- ಕಲಬುರಗಿ ಬಿಜೆಪಿ ಕಚೇರಿಯಲ್ಲಿ ಪ್ರಣಾಳಿಕೆಗೆ ಬೆಂಕಿ
- ಭಜರಂಗದಳದ ನಿಷೇಧ ಪ್ರಸ್ತಾಪದ ವಿರುದ್ಧ ಆಕ್ರೋಶ
ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಅವರು ಕಾಂಗ್ರೆಸ್ ಪ್ರಣಾಳಿಕೆಯ ಪ್ರತಿ ಸುಟ್ಟು ಹಾಕುವ ಮೂಲಕ ಭಜರಂಗದಳ ನಿಷೇಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಹಾಕುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸದಾ ತಮ್ಮ ನಾಲಗೆ ಹರಿಬಿಡುವ ಮೂಲಕ ವಿವಾದಕ್ಕೀಡಾಗುತ್ತಿದ್ದ ಈಶ್ವರಪ್ಪ ಇದೀಗ ಪಕ್ಷವೊಂದರ ಪ್ರಣಾಳಿಕೆ ಸುಟ್ಟಿದ್ದಾರೆ.
ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, “ಕಾಂಗ್ರೆಸ್ ನಿಷೇಧಿತ ಪಿಎಫ್‌ಐ ನಿಷೇಧ ಮಾಡುವುದಾಗಿ ಹೇಳಿಕೆ ನೀಡಿದ್ದು, ತೀರಾ ಹಾಸ್ಯಾಸ್ಪದ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಲ್ಲಿಕಾರ್ಜುನ ಖರ್ಗೆಯ ಸಾವು ಬಯಸಿದ ಬಿಜೆಪಿ ನಾಯಕ; ಮೋದಿ ಕ್ಷಮೆಗೆ ಕಾಂಗ್ರೆಸ್ ಆಗ್ರಹ
“ಭಜರಂಗದಳ ಧರ್ಮ ರಕ್ಷಣೆಗಾಗಿ ಇರುವ ಸಂಘಟನೆ. ಅದನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸುವ ಮೂಲಕ ಆ ಪಕ್ಷ ರಾಷ್ಟ್ರದ್ರೋಹಿ ಮನಸ್ಥಿತಿ ಹೊಂದಿದೆ ಎಂಬುದನ್ನು ತೋರಿಸಿಕೊಟ್ಟಿದೆ” ಎಂದು ಟೀಕಿಸಿದ್ದಾರೆ.
“ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅಧಿಕಾರದ ಆಸೆಗೆ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆ ಮುಹಮ್ಮದ್ ಅಲಿ ಜಿನ್ನಾ ಅವರ ಮುಸ್ಲಿಂ ಲೀಗ್ ಪಕ್ಷದ ಪ್ರಣಾಳಿಕೆ ಇದ್ದಂತೆ ಇದೆ” ಎಂದಿದ್ದಾರೆ.