ʻಲವ್‌ ಮಾಕ್‌ಟೇಲ್‌-3ʼ ಘೋಷಿಸಿದ ಡಾರ್ಲಿಂಗ್‌ ಕೃಷ್ಣ : ಬೇಡ ಗುರು ಸಾಕು ಎಂದ ಅಭಿಮಾನಿಗಳು

Date:

ಪ್ರೇಕ್ಷಕರನ್ನು ಲಘುವಾಗಿ ಪರಿಗಣಿಸಬೇಡಿ ಎಂದ ನೆಟ್ಟಿಗರು

ಅಭಿಪ್ರಾಯ ತಿಳಿಸಿದ್ದಕ್ಕೆ ಬ್ಲಾಕ್‌ ಮಾಡಿದ ಮಿಲನ ನಾಗರಾಜ್‌

ಸ್ಯಾಂಡಲ್‌ವುಡ್‌ನ ಖ್ಯಾತ ನಟ, ನಿರ್ದೇಶಕ ಡಾರ್ಲಿಂಗ್‌ ಕೃಷ್ಣ ಯುಗಾದಿ ಹಬ್ಬದ ಪ್ರಯುಕ್ತ ʼಲವ್‌ ಮಾಕ್‌ಟೇಲ್‌-3ʼ ಚಿತ್ರವನ್ನು ಘೋಷಣೆ ಮಾಡಿದ್ದಾರೆ. ಹೊಸ ಸಿನಿಮಾ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಖುಷಿಯಲ್ಲಿದ್ದ ನಟನಿಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದು, ಈ ಕತೆಯನ್ನು ನೀವು ಉದ್ಯೋಗ ಖಾತ್ರಿ ಯೋಜನೆ ಮಾಡಿಕೊಂಡಿದ್ದಿರೇನು ಎಂದು ಕಿಡಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಡಾರ್ಲಿಂಗ್‌ ಕೃಷ್ಣ ಬುಧವಾರ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ʼಲವ್‌ ಮಾಕ್‌ಟೇಲ್‌-3ʼ ಶೀರ್ಷಿಕೆಯ ಜೊತೆಗೆ ಯುಗಾದಿ ಹಬ್ಬದ ಶುಭಾಶಯದ ಸಂದೇಶವಿರುವ ಫೋಟೋವನ್ನು ಹಂಚಿಕೊಂಡಿದ್ದರು. ಇದೀಗ ಅವರು ʼಲವ್‌ ಮಾಕ್‌ಟೇಲ್‌-3ʼ ಸಿನಿಮಾ ಘೋಷಿಸುತ್ತಲೇ ಅಭಿಮಾನಿಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ಡಾರ್ಲಿಂಗ್‌ ಕೃಷ್ಣ ಹೊಸ ಸಿನಿಮಾ ಘೋಷಣೆಗೆ ಪ್ರತಿಕ್ರಿಯಿಸಿರುವ ಇನ್‌ಸ್ಟಾಗ್ರಾಂ ಬಳಕೆದಾರ ಗಿರೀಶ್‌, ” ʼಲವ್‌ ಮಾಕ್‌ಟೇಲ್‌ʼ ಸಿನಿಮಾ ಮೇಲಿದ್ದ ಅಭಿಮಾನದಿಂದಾಗಿ ಜನ ʼಲವ್‌ ಮಾಕ್‌ಟೇಲ್‌-2ʼ ನೋಡಲು ಚಿತ್ರಮಂದಿರಗಳಿಗೆ ಬಂದರಷ್ಟೇ. ಹೂರಣವೇ ಇಲ್ಲದ ಕತೆಯನ್ನಿಟುಕೊಂಡು ʼಲವ್‌ ಮಾಕ್‌ಟೇಲ್‌-3ʼ ಮಾಡಲು ಹೊರಟಿದ್ದೀರಾ” ಎಂದು ವ್ಯಂಗ್ಯವಾಡಿದ್ದಾರೆ.

ʼಲವ್‌ ಮಾಕ್‌ಟೇಲ್‌-3ʼ ಘೋಷಣೆಯ ಬಗ್ಗೆ ತಿಳಿದ ಟ್ವಿಟರ್‌ ಬಳಕೆದಾರ ದೀಪಕ್‌ ಎಂಬುವವರು, ” ʼಲವ್‌ ಮಾಕ್‌ಟೇಲ್‌-3ʼ ಸಿನಿಮಾ ಮಾಡುವ ಯೋಜನೆಯನ್ನು ದಯವಿಟ್ಟು ನಿಲ್ಲಿಸಿ. ಇತ್ತೀಚೆಗೆ ನಿಮ್ಮ ಯಾವ ಸಿನಿಮಾಗಳು ಕೂಡ ಯಶಸ್ಸು ಕಂಡಿಲ್ಲ. ಪ್ರೇಕ್ಷಕರನ್ನು ಲಘುವಾಗಿ ಪರಿಗಣಿಸಬೇಡಿ. ಸಿನಿಮಾಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದು ಅಗತ್ಯ” ಎಂದು ಖಾರವಾಗಿಯೇ ಕಿವಿಮಾತು ಹೇಳಿದ್ದಾರೆ.

ಕೆಲವರು, “ಅತಿಯಾದರೆ ಅಮೃತವೂ ವಿಷ ಆಗುತ್ತದೆ” ಎಂದರೆ, ಇನ್ನು ಕೆಲವರು, “ಹೀಗೆ ಸರಣಿಗಳನ್ನು ಮಾಡಿ ಮೂಲ ʼಲವ್‌ ಮಾಕ್‌ಟೇಲ್‌ʼ ಚಿತ್ರದ ಹೆಸರನ್ನು ಹಾಳು ಮಾಡಬೇಡಿ” ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಚಿತ್ರದ ಬಗ್ಗೆ ನಮ್ಮ ಅಭಿಪ್ರಾಯ ತಿಳಿಸಿದರೆ ಮಿಲನ ನಾಗರಾಜ್‌ ನಮ್ಮನ್ನು ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಬ್ಲಾಕ್‌ ಮಾಡುತ್ತಿದ್ದಾರೆ ಎಂದು ಕೆಲವರು ದೂರಿದ್ದಾರೆ.

2020ರಲ್ಲಿ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನ ನಾಗರಾಜ್‌ ಮುಖ್ಯಭೂಮಿಕೆಯಲ್ಲಿ ತೆರೆಕಂಡಿದ್ದ ʼಲವ್‌ ಮಾಕ್‌ಟೇಲ್‌ʼ ಸಿನಿಮಾ ಭರ್ಜರಿ ಯಶಸ್ಸು ಗಳಿಸಿತ್ತು. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಬಂದ ಬೆನ್ನಲ್ಲೇ ಕೃಷ್ಣ ʼಲವ್‌ ಮಾಕ್‌ಟೇಲ್‌-2ʼ ಸಿನಿಮಾ ಮಾಡಿದರು. ಆದರೆ, ʼಲವ್‌ ಮಾಕ್‌ಟೇಲ್‌-2ʼ ನಿರೀಕ್ಷಿತ ಮಟ್ಟಿಗೆ ಯಶಸ್ಸು ಕಾಣಲಿಲ್ಲ. ಹೀಗಿರುವಾಗ ಕೃಷ್ಣ, ʼಲವ್‌ ಮಾಕ್‌ಟೇಲ್‌-3ʼ ಘೋಷಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೃಷ್ಣ ಮತ್ತು ಮಿಲನ ಜೋಡಿ ಈ ಗಿಮಿಕ್‌ಗಳನ್ನು ಬಿಟ್ಟು ಭಿನ್ನ ಕಥಾಹಂದರ ಮತ್ತು ಪಾತ್ರಗಳ ಮೂಲಕ ಗುರುತಿಸಿಕೊಳ್ಳಲಿ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ʻಅಜ್ಮೀರ್ 92’ ಚಲನಚಿತ್ರ ನಿಷೇಧಕ್ಕೆ ಜಮೀಯತ್ ಉಲಮಾ ಹಿಂದ್ ಆಗ್ರಹ

ʻದಿ ಕೇರಳ ಸ್ಟೋರಿʼ ಬಳಿಕ ಮುಸ್ಲಿಮ್‌ ಸಮುದಾಯವನ್ನು ಕೆಟ್ಟದಾಗಿ ಚಿತ್ರೀಕರಿಸಿರುವ ಮತ್ತೊಂದು...

ಸುಮ್ಮನಿದ್ದರೆ ಐನ್‌ಸ್ಟೈನ್‌ ಪಠ್ಯವನ್ನೂ ಕಿತ್ತೆಸೆಯುತ್ತಾರೆ ; ʼಎನ್‌ಸಿಆರ್‌ಟಿʼ ನಡೆಗೆ ನಾಸೀರುದ್ದೀನ್‌ ಶಾ ಆಕ್ರೋಶ

10ನೇ ತರಗತಿಯ ಪಠ್ಯಕ್ರಮದಿಂದ ಪ್ರಮುಖ ವಿಷಯಗಳನ್ನು ತೆಗೆದು ಹಾಕಿರುವ ಕೇಂದ್ರ ಸರ್ಕಾರದ...

ಕೋಟಿ ಭುಜಗಳ ಶಕ್ತಿ ಸೂಲಿಬೆಲೆ ಬೆನ್ನಿಗಿದೆ : ನಟ ಜಗ್ಗೇಶ್‌

ಎಚ್ಚರಿಕೆ ನೀಡಿದ ಬಳಿಕವೂ ವಿವಾದಾತ್ಮಕ ಹೇಳಿಕೆ ನೀಡಿದ ಸೂಲಿಬೆಲೆ ಸಿಎಂ ಸಿದ್ದರಾಮಯ್ಯ ಹಿಟ್ಲರ್‌...

ಬಾಲಿವುಡ್‌ನ ಹಿರಿಯ ನಟ ಗೂಫಿ ಪೈಂತಲ್‌ ಇನ್ನಿಲ್ಲ

ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದ ಗೂಫಿ ಪೈಂತಲ್‌ ಹಿರಿಯ ನಟನ ಅಗಲಿಕೆಗೆ ಕಂಬನಿ ಮಿಡಿದ...