ತಮಿಳುನಾಡಿನ ಖ್ಯಾತ ನಟ, ನಿರ್ದೇಶಕ ಮಾರಿಮುತ್ತು ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು.
ಇತ್ತೀಚೆಗೆ ಬಿಡುಗಡೆಯಾದ ‘ಜೈಲರ್’ ಸಿನಿಮಾದಲ್ಲಿ ಅವರು ವಿಲನ್ ಸಹಚರನ ಪಾತ್ರ ಮಾಡಿದ್ದರು.
ಚೆನ್ನೈನ ಸ್ಟುಡಿಯೋದಲ್ಲಿ ಟಿವಿ ಶೋ ಒಂದರ ಡಬ್ಬಿಂಗ್ನ ಕೆಲಸ ಮಾಡುತ್ತಿರುವಾಗಲೇ ಕುಸಿದು ಬಿದ್ದಿದ್ದಾರೆ.
ಹೃದಯಾಘಾತ ಆದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಬಳಿಕ ಪರೀಕ್ಷಿಸಿದ ಆಸ್ಪತ್ರೆಯ ವೈದ್ಯರು ನಿಧನರಾಗಿರುವುದಾಗಿ ತಿಳಿಸಿದ್ದಾರೆ. ಮಾರಿಮುತ್ತು ಸಾವಿಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
ಮಾರಿಮುತ್ತು ಅವರು ಚಿತ್ರರಂಗಕ್ಕೆ 1999ರಲ್ಲಿ ಕಾಲಿಟ್ಟಿದ್ದು, ಅಜಿತ್ ಕುಮಾರ್ ನಟನೆಯ ‘ವಾಲಿ’ ಅವರ ಇವರ ಮೊದಲ ಸಿನಿಮಾವಾಗಿತ್ತು. ಬಳಿಕ ಅವರು ಹಲವು ಪೋಷಕ ಪಾತ್ರದಲ್ಲಿ ನಟಿಸಿದರು.
‘ತೇರಿ’ ಸಿನಿಮಾದಲ್ಲಿ ಅವರು ರಾಜಕಾರಣಿಯ ಪಾತ್ರ ಮಾಡಿದ್ದರು. ಕಮಲ್ ಹಾಸನ್ ನಟನೆಯ ಇಂಡಿಯನ್ 2 ಚಿತ್ರದಲ್ಲಿ ಅವರು ನಟಿಸುತ್ತಿದ್ದರು. ಸಿನಿಮಾ ಶೂಟಿಂಗ್ ಪ್ರಗತಿಯಲ್ಲಿರುವಾಗಲೇ ಅವರು ಕೊನೆಯುಸಿರೆಳೆದಿದ್ದಾರೆ.