ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ: 132ರಿಂದ 140 ಸೀಟುಗಳ ನಿರೀಕ್ಷೆ – ಈದಿನ.ಕಾಮ್‌ನ ಸಮೀಕ್ಷೆ

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟವಾದ ಬಹುಮತ ಲಭ್ಯವಾಗಲಿದೆ ಎಂದು ಈದಿನ.ಕಾಮ್‌ನ ಸಮೀಕ್ಷೆಯ ಅಂಕಿ-ಅಂಶಗಳು ತಿಳಿಸುತ್ತಿವೆ. ಇನ್ನೊಂದು ಆಪರೇಷನ್‌ ಕಮಲದ ಸಾಧ್ಯತೆಯನ್ನೂ ಇಲ್ಲವಾಗಿಸುವ ಹಾಗೆ 113ಅನ್ನು ಸಲೀಸಾಗಿ ದಾಟಲಿದೆ ಎಂದು ತೋರುತ್ತಿದೆ.
ಈ ಹಿಂದೆ ಇಂತಹ ಬಹುಮತವನ್ನು ಪಡೆದುಕೊಂಡಿದ್ದದ್ದು 2013 ಮತ್ತು 1999ರಲ್ಲಿ. ಈ ಸಾರಿ ಅವೆರಡನ್ನೂ ದಾಟಲಿದ್ದು, 1989ರ ನಂತರ ಮೂರು ದಶಕಗಳಲ್ಲಿ ಇದೇ ಅತಿ ದೊಡ್ಡ ಸಾಧನೆಯಾಗಬಹುದು ಎಂದು ಸಮೀಕ್ಷೆಯಿಂದ ಸಿಕ್ಕಿರುವ ಸಂಖ್ಯೆಗಳು ಹೇಳುತ್ತಿವೆ.
ಬಿಜೆಪಿಯ ಮಟ್ಟಿಗೆ ಹೇಳುವುದಾದರೆ, 2013ರಲ್ಲಿ ಆ ಪಕ್ಷ ಒಡೆದು ಹೋಗಿದ್ದಾಗ ಉದ್ಭವವಾಗಿದ್ದ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಹೊರತುಪಡಿಸಿದರೆ, ಇದು ಅದರ ಅತ್ಯಂತ ಹೀನಾಯ ಸ್ಥಿತಿಯಾಗಿರಲಿದೆ.
Facebook
WhatsApp
Twitter
Telegram
LinkedIn