ʼಧೂಮಂʼ | ಕನ್ನಡ ಅವತರಣಿಕೆಯ ಟ್ರೈಲರ್‌ ಕಳಪೆ ಎಂದ ನೆಟ್ಟಿಗರು

Date:

ಜೂನ್‌ 23ಕ್ಕೆ ತೆರೆಗೆ ಬರಲಿದೆ ಫಹಾದ್‌ ಫಾಸಿಲ್‌ ಸಿನಿಮಾ

ಕನ್ನಡ ಡಬ್ಬಿಂಗ್‌ ಬಗ್ಗೆ ತಲೆಕೆಡಿಸಿಕೊಳ್ಳದ ಪವನ್‌ ಕುಮಾರ್‌

ಮಲಯಾಳಂನ ಖ್ಯಾತ ನಟ ಫಹಾದ್‌ ಫಾಸಿಲ್‌ ಮತ್ತು ಲೂಸಿಯಾ ಖ್ಯಾತಿಯ ಕನ್ನಡದ ನಿರ್ದೇಶಕ ಪವನ್‌ ಕುಮಾರ್‌ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ʼಧೂಮಂʼ ಸಿನಿಮಾದ ಬಹುನಿರೀಕ್ಷಿತ ಟ್ರೈಲರ್‌ ಗುರುವಾರ ಬಿಡುಗಡೆಯಾಗಿದೆ.

ಕ್ರೈಂ ಮತ್ತು ಸಸ್ಪೆನ್ಸ್‌ ಕಥಾಹಂದರವನ್ನು ಹೊಂದಿರುವ ʼಧೂಮಂʼ ಚಿತ್ರದಲ್ಲಿ ಫಹಾದ್‌ ಫಾಸಿಲ್‌ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದುಡ್ಡು ಮಾಡಲು ಅಡ್ಡ ದಾರಿ ಹಿಡಿಯುವ ವ್ಯಕ್ತಿಗಳ ದುರಂತ ಬದುಕಿನ ಸುತ್ತ ಚಿತ್ರದ ಕಥೆಯನ್ನು ಕುತೂಹಲಕಾರಿಯಾಗಿ ಹೆಣೆಯಲಾಗಿದೆ ಎಂಬುದನ್ನು ಎರಡೂವರೆ ನಿಮಿಷಗಳ ಟ್ರೈಲರ್‌ನಲ್ಲಿ ಸೂಚ್ಯವಾಗಿ ತೋರಿಸಲಾಗಿದೆ.

ʼಧೂಮಂʼ ಸಿನಿಮಾ ಮಲಯಾಳಂ, ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಸಿದ್ಧಗೊಂಡಿದೆ. ಸದ್ಯ ಈ ಐದು ಭಾಷೆಗಳಲ್ಲಿ ಸಿನಿಮಾದ ಟ್ರೈಲರ್‌ಗಳು ಬಿಡುಗಡೆಯಾಗಿವೆ. ಆದರೆ, ಈ ಪೈಕಿ ಕನ್ನಡ ಅವತರಣಿಕೆಯ ಟ್ರೈಲರ್‌ ಸಿನಿ ರಸಿಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಚಿತ್ರದ ನಾಯಕ ಫಹಾದ್‌ ಫಾಸಿಲ್‌ ಅವರ ಪಾತ್ರಕ್ಕೆ ಕನ್ನಡದಲ್ಲಿ ನೀಡಲಾಗಿರುವ ಧ್ವನಿ ಹೊಂದಿಕೆಯಾಗುತ್ತಿಲ್ಲ. ಹೀಗೆ ಕೆಲವು ಪಾತ್ರಗಳಿಗೆ ಧ್ವನಿ ಸರಿ ಹೊಂದುತ್ತಿಲ್ಲ. ನಿರ್ದೇಶಕರು ಕನ್ನಡದವರೇ ಆದರೂ ಈ ಬಗ್ಗೆ ಹೆಚ್ಚು ಗಮನ ಹರಿಸಿದಂತಿಲ್ಲ. ಈ ಹಿನ್ನೆಲೆ ನೆಟ್ಟಿಗರು ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಫಹಾದ್‌ ಫಾಸಿಲ್‌ ಮುಖ್ಯಭೂಮಿಕೆ ನಿಭಾಯಿಸಿರುವ ʼಧೂಮಂʼ ಚಿತ್ರದಲ್ಲಿ ಖ್ಯಾತ ನಟಿ ಅಪರ್ಣಾ ಬಾಲಮುರಳಿ ನಾಯಕಿಯ ಪಾತ್ರದಲ್ಲಿ ಮಿಂಚಿದ್ದಾರೆ. ರೋಶನ್‌ ಮ್ಯಾಥ್ಯೂ, ವಿನೀತ್‌ ರಾಧಾಕೃಷ್ಣನ್‌, ಅನು ಮೋಹನ್‌ ಮತ್ತು ಅಚ್ಯುತ್‌ ಕುಮಾರ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಜನಪ್ರಿಯ ಚಿತ್ರ ನಿರ್ಮಾಣ ಸಂಸ್ಥೆ ʼಹೊಂಬಾಳೆ ಫಿಲಂಸ್‌ʼ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಟೀಸರ್‌ ಮತ್ತು ಟ್ರೈಲರ್‌ ಮೂಲಕ ಕುತೂಹಲ ಮೂಡಿಸಿರುವ ಈ ಸಿನಿಮಾ ಜೂನ್‌ 23ಕ್ಕೆ ಜಗತ್ತಿನಾದ್ಯಂತ ತೆರೆಗೆ ಬರಲಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂಡಿಯಾ-ಭಾರತ್‌ ವಿವಾದ : ಅಕ್ಷಯ್‌ ಕುಮಾರ್‌ ಸಮಯ ಸಾಧಕ ಬುದ್ಧಿಗೆ ಛೀಮಾರಿ ಹಾಕಿದ ನೆಟ್ಟಿಗರು

ಕೇಂದ್ರ ಸರ್ಕಾರ ದೇಶದ ಹೆಸರನ್ನು ಬದಲಿಸಲು ಮುಂದಾಗಿದೆ ಎಂಬ ಚರ್ಚೆ ಜೋರಾಗಿರುವ...

ಇದಾವುದು ಹೊಸ ಧರ್ಮ, ಸನಾತನ ಎಂದು ಪ್ರಶ್ನಿಸಿದ ಬಹುಭಾಷಾ ನಟ ಕಿಶೋರ್ ಕುಮಾರ್

ಒಳ್ಳೆಯ ಕೆಲಸ ಮಾಡುವುದಷ್ಟೇ ಧರ್ಮವೇ ಹೊರತು ಹಲವು ನಂಬಿಕೆಯ ಮೂಟೆಗಳಲ್ಲ ಮನುಷ್ಯರನ್ನು ಮನುಷ್ಯರಾಗಿ...

‘ನಟಿ ರಮ್ಯಾ ಹೃದಯಾಘಾತದಿಂದ ನಿಧನ’ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು!

ಸುದ್ದಿ ನಿಜವೆಂದು ತಿಳಿದು ಸಂತಾಪ ಸೂಚಿಸಿ ಟ್ವೀಟ್‌ ಮಾಡಿದ್ದ ಹಲವಾರು ನೆಟ್ಟಿಗರು 'ಅವರು...

ಚಿಕ್ಕಮಗಳೂರು | ಬೈಕ್‌ಗೆ ಕಾರು ಢಿಕ್ಕಿ; ಕಾರು ನಟ ಚಂದ್ರಪ್ರಭಗೆ ಸೇರಿದ್ದೆಂದು ಆರೋಪ

ಚಿಕ್ಕಮಗಳೂರಿನಲ್ಲಿ ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು, ಅಪಘಾತವಾಗಿರುವ ಘಟನೆ ನಡೆದಿದೆ....