ಸಿಎಂ ಬೊಮ್ಮಾಯಿ ವಿರುದ್ಧ ಮಹಿಳೆಯರ ಪ್ರತಿಭಟನೆ; ಪಕ್ಷೇತರ ಅಭ್ಯರ್ಥಿಗೆ ಬೆಂಬಲ

Date:

ಕಳೆದ ವರ್ಷ ರಾಣೇಬೆನ್ನೂರಿನಿಂದ ಶಿಗ್ಗಾಂವ್‌ನಲ್ಲಿರುವ ಸಿಎಂ ಬೊಮ್ಮಾಯಿ ಅವರ ನಿವಾಸದವರೆಗೆ ಮಹಿಳೆಯರು ಪಾದಯಾತ್ರೆ ನಡೆಸಿದ್ದರು. ಸಂತ್ರಸ್ತರಿಗೆ ಪ್ಯಾಕೇಜ್ ಘೋಷಣೆ ಮಾಡುವ ಬಗ್ಗೆ ಸರ್ಕಾರ ನೀಡಿದ ಭರವಸೆ ಈಡೇರಿಲ್ಲ.

ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆ ದಿನ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರದಲ್ಲಿ ಮೂವತ್ತಕ್ಕೂ ಹೆಚ್ಚು ಮಹಿಳೆಯರು ಉರಿ ಬಿಸಿಲಿನಲ್ಲಿ ನಿಂತು ಪ್ರತಿಭಟಿಸಿದ್ದಾರೆ. ಪ್ರತಿಭಟನೆಯ ಭಾಗವಾಗಿ ಅವರು ಗಿರೀಶ್ ಡಿ ಆರ್‌ ಎಂಬ ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ.

ಹೌದು, ಬಸವರಾಜ ಬೊಮ್ಮಾಯಿ ಅವರು ಕಳೆದು ಮೂರು ಬಾರಿಯಿಂದ ಶಿಗ್ಗಾಂವಿಯಲ್ಲಿ ಗೆದ್ದು ಬೀಗುತ್ತಿದ್ದಾರೆ. ಅವರ ಎದುರು ಲಂಬಾಣಿ ವಿದ್ಯಾರ್ಥಿ ಸಂಘದ ರಾಜ್ಯ ಮುಖಂಡ ಗಿರೀಶ್ ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ.

ಗಿರೀಶ್ ಗೆಲ್ಲುವ ಸಾಧ್ಯತೆ ತೀರಾ ಕಡಿಮೆ. ಆದರೆ, ಆತನ ನಾಮಪತ್ರ ಸಲ್ಲಿಕೆಯ ಹಿಂದೆ ಮಹಿಳೆಯರ ನೋವಿದೆ, ನ್ಯಾಯ ದೊರಕದ ಕುರಿತು ಆಕ್ರೋಶವಿದೆ. ಇದರ ಭಾಗಿವಾಗಿಯೇ ಮಹಿಳೆಯರು ಗಿರೀಶ್ ಅವರ ಬೆನ್ನಿಗೆ ನಿಂತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2010ರಿಂದ 2017ರವರೆಗೆ ಕ್ಷೇತ್ರದ ಮಹಿಳೆಯರು ಅನಾರೋಗ್ಯದ ಸಮಸ್ಯೆಗೆ ಆಸ್ಪತ್ರೆಗೆ ತೆರಳಿದರೆ, ಗರ್ಭಕೋಶದಲ್ಲಿ ತೊಂದರೆ ಇದೆ ಎಂದು ಅನಗತ್ಯವಾಗಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದನ್ನು ಸರ್ಕಾರವೇ ಸ್ವತಃ ಒಪ್ಪಿಕೊಂಡು 268 ಮಹಿಳೆಯರಿಗೆ ಅನಗತ್ಯವಾಗಿ ಸಂತಾನ ಹರಣದ ಆಪರೇಷನ್ ಮಾಡಲಾಗಿದೆ ಎಂದಿತ್ತು. ಆದರೆ, ಸಂತ್ರಸ್ತರಿಗೆ ಮಾತ್ರ ಈವರೆಗೆ ಪರಿಹಾರ ದೊರಕಿಲ್ಲ.

ಸುದೀರ್ಘ ಏಳು ವರ್ಷಗಳ ಕಾಲ ಸಂತ್ರಸ್ತರು ಪರಿಹಾರಕ್ಕಾಗಿ ಅಲೆದಾಡಿದರೂ ಸರ್ಕಾರ ಅವರಿಗೆ ಯಾವುದೇ ನೆರವು ನೀಡಿಲ್ಲ. ಹಾಗಾಗಿ, ಪ್ರತಿಭಟನೆಯ ಭಾಗವಾಗಿ ಶಿಗ್ಗಾಂವಿಯಲ್ಲಿ ಲಂಬಾಣಿ ಯುವಕನ ಬೆನ್ನಿಗೆ ಮಹಿಳೆಯರು ನಿಂತಿದ್ದಾರೆ.

ಕ್ಷೇತ್ರದಲ್ಲಿ ಲಂಬಾಣಿ ಮತ್ತು ಇತರ ಹಿಂದುಳಿದ ಸಮುದಾಯಗಳ ಸುಮಾರು 15,000 ಮತದಾರರನ್ನು ಹೊಂದಿದ್ದು, ಅವರು ಸಹ ಗಿರೀಶ್ ಬೆಂಬಲಕ್ಕೆ ಬರಬಹುದು.

ಈ ಕುರಿತು ‘ಇಂಡಿಯನ್ ಎಕ್ಸ್‌ಪ್ರೆಸ್‌’ ಜೊತೆಗೆ ಮಾತನಾಡಿರುವ ಮಹಿಳೆಯೊಬ್ಬರು, “ಹಾವೇರಿ ಜಿಲ್ಲೆಯ ಲಂಬಾಣಿ ತಾಂಡಗಳ 800 ಮಹಿಳೆಯರು ಅನಗತ್ಯ ಸಂತಾಪ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಆದರೆ, ಸರ್ಕಾರ ಮಾತ್ರ ಯಾವುದೇ ಪರಿಹಾರ ನೀಡಿಲ್ಲ” ಎಂದು ಬೇಸರ ಹೊರಹಾಕಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪರಿಸರವಾದಿ ವಕೀಲ ರಿತ್ವಿಕ್‌ ದತ್ತಾ ವಿರುದ್ಧ ಎಫ್‌ಸಿಆರ್‌ಎ ಉಲ್ಲಂಘನೆ ಅಡಿ ಸಿಬಿಐ ಪ್ರಕರಣ

ಹಾವೇರಿ ಜಿಲ್ಲೆಯ ತಾಲೂಕಾ ಕೇಂದ್ರವಾದ ರಾಣೆಬೆನ್ನೂರಿನ ಸರಕಾರಿ ಆಸ್ಪತ್ರೆಯಲ್ಲಿ ಇತರ ಸಮುದಾಯದ ಮಹಿಳೆಯರೂ ಅದೇ ಗತಿ ಅನುಭವಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.

“2013ರಲ್ಲಿ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ಹೋಗಿದ್ದೆ. ನನಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ನನಗೆ ಹೇಳಿದರು. ಆಪರೇಷನ್ ಮಾಡಿಕೊಳ್ಳದೆ ಇದ್ದರೆ ನಾನು ಸಾಯುತ್ತೇನೆ ಎಂದು ಹೆದರಿಸಿದರು. ಆದ್ದರಿಂದ ನಾನು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ” ಎಂದಿದ್ದಾರೆ.

“2010ರಿಂದ 2017ರ ನಡುವೆ ಆಸ್ಪತ್ರೆಗೆ ಹೋದ ಅನೇಕ ಮಹಿಳೆಯರು ವೈದ್ಯರ ಸಲಹೆಯ ಮೇರೆಗೆ ಗರ್ಭ ಕೋಶ ತೆಗೆದಿದ್ದಾರೆ. ಆದರೆ, ನಮಗೆ ಜನರನ್ನು ಒಟ್ಟುಗೂಡಿಸುವುದಕ್ಕೆ ಕೆಲವು ವರ್ಷಗಳು ಬೇಕಾದವು. ಹಾವೇರಿ ಜಿಲ್ಲೆಯ ನಿಂಗೇಕಳ್ಳಿ ತಾಂಡಾ, ಹಳ್ಳಿ ತಾಂಡಾ, ಹತ್ತಿಮುತ್ತೂರು, ಕೃಷ್ಣಾಪುರ ತಾಂಡಾ, ಶಿರಬುಡಗಿ, ಶಿವಪುರ ತಾಂಡಾ ಸೇರಿದಂತೆ ಸಂತ್ರಸ್ತರು ನಾನಾ ಕಡೆ ಹರಡಿಕೊಂಡಿದ್ದರು” ಎಂದು ತಿಳಿಸಿದ್ದಾರೆ.

ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕರಣವನ್ನು 2017ರಲ್ಲಿ ಸಿಐಡಿಗೆ ಹಸ್ತಾಂತರಿಸುವುದಾಗಿ ಹೇಳಿತ್ತು. ಆದರೆ, ಅದೂ ಆಗಲಿಲ್ಲ. ಮಹಿಳೆಯರು ಹೋರಾಟಕ್ಕೆ ಮುಂದಾಗುತ್ತಿದ್ದ ಸಮಯದಲ್ಲೇ ಕೋವಿಡ್ ಬಂತು, ಇಡೀ ದೇಶವೇ ಸ್ತಬ್ದವಾಯಿತು.

ಆದರೂ ಕಳೆದ ವರ್ಷ ರಾಣೇಬೆನ್ನೂರಿನಿಂದ ಶಿಗ್ಗಾಂವ್‌ನಲ್ಲಿರುವ ಸಿಎಂ ಬೊಮ್ಮಾಯಿ ಅವರ ನಿವಾಸದವರೆಗೆ ಮಹಿಳೆಯರು ಪಾದಯಾತ್ರೆ ನಡೆಸಿದ್ದರು. ಬಳಿಕ ಸಂತ್ರಸ್ತರಿಗೆ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಲಿದೆ ಎಂದು ಪ್ರಮಾಣ ಮಾಡಿದ್ದರು. ಆದರೆ ಇನ್ನೂ ಬೊಮ್ಮಾಯಿ ಭರವಸೆ ಈಡೇರಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಭಾಷಣ | ರಾಮಮಂದಿರದ ಉಲ್ಲೇಖ, ಸಿಖ್ಖರ ಓಲೈಕೆ; ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದ ಚು. ಆಯೋಗ

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ರ್‍ಯಾಲಿಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ...

ನೇಹಾ ಕೊಲೆ ಪ್ರಕರಣ | ಮತಾಂತರ ಆಯಾಮದಿಂದಲೇ ತನಿಖೆಯಾಗಬೇಕು: ಪ್ರಲ್ಹಾದ್‌ ಜೋಶಿ ಆಗ್ರಹ

"ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕೊಲೆಯಾಗಿರುವ ನೇಹಾ ಹಿರೇಮಠ ಅವರನ್ನು ಮತಾಂತರ ಮಾಡಲು ಕೊಲೆ...

ಮುಸ್ಲಿಂ ಮೀಸಲಾತಿ ಕುರಿತ ಮೋದಿ ಹೇಳಿಕೆ ಅವರ ಸೋಲಿನ ಭೀತಿ, ಹತಾಶೆಯ ಪ್ರತೀಕ: ಸಿ ಎಂ ಸಿದ್ದರಾಮಯ್ಯ ತಿರುಗೇಟು

"ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್...

ಪಂಜಾಬ್‌| ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಲೋಕಸಭೆ ಚುನಾವಣೆಗೆ ಸ್ಪರ್ಧೆ

ಪ್ರಸ್ತುತ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಸ್ಸಾಂನ ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್,...