ಚುನಾವಣೆಯಲ್ಲಿ ಇವಿಎಂ, ಇಡಿ ದುರ್ಬಳಕೆ ಆಗಬಾರದು : ಬಿ ಕೆ ಹರಿಪ್ರಸಾದ್

Date:

  • ಖಾಸಗಿ ಕಾರು ಏರಿ ಹೊರಟ ಮುನಿರತ್ನ
  • ಕಮಲ ಪಡೆ ವಿರುದ್ಧ ಕುಟುಕಿದ ಹರಿಪ್ರಸಾದ್

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಯಂತ್ರ, ಜಾರಿ ನಿರ್ದೇಶನಾಲಯ ಮತ್ತು ಕಂದಾಯ ಇಲಾಖೆ ದುರ್ಬಳಕೆ ಆಗಬಾರದು ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.

ಮೇ 10ಕ್ಕೆ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ನಿಗದಿಯಾಗಿದೆ. ಬಿಜೆಪಿ ಇವಿಎಂ ಸೇರಿದಂತೆ ಕೆಲವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನುವ ಆರೋಪ ಎದುರಿಸುತ್ತಾ ಬಂದಿದೆ. ಈ ನಡುವೆ ಬಿ ಕೆ ಹರಿಪ್ರಸಾದ್ ಕಮಲ ಪಡೆಗೆ ಕುಟುಕಿದ್ದಾರೆ.

ಚುನಾವಣಾ ಘೋಷಣೆ ಹಿನ್ನೆಲೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್‌ನೊಳಗೆ ಅಲ್ಲೋಲ ಕಲ್ಲೋಲ ಆಗುತ್ತದೆ ಎಂದು ಬಿಜೆಪಿ ಭಾವಿಸಿತ್ತು. ಆದರೆ, ನಾವು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಪ್ರಜಾಪ್ರಭುತ್ವದ ಹಬ್ಬದ ದಿನಾಂಕ ನಿಗದಿಯಾಗಿದೆ.‌ ಮೇ 10 ರಂದು ಕರ್ನಾಟಕದಲ್ಲಿ ಸರಿಯಾದ ಸಮಯಕ್ಕೆ ಚುನಾವಣೆ ಆಗಲಿದೆ. ‌ಮತ ಎಣಿಕೆಗೆ ಬಹಳ ಅಂತರ ಕೊಡದೇ ಒಂದೇ ಹಂತದಲ್ಲಿ ಮಾಡುವುದು ಒಳ್ಳೆಯ ನಿರ್ಣಯ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? 40% ಸರ್ಕಾರ ತೊಲಗಲಿ, ಕರ್ನಾಟಕ ಗೆಲ್ಲಲಿ: ರಣದೀಪ್ ಸುರ್ಜೇವಾಲ

“ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹಳಷ್ಟು ಅನುಕೂಲವಾಗಲಿದೆ. ಚಿಲುಮೆ ಮತದಾರರ ಪಟ್ಟಿಯಲ್ಲಿ ಹೆಚ್ಚು ಕಡಿಮೆಯಾಗಿತ್ತು. ಬಿಜೆಪಿಯವರು ಹೆಚ್ಚಿ‌ನ ಅಂಶ ಮತದಾರರನ್ನು ಡಿಲೀಟ್ ಮಾಡಿಸಿದ್ದಾರೆ.‌ ಈ ಬಗ್ಗೆ ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ನಿರ್ಣಯ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ಖಾಸಗಿ ಕಾರಿನಲ್ಲಿ ಮುನಿರತ್ನ

ನೀತಿ ಸಂಹಿತೆ ಜಾರಿಯಾಗುವ ಮುನ್ಸೂಚನೆ ಇದ್ದ ಸಚಿವ ಮುನಿರತ್ನ ಅವರು ವಿಕಾಸಸೌಧದಲ್ಲಿನ ಪತ್ರಿಕಾಗೋಷ್ಠಿಗೆ ಸರ್ಕಾರಿ ವಾಹನ ತೊರೆದು ತಮ್ಮ ಖಾಸಗಿ ವಾಹನದಲ್ಲಿ ಹೋಗಿದ್ದಾರೆ. ತಮ್ಮ ಸರ್ಕಾರಿ ಕಾರಿನಲ್ಲಿ ಇದ್ದ ವಸ್ತುಗಳನ್ನು ಖಾಸಗಿ ಕಾರಿಗೆ ಶಿಫ್ಟ್ ಮಾಡುವಂತೆ ಸಿಬ್ಬಂದಿಗೆ ಸೂಚಿಸಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಿಎಸ್ಐ ನೇಮಕಾತಿ ಅಕ್ರಮ: ತನಿಖೆಗೆ ಸಜ್ಜಾದ ಸರ್ಕಾರ

ಬಿಜೆಪಿ ಅಕ್ರಮದ ಬೇಟೆ ಆರಂಭಿಸಿದ ಕಾಂಗ್ರೆಸ್ ಪಿಎಸ್ಐ ನೇಮಕ ಅಕ್ರಮ ತನಿಖೆಗೆ ಸಿದ್ಧತೆ ಪೊಲೀಸ್...

ಗ್ಯಾರಂಟಿ ಜಾರಿಗೆ ಅಭಿವೃದ್ಧಿ ಅನುದಾನಗಳಿಗೆ ಕತ್ತರಿ ಹಾಕಬೇಡಿ : ಮಾಜಿ ಸಿಎಂ ಬೊಮ್ಮಾಯಿ

ಹಿಂದಿನ ಸರ್ಕಾರದ ಜನಪರ ಯೋಜನೆ ಮುಂದುವರೆಸಲು ಸಿಎಂಗೆ ಮನವಿ ಸಿದ್ದರಾಮಯ್ಯಗೆ ಪತ್ರ ಮೂಲಕ...

ಮಳೆಹಾನಿ | ಪರಿಹಾರ ಕ್ರಮ ತ್ವರಿತವಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಸೂಚನೆ

67 ಮಂದಿ ಪ್ರಾಣಹಾನಿ ಆಗಿದ್ದು, 60 ಮಂದಿಯ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ 487...

ಕೇಂದ್ರ ಸರ್ಕಾರ ಅಕ್ಕಿ ನೀಡದಿದ್ದರೆ ನಾವೇ ಖರೀದಿಸುತ್ತೇವೆ: ಸಚಿವ ಮುನಿಯಪ್ಪ

ಘೋಷಿತ ಐದೂ ಗ್ಯಾರಂಟಿಗಳನ್ನು ಹಂತಹಂತವಾಗಿ ನೀಡುತ್ತೇವೆ ನಮ್ಮ ಮಾತಿಗೆ ನಾವು ಎಂದಿಗೂ ಬದ್ಧರಾಗಿರುತ್ತೇವೆ...