ಖ್ಯಾತ ಬಂಗಾಳಿ ನಟಿ ಸುಚಂದ್ರ ರಸ್ತೆ ಅಪಘಾತಕ್ಕೆ ಬಲಿ

Date:

ಶೂಟಿಂಗ್‌ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಅಪಘಾತ

ಬಂಗಾಳಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಸುಚಂದ್ರ ದಾಸ್‌ಗುಪ್ತ

ಬಂಗಾಳಿ ಚಿತ್ರರಂಗದ ಖ್ಯಾತ ನಟಿ ಸುಚಂದ್ರ ದಾಸ್‌ಗುಪ್ತ ಶನಿವಾರ ರಾತ್ರಿ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಿರುತೆರೆಯಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದ 29 ವರ್ಷದ ಸುಚಂದ್ರ ಶೂಟಿಂಗ್‌ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

ಶನಿವಾರ ಕೊಲ್ಕತ್ತಾದ ಬಾರಾನಗರ ಸಮೀಪದಲ್ಲಿ ನಡೆಯುತ್ತಿದ್ದ ಸಿನಿಮಾದ ಶೂಟಿಂಗ್‌ ಮುಗಿಸಿಕೊಂಡು ಬೈಕ್‌ ಟ್ಯಾಕ್ಸಿಯಲ್ಲಿ ಸುಚಂದ್ರ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಮಾರ್ಗಮಧ್ಯೆ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಯಿಂದ ಸುಚಂದ್ರ ಕುಳಿತಿದ್ದ ಬೈಕ್‌ ಟ್ಯಾಕ್ಸಿಗೆ ಡಿಕ್ಕಿ ಹೊಡೆದು, ನಟಿಯ ಮೇಲೆ ಹರಿದು ಹೋಗಿದೆ. ಪರಿಣಾಮ ಸುಚಂದ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಸುದ್ದಿ ಓದಿದ್ದೀರಾ? ಒಟಿಟಿಯಲ್ಲಿ ಹೊಸ ದಾಖಲೆ ಸೃಷ್ಟಿಸಿದ ʼಹೊಂದಿಸಿ ಬರೆಯಿರಿʼ

ಘಟನೆಯ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಬಾರಾನಗರ ಠಾಣೆಯ ಪೊಲೀಸರು ಲಾರಿ ಚಾಲಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ನಟಿಯ ಮೃತದೇಹವನ್ನು ಕೂಡಲೇ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಭಾನುವಾರ ನಟಿಯ ಅಂತ್ಯಕ್ರಿಯೆ ನೆರವೇರಿದೆ.

ʼಗೌರಿ ಎಲೋʼ, ʼಪೊಲೀಸ್‌ ಫೈಲ್ಸ್‌ʼ ಸೇರಿದಂತೆ ಬಂಗಾಳಿಯ ಹಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದ ಸುಚಂದ್ರ, ಬಂಗಾಳಿ ಸಿನಿಮಾಗಳಲ್ಲೂ ಪ್ರಮುಖ ಪಾತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಳೇನಹಳ್ಳಿಯ ಧನಂಜಯ ʼಡಾಲಿʼ ಆದ ಕಥೆ

ನಟ ಡಾಲಿ ಧನಂಜಯ ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿದ್ದಾರೆ....

ಉಚಿತ ಅಕ್ಕಿ ಕೊಟ್ಟರೆ ಬಡವ ಸೋಮಾರಿ ಆಗಲ್ಲ : ಧನಂಜಯ

ಸರ್ಕಾರಿ ಶಾಲೆಗಳು ಉಳಿಯಬೇಕು ಎಂದ ಧನಂಜಯ ಹಳ್ಳಿಮಕ್ಕಳನ್ನು ಪ್ರೀತಿಯಿಂದ ಶಾಲೆಗೆ ಬರಮಾಡಿಕೊಂಡ ಸ್ಟಾರ್‌...

ಹೆಚ್ಚುತ್ತಿರುವ ದ್ವೇಷ ಮತ್ತು ಹಿಂದಿ ಚಿತ್ರರಂಗದ ʼಜಾಣ ಮೌನʼ

ಆರ್ಯನ್‌ ಖಾನ್‌ ಬಂಧನ ಹಿಂದಿ ಚಿತ್ರರಂಗಕ್ಕೆ ನೀಡಿದ ಸಂದೇಶ ಶಾರುಖ್‌ ಖಾನ್‌ ಸ್ಥಿತಿಯೇ...

ಅಪ್ಪು ನೆನಪು | ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡ ರಾಘವೇಂದ್ರ ರಾಜ್‌ಕುಮಾರ್‌

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ದೈಹಿಕವಾಗಿ ನಮ್ಮನಗಲಿ ಒಂದೂವರೆ ವರ್ಷ ಕಳೆದಿದೆ....