ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಬಿಎಂಟಿಸಿ ಬಸ್‌ನಲ್ಲಿ ಬೆಳಿಗ್ಗೆ ಸಾರ್ವಜನಿಕ ಪ್ರಯಾಣಿಕರೊಂದಿಗೆ ಸಹಪ್ರಯಾಣಿಕರಾಗಿ ಸಂಚರಿಸಿ ಗಮನ ಸೆಳೆದರು.
ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕೆಫೆ ಕಾಫಿ ಡೇಗೆ ರಾಹುಲ್ ಗಾಂಧಿ ಭೇಟಿ ನೀಡಿ ಕಾಪಿ ಸವಿಯುತ್ತ ಸಾರ್ವಜನಿಕರೊಂದಿಗೆ ಮಾತಿಗಿಳಿದರು. ಕಾಫಿ ಡೇ ನಲ್ಲಿದ್ದ ಸಾರ್ವಜನಿಕರು ರಾಹುಲ್ ಜೊತೆ ಸೆಲ್ಫಿ ತಗೆಸಿಕೊಂಡರು.
ಕಾಫಿ ಡೇಯಿಂದ ಹೊರಗೆ ಬಂದ ರಾಹುಲ್ ಗಾಂಧಿ ಅವರು ನೇರವಾಗಿ ಬಸ್ ನಿಲ್ದಾಣಕ್ಕೆ ತೆರಳಿ ಬಿಎಂಟಿಸಿ ಬಸ್ ಹತ್ತಿದರು. ಬಸ್‌ನಲ್ಲಿ ಸಂಚರಿಸುತ್ತಿದ್ದ ಮಹಿಳೆಯರ ಜೊತೆ ಮಾತಿಗಿಳಿದು, “ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಗೃಹಲಕ್ಷ್ಮಿ ಯೋಜನೆ (ಮನೆಯ ಯಜಮಾನತಿಗೆ ₹2000) ಕಾಂಗ್ರೆಸ್ ಖಾತರಿ ಬಗ್ಗೆ ಚರ್ಚಿಸಿದರು.

ಈ ವೇಳೆ ಮಹಿಳೆಯರು ಸಾರಿಗೆ ಸಮಸ್ಯೆ, ಬೆಲೆ ಏರಿಕೆ ಬಗ್ಗೆ ರಾಹುಲ್ ಗಾಂಧಿ ಜೊತೆ ಮುಕ್ತವಾಗಿ ಮಾತನಾಡಿದರು.ಲಿಂಗರಾಜಪುರಂನಲ್ಲಿ ಬಸ್ ಇಳಿಯುವ ಮುನ್ನ ಚಾಲಕನೊಂದಿಗೆ ಫೋಟೋ ತಗೆಯಿಸಿಕೊಂಡರು.
ಭಾನುವಾರ ಫುಡ್ ಡಿಲೆವರಿ ಬಾಯ್ಸ್ ಜೊತೆಗೂ ರಾಹುಲ್ ಗಾಂಧಿ ಸಮಯ ಕಳೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಾಕಷ್ಟು ಮೆಚ್ಚುಗೆಯ ಮಾತುಗಳು ಅಭಿಮಾನಿಗಳಿಂದ ವ್ಯಕ್ತವಾಗಿತ್ತು.