ಚುನಾವಣೆ 2023 | ಮೈತ್ರಿ ಸರ್ಕಾರ ಕೆಡವಿ, ಬಿಜೆಪಿ ಸೇರಿದ್ದ ಎಂಟಿಬಿ ಘೋಷಿತ ಆಸ್ತಿ ₹1,510 ಕೋಟಿ

Date:

2019ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾಗಿದ್ದ ಮತ್ತು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಎಂಎಲ್‌ಸಿಯಾಗಿ ಸಚಿವರಾಗಿದ್ದ ಎಂಟಿಬಿ ನಾಗರಾಜ್ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸೋಮವಾರ ಅವರು ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿಯ ಪ್ರಮಾಣವನ್ನು ಘೋಷಿಸಿದ್ದಾರೆ. ಅವರ ಬಳಿ ₹1,510 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಹೇಳಿಕೊಂಡಿದ್ದಾರೆ.

2019ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿ ಉಪಚುನಾವಣೆ ಎದುರಿಸಿದ್ದರು. ಉಪಚುನಾವಣೆ ವೇಳೆ, ಅವರು ತಮ್ಮ ಬಳಿ ₹1,015 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿದ್ದರು. ಆ ಚುನಾವಣೆಯಲ್ಲಿ ಸೋಲುಂಡ ಅವರು, ಬಳಿಕ ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ)ರಾದರು. ಅಲ್ಲದೆ, ಪೌರಾಡಳಿತ ಸಚಿವರೂ ಆದರು. ಇದೀಗ, ಅವರು ತಮ್ಮ ಆಸ್ತಿಯನ್ನು ಘೋಷಿಸಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಅವರ ಆಸ್ತಿ ₹495 ಕೋಟಿಯಷ್ಟು ಹೆಚ್ಚಾಗಿದೆ.

ಪ್ರಸ್ತುತ ಎಂಟಿಬಿ ನಾಗರಾಜ್‌ ಬಳಿ ₹372 ಕೋಟಿ ಮತ್ತು ಅವರ ಪತ್ನಿ ಶಾಂತಕುಮಾರಿ ಬಳಿ ₹163 ಕೋಟಿದ ಚರಾಸ್ತಿ ಇದೆ. ನಾಗರಾಜ್‌ ಬಳಿ ₹792 ಕೋಟಿ ಮೌಲ್ಯದ ಸ್ಥಿರಾಸ್ತಿ ಇದ್ದರೆ, ಅವರ ಪತ್ನಿ ಬಳಿ ₹274 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.

ಎಂಟಿಬಿ ನಾಗರಾಜ್‌ ಬಳಿ ₹64 ಲಕ್ಷ ಮತ್ತು ಪತ್ನಿ ಬಳಿ ₹34 ಲಕ್ಷ ನಗದು ಹಣವಿದೆ. ಜೊತೆಗೆ, ₹1.1 ಕೋಟಿ ಮೌಲ್ಯದ 214 ಕೆ.ಜಿ ಬೆಳ್ಳಿ, ₹98 ಲಕ್ಷ ಮೌಲ್ಯದ ವಜ್ರ, ₹38 ಲಕ್ಷ ಮೌಲ್ಯದ ಚಿನ್ನ ಸೇರಿದಂತೆ ಒಟ್ಟು ₹2.41 ಕೋಟಿ ಮೌಲ್ಯದ ಆಭರಣಗಳನ್ನು ಎಂಟಿಬಿ ಹೊಂದಿದ್ದಾರೆ. ಅವರ ಪತ್ನಿ ಬಳಿ ಒಟ್ಟು ₹ 1.64 ಕೋಟಿ ಮೌಲ್ಯದ ಆಭರಣಗಳಿವೆ.

ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ಜನಾರ್ದನ ರೆಡ್ಡಿ ಪತ್ನಿಯ ಘೋಷಿತ ಆಸ್ತಿ ₹250 ಕೋಟಿ

ಎಂಟಿಬಿ ನಾಗರಾಜ್‌ ಬಳಿ ₹1.72 ಕೋಟಿ ಮೌಲ್ಯದ ಕಾರುಗಳಿವೆ. ಅವರ ಹೆಸರಿನಲ್ಲಿ ಐ10, ಬೊಲೆರೊ, ಲ್ಯಾಂಡ್ ರೋವರ್ ಡಿವೆಂಡರ್ ವಾಹನಗಳಿದ್ದರೆ, ಅವರ ಪತ್ನಿ ಹೆಸರಲ್ಲಿ ಪೋರ್ಶ್ ಮತ್ತು ಇನೋವಾ ಕ್ರಿಸ್ಟಾ ಕಾರುಗಳಿವೆ. ಪತ್ನಿ ಹೆಸರಿನಲ್ಲಿರುವ ಎರಡು ಕಾರುಗಳ ಮೌಲ್ಯ ₹1.33 ಕೋಟಿ ಮೌಲ್ಯವನ್ನು ಹೊಂದಿವೆ.

ಎಂಟಿಬಿ ನಾಗರಾಜ್‌ ₹71 ಕೋಟಿ ಸಾಲ ಮಾಡಿಕೊಂಡಿದ್ದು, ಅವರ ಪತ್ನಿ ₹27 ಕೋಟಿ ಸಾಲ ಮಾಡಿರುವುದಾಗಿ ತಮ್ಮ ಅಫಿಡವಿಟ್‌ನಲ್ಲಿ ಎಂಟಿಬಿ ನಾಗರಾಜ್ ಘೋಷಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯನಗರ | ತಮ್ಮ ಹಕ್ಕುಗಳಿಗಾಗಿ ಲಿಂಗತ್ವ ಅಲ್ಪಸಂಖ್ಯಾತರ ಹೋರಾಟ

ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವು ಗೌರವಯುತ ಜೀವನ ನಡೆಸಲು ತಮಗೆ ಲಿಂಗತ್ವ ಅಲ್ಪಸಂಖ್ಯಾತರ...

ಕಲಬುರಗಿ | ಅಕ್ರಮ ಸಾಗಾಟ; 9 ಲೀಟರ್ ಮದ್ಯ, 45 ಲಕ್ಷ ರೂ. ಮೌಲ್ಯದ ಬಸ್ ವಶ

ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬಸ್‌ ತಡೆದು ಅಬಕಾರಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ...

ಯಾದಗಿರಿ | ವಸತಿ ಶಾಲೆಯಲ್ಲಿ ಕಲುಷಿತ ನೀರು ಕುಡಿದು ವಿದ್ಯಾರ್ಥಿಗಳು ಅಸ್ವಸ್ಥ

ವಸತಿ ಶಾಲೆಯಲ್ಲಿ ಕಲುಷಿತ ನೀರು ಕುಡಿದು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಯಾದಗಿರಿ...

ಗದಗ | ಜನತಾದರ್ಶನ: ವೃದ್ಧೆಗೆ ಆಧಾರ್ ಕಾರ್ಡ್, ಮಾಸಾಶನ ಆದೇಶ ಪತ್ರ ವಿತರಣೆ

ಶತಾಯುಷಿ ವೃದ್ಧೆಯೊಬ್ಬರು ಆಧಾರ್ ಕಾರ್ಡ್‌ ಇಲ್ಲದ ಕಾರಣ, ಮಾಸಾಶನ ಪಡೆಯಲು ಸಾಧ್ಯವಾಗಿರಲಿಲ್ಲ....