ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ

Date:

  • ಇ-ಮೇಲ್‌ ಮೂಲಕ ಬೆದರಿಕೆ ಸಂದೇಶ ರವಾನಿಸಿದ್ದ ಆರೋಪಿ
  • ಬಂಧಿತ ಆರೋಪಿ ಲಾರೆನ್ಸ್‌ ಬಿಷ್ಣೋಯಿ ಸಹಚರ

ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್‌ ಖಾನ್‌ ಅವರಿಗೆ ಇ-ಮೇಲ್‌ ಮೂಲಕ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಬಂಧಿತನನ್ನು ರಾಜಸ್ಥಾನದ ಜೋಧ್‌ಪುರ್‌ ಮೂಲದ ಧಾಕಡ್‌ ರಾಮ್‌ ಬಿಷ್ಣೋಯಿ ಎಂದು ಗುರುತಿಸಲಾಗಿದೆ. ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿರುವ ಮುಂಬೈನ ಬಾಂದ್ರಾ ಠಾಣೆಯ ಪೊಲೀಸರ ತಂಡ ಭಾನುವಾರ ಜೋಧ್‌ಪುರ್‌ ಸಮೀಪದಲ್ಲಿರುವ ʼರೋಹಿಚಾ ಕಲನ್‌ʼಗೆ ಭೇಟಿ ನೀಡಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ, ಈ ಹಿಂದೆ ಸಲ್ಮಾನ್‌ ಖಾನ್‌ ಹತ್ಯಗೆ ಯತ್ನಿಸಿದ್ದ ಲಾರೆನ್ಸ್‌ ಬಿಷ್ಣೋಯಿ ಸಹಚರ ಎನ್ನಲಾಗಿದೆ.

ಇತ್ತೀಚೆಗೆ ಸಲ್ಮಾನ್‌ ಖಾನ್‌ ಆಪ್ತ ಸಹಾಯಕ ಪ್ರಶಾಂತ್‌ ಗುಂಜಲ್ಕರ್‌ ಅವರಿಗೆ ಇ-ಮೇಲ್‌ ಮೂಲಕ ಸಂದೇಶ ರವಾನಿಸಿದ್ದ ಧಾಕಡ್‌ ರಾಮ್‌, ನಟನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಆತನ ಸಂದೇಶದಲ್ಲಿ ಕುಖ್ಯಾತ ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ ಹೆಸರು ಕೂಡ ಉಲ್ಲೇಖವಾಗಿತ್ತು. “ಗೋಲ್ಡಿ ಬ್ರಾರ್‌ ನಿಮ್ಮ ಮಾಲೀಕನ (ಸಲ್ಮಾನ್‌ ಖಾನ್‌) ಜೊತೆಗೆ ಮಾತನಾಡಲು ಇಚ್ಛಿಸಿದ್ದಾನೆ. ನಿಮ್ಮ ಮಾಲೀಕ ಇನ್ನೂ ಲಾರೇನ್ಸ್‌ ಬಿಷ್ಣೋಯಿಯ ಸಂದರ್ಶನದ ವಿಡಿಯೋ ನೋಡಿಲ್ಲವಾದರೆ, ಮೊದಲು ಆ ಸಂದರ್ಶನದ ವಿಡಿಯೋ ನೋಡಲು ಹೇಳಿ. ಆತ ಈ ವಿವಾದವನ್ನು ಇಲ್ಲಿಗೆ ಅಂತ್ಯಗೊಳಿಸಲು ಇಚ್ಛಿಸಿದ್ದರೆ ಗೋಲ್ಡಿ ಬ್ರಾರ್‌ ಜೊತೆಗೆ ಮುಖಾಮುಖಿ ಮಾತುಕತೆಗೆ ಬರುತ್ತಾನೆಯೇ ಕೇಳಿ. ಈ ಬಾರಿ ಸುಮ್ಮನೆ ಸಂದೇಶ ಕಳುಹಿಸಿದ್ದೇವೆ. ಮುಂದಿನ ಬಾರಿ ಹೀಗಾಗುವುದಿಲ್ಲ, ನಮ್ಮ ನಡೆಯನ್ನು ಕಂಡು ನೀವೇ ಆಘಾತಕ್ಕೊಳಗಾಗುತ್ತೀರಿ” ಎಂದು ಬೆದರಿಸಿದ್ದ.

ಈ ಸುದ್ದಿ ಓದಿದ್ದೀರಾ? ಮಲಯಾಳಂನ ಹಿರಿಯ ನಟ ಇನ್ನೋಸೆಂಟ್‌ ಇನ್ನಿಲ್ಲ

ಇದಾದ ಬೆನ್ನಲ್ಲೇ ಸಲ್ಮಾನ್‌ ಖಾನ್‌ ಮುಂಬೈನ ಬಾಂದ್ರಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಈ ಹಿಂದೆ ನಟನ ಹತ್ಯೆಗೆ ಯತ್ನಿಸಿದ್ದ ಮತ್ತು ಅನ್ಯ ಪ್ರಕರಣದಲ್ಲಿ ಈಗಾಗಲೇ ಸೆರೆವಾಸ ಅನುಭವಿಸುತ್ತಿರುವ ಲಾರೇನ್ಸ್‌ ಬಿಷ್ಣೋಯಿ, ಗೋಲ್ಡಿ ಬ್ರಾರ್‌ ಮತ್ತು ರೋಹಿತ್‌ ಗರ್ಗಿ ಅವರ ವಿರುದ್ಧ ಜೀವ ಬೆದರಿಕೆ ಹಾಕಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು. ಮಾರ್ಚ್‌ 24ರಂದು ಸಲ್ಮಾನ್‌ ಖಾನ್‌ ಆಪ್ತ ಸಹಾಯಕರಿಗೆ ಬಂದಿರುವ ಇ-ಮೇಲ್‌ ವಿಳಾಸದ ವಿವರವನ್ನು ಪೊಲೀಸರು ಕಲೆ ಹಾಕಿದ್ದರು. ಇ-ಮೇಲ್‌ ಖಾತೆಗೆ ಬಳಸಲಾಗಿರುವ ಮೊಬೈಲ್‌ ಸಂಖ್ಯೆ ಲಂಡನ್‌ ಮೂಲದ ವ್ಯಕ್ತಿಯ ಹೆಸರಿನಲ್ಲಿದೆ ಎಂದು ಮಾಹಿತಿ ನೀಡಿದ್ದರು. ಇದಾದ ಕೆಲವೇ ದಿನಕ್ಕೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧನಕ್ಕೊಳಪಡಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕುತೂಹಲ ಹೆಚ್ಚಿಸಿದ ʼಆದಿಪುರುಷ್‌ʼ 2ನೇ ಟ್ರೈಲರ್‌

ಜೂನ್‌ 16ಕ್ಕೆ ತೆರೆಗೆ ಬರಲಿದೆ ʼಆದಿಪುರುಷ್‌ʼ ಒಂದೂವರೆ ಕೋಟಿ ವೀಕ್ಷಣೆ ಪಡೆದ ಟ್ರೈಲರ್‌ ತೆಲುಗಿನ...

ಈ ದಿನ ವಿಶೇಷ | ಗ್ಯಾರಂಟಿ ಯೋಜನೆಗಳ ಬಗ್ಗೆ ಸಿನಿ ತಾರೆಯರ ಮಾತು

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿಯ...

2 ಭಾಗಗಳಲ್ಲಿ ತೆರೆಗೆ ಬರಲಿದೆ ʼಸಪ್ತ ಸಾಗರದಾಚೆ ಎಲ್ಲೋʼ

40ನೇ ವಸಂತಕ್ಕೆ ಕಾಲಿಟ್ಟ ರಕ್ಷಿತ್‌ ಶೆಟ್ಟಿ ನಿರೀಕ್ಷೆ ಹೆಚ್ಚಿಸಿದ ʼಸಪ್ತ ಸಾಗರದಾಚೆ ಎಲ್ಲೋʼ...

ಪ್ರೇಕ್ಷಕರನ್ನು ಸೆಳೆಯಲು ಟಿಕೆಟ್‌ ದರ ತಗ್ಗಿಸಿದ ʼಡೇರ್‌ಡೆವಿಲ್‌ ಮುಸ್ತಾಫಾʼ ಚಿತ್ರತಂಡ

ಮೂರನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರ ವಿದೇಶಗಳಲ್ಲೂ ಸದ್ದು ಮಾಡಿದ ಪೂರ್ಣಚಂದ್ರ...