ಹೊಸಕೋಟೆ | ಶರತ್ ಬಚ್ಚೇಗೌಡ ಪತ್ನಿ ಕಾರು ಧ್ವಂಸ; ಪ್ರಚಾರದ ವೇಳೆ ಕಿಡಿಗೇಡಿಗಳ ದಾಂಧಲೆ

Date:

  • ಇನ್ನೋವಾ ಗ್ಲಾಸ್ ಒಡೆದು ಅಟ್ಟಹಾಸ ಮೆರೆದ ಕಿಡಿಗೇಡಿಗಳು
  • ಕಾರನ್ನು ನಿಲ್ಲಿಸಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ಕೃತ್ಯ.

ಹೊಸಕೋಟೆ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ಪತ್ನಿ ಕಾರಿನ ಮೇಲೆ ಕಿಡಿಗೇಡಿಗಳು ದಾಂಧಲೆ ನಡೆಸಿದ್ದಾರೆ.

ಗುರುವಾರ ಹೊಸಕೋಟೆಯಲ್ಲಿ ಪತಿಯ ಪರ ಪ್ರಚಾರಕ್ಕೆ ತೆರಳಿದ್ದ ವೇಳೆ ನಿಲ್ಲಿಸಿದ್ದ ಕಾರನ್ನು ಗುರಿಯಾಗಿಸಿಕೊಂಡ ಕಿಡಿಗೇಡಿಗಳು ದಾಳಿ ನಡೆಸಿ ಗ್ಲಾಸ್‌ ಒಡೆದು ಅಟ್ಟಹಾಸ ಮೆರೆದಿದ್ದಾರೆ.

ಹೊಸಕೋಟೆ ನಗರದ ಪಾರ್ವತಿಪುರದಲ್ಲಿ ಈ ಘಟನೆ ದಾಖಲಾಗಿದೆ. ಬಹಿರಂಗ ಪ್ರಚಾರದ ಕಾವು ಹೆಚಾಗುತ್ತಿರುವಂತೆ ಅಭ್ಯರ್ಥಿಗಳು ಮತ್ತವರ ಬೆಂಬಲಿಗರ ನಡುವೆ ಜಿದ್ದಾಜಿದ್ದು ಹೆಚ್ಚಾಗಿದೆ.

ಇಂದು ಬೆಳಗ್ಗೆ ಶರತ್ ಬಚ್ಚೇಗೌಡ ಪರ ಅವರ ಪತ್ನಿ ಪ್ರತಿಭಾ ಪಾರ್ವತೀಪುರದಲ್ಲಿ ಪ್ರಚಾರಕ್ಕೆ ಬಂದಿದ್ದರು. ಕಾಲ್ನಡಿಗೆಯ ಪ್ರಚಾರವಾದ ಹಿನ್ನೆಲೆಯಲ್ಲಿ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು.

ಹೀಗೆ ನಿಂತಿದ್ದ ಇನೋವಾ ಕ್ರಿಸ್ಟಾ ಕಾರಿನ ಸೈಡ್ ಗ್ಲಾಸ್‌ಗಳನ್ನು ಕಿಡಿಗೇಡಿಗಳು ಒಡೆದು ಪರಾರಿಯಾಗಿದ್ದಾರೆ. ಶಾಂತಿಯುತ ಹೊಸಕೋಟೆಯಲ್ಲಿ ಅಶಾಂತಿ ಉಂಟು ಮಾಡಲು ಕೆಲ ಕಿಡಿಗೇಡಿಗಳು ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇತ್ತ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶರತ್ ಬಚ್ಚೇಗೌಡ ಘಟನೆ ಖಂಡಿಸಿದ್ದಾರೆ. ಜೊತೆಗೆ ಈ ಕುರಿತು ಮಾತನಾಡಿದ ಅವರು ಘಟನೆಯಿಂದ ನಮಗೆ ತುಂಬಾ ಬೇಸರವಾಗಿರುವುದಾಗಿ ತಿಳಿಸಿದರು.

ನನ್ನ ರಾಜಕೀಯ ಬೆಳವಣಿಗೆ ಸಹಿಸದವರು ಈ ಕೃತ್ಯ ನಡೆಸಿದ್ದಾರೆ. ಈಗಾಗಲೇ ನನ್ನ ಮೇಲೆ ನಾಲ್ಕೈದು ಕೇಸ್‌ಗಳನ್ನು ಹಾಕಲಾಗಿದೆ. ಮುಂದೆ ನನ್ನ ಮಕ್ಕಳು ಸೇರಿದಂತೆ ನಮ್ಮ ಕುಟುಂಬದ ಎಲ್ಲರ ಮೇಲೂ ಕೇಸ್ ಹಾಕಿಬಿಡಿ ಎಂದು ಶಾಸಕ ಶರತ್ ಬಚ್ಚೇಗೌಡ ಸಿಡಿಮಿಡಿಗೊಂಡರು.ಕಿಡಿಗೇಡಿಗಳು

ಈ ಸುದ್ದಿ ಓದಿದ್ದೀರಾ?:ಡಬಲ್ ಎಂಜಿನ್ ಸರ್ಕಾರ ಬೇಡ ಅನ್ನುವವರು ಕಾಂಗ್ರೆಸ್‌ಗೆ ಮತ ಹಾಕಲಿ: ಸಿಎಂ ಬೊಮ್ಮಾಯಿ

ಯಾವುದೇ ಕಾರಣಕ್ಕೂ ಧೈರ್ಯಗೆಡುವ ವಂಶದಲ್ಲಿ ನಾವು ಹುಟ್ಟಿಲ್ಲ. ಇಟ್ಟ ಹೆಜ್ಜೆ ಮುಂದಿಟ್ಟ ಮೇಲೆ ವಾಪಸ್ ತೆಗೆದುಕೊಳ್ಳುವಂತದ್ದಲ್ಲ. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ತನಕ ಬಿಡುವುದಿಲ್ಲ.

ನಮ್ಮ ತಾಲೂಕಿನ ಜನ ನಮ್ಮ ಹಿಂದೆ ಇದ್ದೇ ಇರುತ್ತಾರೆ. 2023ರ ಚುನಾವಣೆಯಲ್ಲಿ ಆಶೀರ್ವಾದ ಮಾಡಿಯೇ ಮಾಡುತ್ತಾರೆ ಎಂದು ಶರತ್ ಬಚ್ಚೇಗೌಡ ವಿಸ್ವಾಸ ವ್ಯಕ್ತಪಡಿಸಿದರು.

ನನ್ನ ಪತ್ನಿಯ ಪ್ರಚಾರಕ್ಕೆ ಅಡ್ಡಿಪಡಿಸಲು ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ. ಕೂಡಲೇ ಆರೋಪಿಯನ್ನ ಬಂಧಿಸುವ ವಿಶ್ವಾಸವಿದೆ ಎಂದು ಶರತ್ ಬಚ್ಚೇಗೌಡ ತಿಳಿಸಿದರು. ಇತ್ತ ಪ್ರಕರಣ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿತೀಶ್ ಪ್ರಯಾಣಕ್ಕೆ ಸಂಚಾರ ತಡೆ; ಟ್ರಾಫಿಕ್‌ನಲ್ಲಿ ಸಿಲುಕಿದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಗು

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಯಾಣಕ್ಕಾಗಿ ಪೊಲೀಸರು ರಸ್ತೆಯಲ್ಲಿ ಇತರ ವಾಹನ...

ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಕೆ: ಸಿದ್ದರಾಮಯ್ಯ

ಕಾವೇರಿ ನೀರು ಬಿಡುವ ಆದೇಶಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ...

‘ಒದೆ ತಿಂದ ಕಳ್ಳನಿಗೆ ಕೊನೆಗೆ ಬುದ್ಧಿ ಬಂತಂತೆ’ ಇದು ರಾಜ್ಯ ಸರ್ಕಾರದ ಪರಿಸ್ಥಿತಿ: ಈಶ್ವರಪ್ಪ ಲೇವಡಿ

ಡಿಕೆ ಶಿವಕುಮಾರ್‌ ಅವರ ಕುತಂತ್ರದಿಂದ ರಾಜ್ಯದ ಜನರಿಗೆ ಸಮಸ್ಯೆ ನೀರು ಬಿಡುವುದಕ್ಕಿಂತ ಮೊದಲೇ...

ದಾವಣಗೆರೆ | ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ : ದೂರು ದಾಖಲು

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು...