ಹಣದಾಸೆಗೆ ಸೌಂಡ್‌ ತಗ್ಗಿಸುವ ʻಮಲ್ಟಿಪ್ಲೆಕ್ಸ್‌ʼಗಳು; ಆರ್‌ ಚಂದ್ರು ಆರೋಪ

Date:

  • ಕಬ್ಜʼ ಸಿನಿಮಾ ಪ್ರದರ್ಶನದ ವೇಳೆ ‘ಸೌಂಡ್‌ʼ ತಗ್ಗಿಸಿದ ‘ಮಲ್ಟಿಪ್ಲೆಕ್ಸ್‌ʼ ಸಿಬ್ಬಂದಿ
  • ‘ಮಲ್ಟಿಪ್ಲೆಕ್ಸ್‌ʼನವರಿಗೆ ಚಿತ್ರೋದ್ಯಮದ ಬಗ್ಗೆ ಕಾಳಜಿ ಇಲ್ಲ ಎಂದ ಚಂದ್ರು

ಆರ್‌ ಚಂದ್ರು ಮತ್ತು ಉಪೇಂದ್ರ ಕಾಂಬಿನೇಶನ್‌ನಲ್ಲಿ ತೆರೆಕಂಡಿರುವ ʼಕಬ್ಜʼ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡು ಚಿತ್ರಮಂದಿರಗಳಲ್ಲಿ ತಕ್ಕಮಟ್ಟಿಗೆ ಪ್ರದರ್ಶನ ಕಾಣುತ್ತಿದೆ. ‘ಕಬ್ಜʼ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ಅಭಿಪ್ರಾಯಗಳ ನಡುವೆಯೇ ʼಮಲ್ಟಿಪ್ಲೆಕ್ಸ್‌ʼಗಳಲ್ಲಿ ಚಿತ್ರ ಪ್ರದರ್ಶನದ ವೇಳೆ ಬೇಕಂತಲೇ ‘ಸೌಂಡ್‌ ಎಫೆಕ್ಟ್‌ʼ ತಗ್ಗಿಸಲಾಗುತ್ತಿದೆ ಎಂಬ ಚರ್ಚೆ ಶುರುವಾಗಿದೆ. ಪ್ರೇಕ್ಷಕರ ಈ ಮಾತಿಗೆ ನಿರ್ದೇಶಕ ಆರ್‌ ಚಂದ್ರು ಕೂಡ ಧ್ವನಿಗೂಡಿಸಿದ್ದಾರೆ.

‘ಕಬ್ಜʼ ಸಿನಿಮಾ ಯಶಸ್ಸನ್ನು ಚಿತ್ರತಂಡದೊಂದಿಗೆ ಸಂಭ್ರಮಿಸಿರುವ ಆರ್‌ ಚಂದ್ರು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಪತ್ರಕರ್ತರೊಬ್ಬರು, “ಮಲ್ಟಿಪ್ಲೆಕ್ಸ್‌ಗಳಲ್ಲಿ ʼಕಬ್ಜʼ ಸಿನಿಮಾ ಪ್ರದರ್ಶನದ ವೇಳೆ ‘ಸೌಂಡ್‌ʼ ತಗ್ಗಿಸಲಾಗುತ್ತಿದೆ. ಕನ್ನಡದ ಚಿತ್ರಗಳಿಗೇ ಈ ರೀತಿಯ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ” ಎಂದು ಪ್ರಶ್ನೆ ಹಾಕಿದ್ದಾರೆ.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಚಂದ್ರು, “ಖಂಡಿತವಾಗಿಯೂ ನಮ್ಮಲ್ಲಿ ಈ ಸಮಸ್ಯೆ ಇದೆ. ನಾನು ಈ ವಿಚಾರವನ್ನು ಹೇಳಿದರೆ ಕೆಲವರಿಗೆ ನೋವಾಗುತ್ತದೆ. ಹೇಳದೆ ಹೋದರೆ ತುಂಬಾ ಜನರಿಗೆ ಮೋಸ ಮಾಡಿದಂತಾಗುತ್ತದೆ. ಆದರೂ ಈ ವಿಷಯವನ್ನು ಬಹಿರಂಗಪಡಿಸುತ್ತೇನೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ‘ಸೌಂಡ್‌ ಫ್ರಿಕ್ವೆನ್ಸಿʼಯನ್ನು ಹೆಚ್ಚು ಮಾಡಿದಾಗಲೆಲ್ಲ ಹೆಚ್ಚು ವಿದ್ಯುತ್‌ ಬಳಕೆಯಾಗುತ್ತದೆ. ಮಲ್ಟಿಪ್ಲೆಕ್ಸ್‌ನವರಿಗೆ ಚಿತ್ರಗಳು ಮತ್ತು ಚಿತ್ರತಂಡಗಳ ಬಗ್ಗೆ ಯಾವುದೇ ಕಾಳಜಿ ಇರುವುದಿಲ್ಲ. ಸಿನಿಮಾ ಪ್ರದರ್ಶನದ ವೇಳೆ ಎರಡು ಸ್ಪೀಕರ್‌ಗಳನ್ನು ಬಂದ್‌ ಮಾಡಿ, ಸೌಂಡ್‌ ತಗ್ಗಿಸಿದರೆ ವಿದ್ಯುತ್‌ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗುವುದರಿಂದ ಒಂದು ಪ್ರದರ್ಶನಕ್ಕೆ ಮಲ್ಟಿಪ್ಲೆಕ್ಸ್‌ನವರಿಗೆ ಕನಿಷ್ಠ 10 ಸಾವಿರ ರೂಪಾಯಿ ಉಳಿತಾಯವಾಗುತ್ತದೆ. ನಾನು ಕೂಡ ಈ ಬಗ್ಗೆ ಕೇಳಿ ತಿಳಿದುಕೊಂಡಿದ್ದೇನೆ. ಈ ರೀತಿಯ ಅನುಭವಗಳು ನನಗೂ ಆಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಜರುಗಿಸಲು ಚಲನಚಿತ್ರ ವಾಣಿಜ್ಯ ಮಂಡಳಿಯ ಜೊತೆ ಚರ್ಚಿಸುತ್ತೇನೆ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಲ್ಮಾನ್‌ ಖಾನ್‌ ಜೀವ ಬೆದರಿಕೆ ಪ್ರಕರಣಕ್ಕೆ ಲಂಡನ್‌ ನಂಟು

ಸಿನಿಮಾ ಪ್ರದರ್ಶನದ ವೇಳೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಸೌಂಡ್‌ ತಗ್ಗಿಸಲಾಗುತ್ತದೆ ಎಂಬ ಆರೋಪ ಹಲವು ದಿನಗಳಿಂದ ಕೇಳಿ ಬರುತ್ತಿದೆ. ಈ ಹಿಂದೆ ʼಏಕ್‌ ಲವ್‌ ಯಾʼ ಸಿನಿಮಾ ತೆರೆಕಂಡಾಗ ಮಲ್ಟಿಪ್ಲೆಕ್ಸ್‌ಗಳಲ್ಲಿ ಬೇಕಂತಲೇ ಸೌಂಡ್‌ ತಗ್ಗಿಸುತ್ತಿದ್ದಾರೆ ಎಂದು ಸ್ವತಃ ಚಿತ್ರದ ನಿರ್ದೇಶಕ ಜೋಗಿ ಪ್ರೇಮ್‌ ಅಸಮಾಧಾನ ವ್ಯಕ್ತಪಡಿಸಿದ್ದರು.

Sanket
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾರಿನೊಳಗೆ ಶವವಾಗಿ ಪತ್ತೆಯಾದ ಮಲಯಾಳಂ ನಟ ವಿನೋದ್ ಥಾಮಸ್

ಮಲಯಾಳಂ ನಟ ವಿನೋದ್ ಥಾಮಸ್ ಕೇರಳದ ಕೊಟ್ಟಾಯಂನ ಪಂಪಾಡಿ ಬಳಿಯ ಹೋಟೆಲ್‌ನಲ್ಲಿ...

ತೆಲಂಗಾಣ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ವಿಜಯಶಾಂತಿ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

ಬಹುಭಾಷಾ ನಟಿ ಹಾಗೂ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ವಿಜಯಶಾಂತಿ ಅವರು...

ಮೊದಲು ಹೊಡೆದು ನಂತರ ಕ್ಷಮೆ ಕೇಳಿದ ನಟ ನಾನಾ ಪಾಟೇಕರ್: ವಿಡಿಯೋ ವೈರಲ್

ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ಹಿರಿಯ ನಟ-ನಿರ್ದೇಶಕ ನಾನಾ ಪಾಟೇಕರ್ ಇದೀಗ...

ಬಿಗ್‌ಬಾಸ್ ಶೋನಲ್ಲಿ ಭೋವಿ ಜನಾಂಗಕ್ಕೆ ಅವಹೇಳನ ಆರೋಪ: ಸ್ಪರ್ಧಿ ತನಿಷಾ ವಿರುದ್ಧ ಎಫ್‌ಐಆರ್

ಇತ್ತೀಚೆಗಷ್ಟೇ ಕನ್ನಡದ 'ಬಿಗ್‌ಬಾಸ್ ರಿಯಾಲಿಟಿ ಶೋ'ನಲ್ಲಿ ಸ್ಪರ್ಧಾಳುವಾಗಿದ್ದ ವರ್ತೂರು ಸಂತೋಷ್ ಹುಲಿ...