ನು ಕಟ್ಟಿಕೊಂಡಿವೆ. ಆ ತಂಡಗಳು ವೃತ್ತಿಪರರು ಮತ್ತು ಸ್ವಯಂಸೇವಕರನ್ನು ಹೊಂದಿದ್ದು, ಪಕ್ಷದ ನಾಯಕರೊಂದಿಗೆ ಚರ್ಚಿಸಿ ಕೆಲಸ ಮಾಡುತ್ತಿವೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಕ್ರಮವಾಗಿ 18-20 ಮತ್ತು 25-30 ಸದಸ್ಯರ ತಂಡವನ್ನು ಹೊಂದಿವೆ. ಬಿಜೆಪಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ತಂಡಗಳನ್ನು ರಚಿಸಿಕೊಂಡಿದೆ. ಮಾತ್ರವಲ್ಲದೆ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಮೀಸಲಾದ ತಂಡವನ್ನು ನಿಯೋಜಿಸಿದೆ. ಹಿಂದುತ್ವ, ಮುಸ್ಲಿಂ ವಿರೋಧಿ ಅಂಶಗಳನ್ನು ಜನರ ತಲೆಯಲ್ಲಿ ತುಂಬಲು ನಿರಂತರ ಪ್ರಯತ್ನದಲ್ಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಜ್ಯಾದ್ಯಂತ ಬಿಜೆಪಿ 10 ಸಾಮಾಜಿಕ ಜಾಲತಾಣ ವಿಭಾಗಗಳನ್ನು ರಚಿಸಿದೆ. ಪ್ರತಿ ಜಿಲ್ಲೆಯಲ್ಲಿ ಡಿಜಿಟಲ್ ಮಾಧ್ಯಮ ಸಮಾವೇಶಗಳನ್ನು ನಡೆಸುತ್ತಿದೆ. ಆ ಮೂಲಕ ತಮ್ಮ ಸಿದ್ಧಾಂತಗಳನ್ನು ಪ್ರಚಾರ ಮಾಡಲು ಎಗ್ಗಿಲ್ಲದೆ ಶ್ರಮಿಸುತ್ತಿದೆ.

“ನಮ್ಮ ಅಭಿಯಾನವು ನಮ್ಮ ಸರ್ಕಾರದ ಸಾಧನೆಗಳು ಮತ್ತು ಅಭಿವೃದ್ಧಿಯ ದೃಷ್ಟಿಕೋನದ ಮೇಲೆ ಕೇಂದ್ರೀಕೃತವಾಗಿದೆ. ನಾವು ಇತರ ಪಕ್ಷಗಳು ಅಥವಾ ನಾಯಕರ ಮೇಲೆ ದಾಳಿ ಮಾಡುವುದನ್ನು ನಿರ್ಲಕ್ಷಿಸುತ್ತೇವೆ. ನಾವು ಕಾಂಗ್ರೆಸ್‌ಗಿಂತ ಮೂರು ಪಟ್ಟು ಹೆಚ್ಚು ಮತ್ತು ಜೆಡಿಎಸ್‌ಗಿಂತ 10 ಪಟ್ಟು ಹೆಚ್ಚು ಜನರನ್ನು ತಲುಪುತ್ತಿದ್ದೇವೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ರಾಜ್ಯದ ಟಾಪ್ 10 ರಾಜಕಾರಣಿಗಳಲ್ಲಿ ಆರು ಮಂದಿ ಬಿಜೆಪಿಯವರಾಗಿದ್ದಾರೆ,” ಎಂದು ಬಿಜೆಪಿಯ ರಾಜ್ಯ ಡಿಜಿಟಲ್ ಮೀಡಿಯಾ ಘಟಕದ ಮುಖ್ಯಸ್ಥ ವಿಕಾಸ್ ಪುತ್ತೂರು ಹೇಳಿದ್ದಾರೆ.

ಕಾಂಗ್ರೆಸ್‌ ಈಗ ಸಮರ್ಥಿಸಿಕೊಳ್ಳುವ ಪರಿಸ್ಥಿತಿಯಲ್ಲೇ ಇಲ್ಲ. ಆದರೆ ಭಾರೀ ಆಕ್ರಮಣಕಾರಿ ಮಾರ್ಗದಲ್ಲಿ ಮುನ್ನುಗ್ಗುತ್ತಿದೆ. ಬಿಜೆಪಿ ಸರ್ಕಾರದ ವಿರುದ್ಧ ‘40% ಸರ್ಕಾರ’, ‘ಪೇಸಿಎಂ’, ‘ಹಗರಣಗಳ ವಿರುದ್ಧ ದನಿ’ ಮತ್ತು ‘ಕಿವಿಗೆ ಹೂವ’ದಂತಹ ಅಭಿಯಾನಗಳು ಹಾಗೂ ಅವುಗಳನ್ನು ಜನರಿಗೆ ತಿಳಿಸುವ ರೀತಿಯಲ್ಲಿ ಪಕ್ಷ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

“ನಮ್ಮ ತಂಡವು ಬಿಜೆಪಿ ಮತ್ತು ಅದರ ಟ್ರೋಲ್ ಆರ್ಮಿಗಳ ನಿರೂಪಣೆಗಳು ಮತ್ತು ಸಿದ್ಧಾಂತಗಳನ್ನು ಬಯಲಿಗೆಳೆಯುತ್ತಿದೆ. ನಾವು ಸರ್ಕಾರದ ಭ್ರಷ್ಟಾಚಾರವನ್ನು ಬಹಿರಂಗಪಡಿಸುತ್ತಿದ್ದೇವೆ. ಅಲ್ಲದೆ, ನಮ್ಮ ಪೋಸ್ಟ್‌ಗಳು ಸತ್ಯ ಮತ್ತು ಅಂಕಿಅಂಶಗಳನ್ನು ಒಳಗೊಂಡಿವೆ. ಆ ಬಗ್ಗೆ ಹಲವು ಸುತ್ತಿನ ಪರಿಶೀಲನೆಗಳೂ ನಡೆಯುತ್ತಿವೆ. ಜನರಲ್ಲಿ ಅರಿವನ್ನೂ ಮೂಡಿಸುವಂತಹ ರೀತಿಯಲ್ಲಿ ನಮ್ಮ ಪೋಸ್ಟರ್‌ಗಳನ್ನು ಸಿದ್ಧಗೊಳಿಸುತ್ತಿದ್ದೇವೆ. ಅವೆಲ್ಲವು ಜನರನ್ನು ತಲುಪುತ್ತಿವೆ” ಎಂದು ಖರ್ಗೆ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ಔರಾದ್‌ನಲ್ಲಿ ‘ಪ್ರಭು’ ಮಣಿಸಲು ಕಾಂಗ್ರೆಸ್ ಕಸರತ್ತು; ಬಗೆಹರಿಯದ ಟಿಕೆಟ್ ಕಗ್ಗಂಟು

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಜನಸಾಮಾನ್ಯರನ್ನು ತಲುಪುವಲ್ಲಿ ಜೆಡಿಎಸ್ ಹಿಂದೆಂದಿಗಿಂತಲೂ ಹೆಚ್ಚು ಗಮನಹರಿಸುತ್ತಿದೆ. ಅದಕ್ಕಾಗಿ, ಸಾಮಾಜಿಕ ಜಾಲತಾಣಗಳನ್ನು ಬಲ್ಲ ಯುವಜನರ ಗುಂಪನ್ನು ಕಟ್ಟಿಕೊಂಡಿದೆ. ಜೊತೆಗೆ, ತಜ್ಞರನ್ನು ನೇಮಿಸಿಕೊಂಡು ತರಬೇತಿ ನೀಡುತ್ತಿದೆ.

“ಈ ಬಾರಿ ನಾವು ಹೆಚ್ಚು ಸಂಘಟಿತರಾಗಿದ್ದೇವೆ. ನಮ್ಮ ತಂಡ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ. ನಾವು ಎಲ್ಲ ಅಭ್ಯರ್ಥಿಗಳ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ರಚಿಸುತ್ತಿದ್ದೇವೆ. ಎಲ್ಲ ಕ್ಷೇತ್ರಗಳ ನಿರ್ದಿಷ್ಟ ಸಮಸ್ಯೆಗಳಿಗೆ ಸಂಬಂಧಿಸಿದ ಪೋಸ್ಟ್‌ಗಳ ಸಿದ್ದಪಡಿಸುವುದರ ಮೇಲೆ ನಾವು ಗಮನ ಹರಿಸುತ್ತಿದ್ದೇವೆ” ಎಂದು ವಿಧಾನ ಪರಿಷತ್‌ ಜೆಡಿಎಸ್‌ ಸದಸ್ಯ, ಪಕ್ಷದ ಸಾಮಾಜಿಕ ಜಾಲತಾಣದ ಉಸ್ತುವಾರಿ ಕೆ.ಎ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

“ಇತರ ಪಕ್ಷಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸಿದ್ಧಾಂತಗಳನ್ನು ಹರಿಬಿಡುತ್ತಿವೆ. ನಾವು ಈ ನೆಲ, ಜಲ ಮತ್ತು ಕನ್ನಡ ಮತ್ತು ಕನ್ನಡಿಗರ ಅಸ್ಮಿತೆಗೆ ಸಂಬಂಧಿಸಿದ ವಿಷಯಗಳನ್ನು ಆದ್ಯತೆಯಾಗಿ ತೆಗೆದುಕೊಂಡಿದ್ದೇವೆ,” ಎಂದು ತಿಪ್ಪೇಸ್ವಾಮಿ ಹೇಳಿದರು.

ಅಂತೂ, ಈ ಬಾರಿಯ ಚುನಾವಣೆ ಎಂಬ ರಣರಂಗದಲ್ಲಿ ಕಲಿಗಳು ಮತದಾರರನ್ನು ಖುದ್ದಾಗಿ ಕಂಡು ಮನವೊಲಿಸುವ ಕಾಯಕದಲ್ಲಿ ನಿರತರಾದರೆ, ಅಜ್ಞಾತ ಸ್ಥಳದಲ್ಲಿ ಕೂತ ಸೈಬರ್ ವಾರಿಯರ್ ಗಳು ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರ ಮೇಲೆ ಮುಗಿಬೀಳಲು ಹೊಸ ನಿರೂಪಣೆಗಳ ಸೃಷ್ಟಿಯಲ್ಲಿ ನಿರತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಸಿಲ ಧಗೆಗೆ ಬೆಂದ ಜನರಿಗೆ ತಂಪೆರೆದ ಮಳೆ: ಶನಿವಾರ ಬೆಳಿಗ್ಗೆ ರಾಜ್ಯದ ಹಲವೆಡೆ ಮಳೆ

ತಾಪಮಾನ ಹೆಚ್ಚಳದಿಂದ ಬಸವಳಿದ್ದಿದ್ದ ರಾಜ್ಯದ ಜನತೆಗೆ ತಡವಾಗಿ ಆರಂಭವಾದ ಪೂರ್ವ ಮುಂಗಾರು...

ಮಹಿಳೆಯರಿಗೆ 2,000 ಕೊಡ್ತಿದ್ದಾರೆ; ಗಂಡಸ್ರು ದುಡಿಮೆಯ 90% ಕುಡಿಯುತ್ತಿದ್ದಾರೆ: ಎಚ್‌ಡಿಕೆ

ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾತನಾಡುವ ಮೂಲಕ ಮಾಜಿ ಮುಖ್ಯಮಂತ್ರಿ, ಮಂಡ್ಯ ಲೋಕಸಭಾ...

ಮೊದಲ ಹಂತದ ಚುನಾವಣೆ | 2019ಕ್ಕಿಂತ ಕುಸಿದ ಮತದಾನ; ಬಿಜೆಪಿಗೆ ಸೋಲಿನ ಆತಂಕ?

ಮನುವಾದಿ, ಫ್ಯಾಸಿಸ್ಟ್‌ ಆಡಳಿತದ ವಿರುದ್ಧ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿನ ಹೋರಾಟವೆಂದೇ...

ನನ್ನ ಮಗನಿಗೆ ತಕ್ಕ ಶಿಕ್ಷೆ ಆಗಲಿ; ಆದ್ರೆ ಇಬ್ಬರೂ ಪ್ರೀತಿ ಮಾಡ್ತಿದ್ದರು ಎಂಬುದು ಸತ್ಯ: ಕಣ್ಣೀರಿಟ್ಟ ಫಯಾಜ್‌ ತಾಯಿ ಮುಮ್ತಾಜ್

ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ...