ಉರಿ–ನಂಜೇಗೌಡರ ವಿಚಾರದಲ್ಲಿ ಇನ್ಮೇಲೆ ಯಾರೂ ಮಾತನಾಡಬಾರದು: ನಿರ್ಮಲಾನಂದನಾಥ ಶ್ರೀ ತಾಕೀತು

Date:

  • ಉರಿಗೌಡ-ನಂಜೇಗೌಡ ವಿಚಾರವಾಗಿ ರಾಜಕಾರಣಿಗಳು ಅನಗತ್ಯವಾಗಿ ಮಾತನಾಡುವುದನ್ನು ನಿಲ್ಲಿಸಬೇಕು
  • ಸಮಾಜದ ಬಗ್ಗೆ ನಕಾರಾತ್ಮಕ ವಿಚಾರವನ್ನು ಬಿಂಬಿಸುವ ರೀತಿ ನಡೆಯುತ್ತಿದೆ. ಇದಕ್ಕೆ ಕೊನೆ ಹಾಡಬೇಕಿದೆ

ಇತಿಹಾಸದ ಪೂರ್ಣ ದಾಖಲೆಗಳು ಲಭ್ಯವಿಲ್ಲದ ವಿಚಾರಗಳ ಮೇಲೆ ನಾವು ಮಾತನಾಡುವುದು ಅಥವಾ ಆ ವಿಚಾರವನ್ನು ಬೆಳೆಸುವಂತಹ ಹೇಳಿಕೆಗಳನ್ನು ಯಾರೂ ಕೊಡಬಾರದು ಎಂದು ಆದಿಚುಂಚನಗಿರಿ ಸಂಸ್ಥಾನದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ವಿವಾದಿತ ವಿಚಾರದ ಬಗ್ಗೆ ನಾಗರಿಕ ಸಮಾಜಕ್ಕೆ ನೀಡಿರುವ ಸಂದೇಶದಲ್ಲಿ ಉರಿಗೌಡ ಹಾಗೂ ನಂಜೇಗೌಡರ ವಿಚಾರವಾಗಿ ರಾಜಕಾರಣಿಗಳು ಅನಗತ್ಯವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಶ್ರೀಗಳು ಹೇಳಿದ್ದಾರೆ.

ಯಾವುದೇ ವಿಚಾರದ ಬಗ್ಗೆ ಪೂರ್ಣ ಮಾಹಿತಿ ಇಲ್ಲದೆ ಯಾರೇ ಆಗಲಿ ಮಾತನಾಡುವುದು ಸರಿಯಲ್ಲ. ಈ ಹಿಂದೆ ಈ ಬಗ್ಗೆ ಮಾತನಾಡಿರುವ ಸಿ.ಟಿ. ರವಿ, ಅಶ್ವತ್ಥನಾರಾಯಣ, ಗೋಪಾಲಯ್ಯ ಅವರನ್ನೂ ಸೇರಿದಂತೆ ಯಾರು ಯಾರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೋ ಅವರಿಗೆ ಈ ಬಗ್ಗೆ ಅಗತ್ಯ ಇತಿಹಾಸದ ಮಾಹಿತಿಯನ್ನು ಮನದಟ್ಟು ಮಾಡಲಾಗಿದೆ. ಹೀಗಾಗಿ ಅವರು ಸುಮ್ಮನಾಗುತ್ತಾರೆ ಹಾಗೂ ಸುಮ್ಮನಾಗಿದ್ದಾರೆ ಎಂದುಕೊಂಡಿದ್ದೇನೆ.

ಕಲ್ಪನೆ ಮಾಡಿಕೊಂಡು ಬರೆಯುವುದು ಕಾದಂಬರಿ ಆಗುತ್ತದೆ. ಶಾಸನ ಹಾಗೂ ಇತಿಹಾಸ ಎನ್ನುವುದರ ಮೇಲೆ ರಚಿತವಾದ್ದು ಮುಂದಿನ ಪೀಳಿಗೆಗೆ ಶಕ್ತಿಯಾಗುತ್ತದೆ. ಉರಿ-ನಂಜೇಗೌಡರ ವಿಚಾರದಲ್ಲಿ ಇಂತಹ ಯಾವುದೇ ದಾಖಲೆಗಳು ಇದುವರೆಗೂ ಲಭ್ಯವಾಗಿಲ್ಲ. ಹೀಗಾಗಿ ಈ ವಿಚಾರದಲ್ಲಿ ದಾಖಲೆ ಇಲ್ಲದೆ ಮಾತನಾಡುವುದು ಸರಿಯಲ್ಲ. ಇಂತಹ ಹೇಳಿಕೆಗಳ ಮೂಲಕ ಯುವ ಸಮುದಾಯ ಹಾಗೂ ಸಮಕಾಲೀನ ಸಮಾಜದಲ್ಲಿ ಗೊಂದಲ ಮೂಡಿಸಬಾರದು, ಸಮುದಾಯಕ್ಕೂ ಧಕ್ಕೆ ತರಬಾರದು ಎಂದು ಶ್ರೀಗಳು ಹೇಳಿದರು.

ಉರಿ-ನಂಜೇಗೌಡರ ವಿಚಾರದಲ್ಲಿ ಇದುವರೆಗೆ ಅಗತ್ಯ ಮಾಹಿತಿ ಇಲ್ಲ. ಹೀಗಾಗಿ ಅದಕ್ಕೆ ಸಂಬಂಧಪಟ್ಟ ದಾಖಲೆಗಳೇನಾದರೂ ಲಭ್ಯವಾದಲ್ಲಿ ಅದನ್ನು ಆದಿಚುಂಚನಗಿರಿ ಶ್ರೀಮಠಕ್ಕೆ ತಲುಪಿಸಿ, ನಾವು ಅದರ ಬಗ್ಗೆ ಮುಂದಿನ ಅಧ್ಯಯನ ಮಾಡಿಸಿ ನಿಖರತೆ ಪಡೆದುಕೊಳ್ಳುವ ಕಾರ್ಯ ಮಾಡಿಕೊಡುತ್ತೇವೆ. ಅಲ್ಲಿಯ ವರೆಗೂ ನಿಖರತೆ ಇಲ್ಲದ ವಿಚಾರದ ಬಗ್ಗೆ ಯಾರೂ ಮಾತನಾಡಬೇಡಿ ಎಂದು ನಿರ್ಮಲಾನಂದನಾಥ ಶ್ರೀಗಳು ಹೇಳಿದರು.

ವಿವಾದಿತ ವಿಚಾರ ಒಂದು ಸಮಾಜದ ಬಗ್ಗೆ ನಕಾರಾತ್ಮಕ ವಿಚಾರವನ್ನು ಬಿಂಬಿಸುವ ರೀತಿ ನಡೆಯುತ್ತಿದೆ. ಇದಕ್ಕೆ ಕೊನೆ ಹಾಡಬೇಕಿದೆ. ಹೀಗಾಗಿ ಈ ವಿಚಾರದ ಬಗ್ಗೆ ಯಾರೂ ಮಾತನಾಡದಿರುವುದು ಒಳಿತು ಎಂದು ಶ್ರೀಗಳು ಆಗ್ರಹಿಸಿದ್ದಾರೆ.

+ posts
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜೂನ್ 15ರ ಒಳಗೆ ಇಡೀ ಇಲಾಖೆಯ ಸುಧಾರಣೆಗೆ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ

ಅಧಿಕಾರಿಗಳು, ನಿರ್ದೇಶಕರೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವ ಪ್ರಿಯಾಂಕ್‌ ಖರ್ಗೆ ಸಾವಿರಕ್ಕೂ...

ನಾನು – ಸವದಿ ಸಚಿವರಾಗಬೇಕಿತ್ತು ಎನ್ನುವುದು ಜನರ ಅಭಿಲಾಷೆಯಾಗಿತ್ತು : ಜಗದೀಶ ಶೆಟ್ಟರ್

ಸಚಿವ ಸ್ಥಾನಕ್ಕೆ ನಾನೆಂದೂ ಬೇಡಿಕೆ ಇಟ್ಟಿಲ್ಲ, ಇಡುವುದೂ ಇಲ್ಲ ಯಾವುದೇ ಸ್ಥಾನ ಕೊಟ್ಟರೂ...

ರಾಯಚೂರು | ಕಲುಷಿತ ನೀರು ಸೇವನೆ; ಮತ್ತೊಂದು ಗ್ರಾಮದಲ್ಲಿ 8 ಮಂದಿ ಅಸ್ವಸ್ಥ

ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ದೇವದುರ್ಗದ...

ಕರ್ನಾಟಕದ ಜಯವನ್ನು ಮಧ್ಯಪ್ರದೇಶದಲ್ಲಿ ಪುನರಾವರ್ತಿಸಲಿದ್ದೇವೆ: ರಾಹುಲ್ ಗಾಂಧಿ

ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಹಿರಿಯ ನಾಯಕರು...