ಚುನಾವಣೆ 2023 | ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಘೋಷಿತ ಆಸ್ತಿ ಮೌಲ್ಯ ₹1,414 ಕೋಟಿ

Date:

ಕೆಪಿಸಿಸಿ ಆಧ್ಯಕ್ಷ ಡಿಕೆ ಶಿವಕುಮಾರ್‌ ಅವರು ರಾಮನಗರ ಜಿಲ್ಲೆಯ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಸೋಮವಾರ ಅವರು ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ. ಅವರು ಕುಟುಂಬವು ಒಟ್ಟು ₹1,414 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ ಎಂದು ಹೇಳಿಕೊಂಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಅವರ ಕುಟುಂಬದ ಆಸ್ತಿ ಮೌಲ್ಯ ₹1,162 ಕೋಟಿಗಳಷ್ಟು ಏರಿಕೆಯಾಗಿದೆ.

ಡಿಕೆ ಶಿವಕುಮಾರ್ ಅವರ ಹೆಸರಿನಲ್ಲಿಯೇ ಒಟ್ಟು ₹1,214 ಕೋಟಿ ಮೌಲ್ಯದ ಆಸ್ತಿ ಇದೆ. ಅವರ ಪತ್ನಿ ಉಷಾ ಅವರ ಹೆಸರಿನಲ್ಲಿ ₹153.30 ಕೋಟಿ ಮೌಲ್ಯದ ಆಸ್ತಿ ಇದೆ. ಜೊತೆಗೆ, ಅವರ ಮಗ ಆಕಾಶ್ ಹೆಸರಿನಲ್ಲಿ ₹66 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಡಿಕೆ ಶಿವಕುಮಾರ್ ಬಳಿ ₹244.93 ಕೋಟಿ ಮತ್ತು ಪತ್ನಿ ಬಳಿ ₹20.30 ಕೋಟಿ ಹಾಗೂ ಪುತ್ರನ ಬಳಿ ₹12.99 ಕೋಟಿ ಮೌಲ್ಯದ ಚರಾಸ್ತಿ ಇದೆ. ಅಲ್ಲದೆ, ಡಿಕೆ ಶಿವಕುಮಾರ್ ಬಳಿ ₹970 ಕೋಟಿ, ಪತ್ನಿ ಬಳಿ ₹113.38 ಕೋಟಿ ಹಾಗೂ ಪುತ್ರನ ಬಳಿ ₹54.33 ಕೋಟಿ ಸ್ಥಿರಾಸ್ತಿ ಇದೆ ಎಂದು ಹೇಳಿದ್ದಾರೆ.

ಡಿಕೆ ಶಿವಕುಮಾರ್ 2.184 ಕೆ.ಜಿ ಚಿನ್ನ, 12.600 ಕೆ.ಜಿ ಬೆಳ್ಳಿ, 1.066 ಕೆ.ಜಿ ಚಿನ್ನಾಭರಣ, 324 ಗ್ರಾಂ ಡೈಮಂಡ್, 111 ಗ್ರಾಂ ರೂಬಿಗಳು, 195 ಗ್ರಾಂ ವಜ್ರ ಹೊಂದಿದ್ದಾರೆ. ಅವರ ಪತ್ನಿ ಬಳಿ 2.600 ಕೆ.ಜಿ ಚಿನ್ನ, 20 ಕೆ.ಜಿ ಬೆಳ್ಳಿ ಇದ್ದರೆ, ಮಗನ ಹೆಸರಿನಲ್ಲಿ 675 ಗ್ರಾಂ ಚಿನ್ನವಿದೆ. ಮಗಳ ಹೆಸರಿನಲ್ಲಿ 675 ಗ್ರಾಂ ಚಿನ್ನವಿದೆ ಎಂದು ಘೋಷಿಸಿದ್ದಾರೆ. ಅಲ್ಲದೆ, ತಮ್ಮ ಬಳಿ ₹23 ಲಕ್ಷ ಮೌಲ್ಯದ ಯೂಬ್ಲೇಟ್ ವಾಚ್, ₹9 ಲಕ್ಷ ಮೌಲ್ಯದ ರೋಲೆಕ್ಸ್ ವಾಚ್ ಇರುವುದಾಗಿ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ಬಿಎಸ್‌ವೈ ಪುತ್ರ ವಿಜಯೇಂದ್ರ ಘೋಷಿತ ಆಸ್ತಿ ಮೌಲ್ಯ ₹126 ಕೋಟಿ

ಕೃಷಿ, ಬಾಡಿಗೆ ಮತ್ತು ವಿವಿಧ ಕಂಪನಿಗಳಲ್ಲಿರುವ ಶೇರುಗಳು ಹಾಗೂ ಉದ್ದಿಮೆಗಳು ತಮ್ಮ ಆದಾಯದ ಮೂಲಗಳೆಂದು ಡಿ.ಕೆ ಶಿವಕುಮಾರ್‌ ಹೇಳಿಕೊಂಡಿದ್ದಾರೆ. ಅಲ್ಲದೆ, ತಮ್ಮ ಹೆಸರಿನಲ್ಲಿ ₹226 ಕೋಟಿ ರೂಪಾಯಿ ಸಾಲ, ಪತ್ನಿ ಹೆಸರಿನಲ್ಲಿ ₹34 ಕೋಟಿ ಸಾಲವಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ತಮ್ಮ ವಿರುದ್ಧ ಐಟಿ, ಲೋಕಾಯುಕ್ತ, ಜಾರಿ ನಿರ್ದೇಶನಾಯದಲ್ಲಿ ದಾಖಲಾಗಿರುವ ಪ್ರಕರಣಗಳು ಮತ್ತು ಕೊರೊನಾ ನಿಯಮಾವಳಿಗಳ ಉಲ್ಲಂಘನೆ ಸೇರಿದಂತೆ ಒಟ್ಟು 19 ಪ್ರಕರಣಗಳಿವೆ ಎಂದು ಡಿ.ಕೆ ಶಿವಕುಮಾರ್‌ ವಿವರಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೀತಾಫಲ ಹಣ್ಣಿಗೆ ಭಾರೀ ಬೇಡಿಕೆ; ಬೇಕಿದೆ ಮಾರುಕಟ್ಟೆ ಸೌಲಭ್ಯ

ಸೀತಾಫಲ ಹಣ್ಣು ತಿನ್ನಲು ತುಂಬಾ ರುಚಿಕರ ಹಾಗೂ ಅಷ್ಟೇ ಸ್ವಾದಿಷ್ಟ, ರೋಗ...

ಕಾವೇರಿ ವಿವಾದ | ತಮಿಳು ನಟ ಸಿದ್ಧಾರ್ಥ್‌ ಕ್ಷಮೆ ಕೇಳಿದ ನಟ ಶಿವರಾಜ್‌ಕುಮಾರ್

ತಮಿಳು ನಟ ಸಿದ್ಧಾರ್ಥ್‌ ಅವರ ಸುದ್ದಿಗೋಷ್ಠಿಗೆ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ...

ಕರ್ನಾಟಕ ಬಂದ್ | ದಾವಣಗೆರೆ: ತಮಿಳುನಾಡಿ ನೀರು ಹರಿಸದಂತೆ ಒತ್ತಾಯಿಸಿ ಕರವೇ ಪ್ರತಿಭಟನೆ

ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವ ರಾಜ್ಯ ಸರ್ಕಾರ ಮತ್ತು ಕಾವೇರಿ ನಿರ್ವಹಣಾ...

ಹಾವೇರಿ | ಕಾವೇರಿ ನೀರು ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಲಿ

ರಾಜ್ಯ ಸರ್ಕಾರ ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯ ವಿವಿಧ ಸಂಘಟನೆಗಳ...