ಕೇರಳದಲ್ಲಿ ಷಡ್ಯಂತ್ರದ ಸಿನಿಮಾ ಆಟ ನಡೆಯಲ್ಲ ; ಬೀನಾ ಪೌಲ್‌

Date:

ʼದಿ ಕೇರಳ ಸ್ಟೋರಿʼ ದುರುದ್ದೇಶದ ಸಿನಿಮಾ ಎಂದ ಖ್ಯಾತ ಸಂಕಲನಕಾರ್ತಿ

ಕೇರಳದ ಜನ ಅಸಲಿ ಕಥೆಯನ್ನು ಗೆಲ್ಲಿಸಿದ್ದಾರೆ ಎಂದ ಬೀನಾ

ತಿರುಚಿದ ಕಥಾಹಂದರದ ಕಾರಣಕ್ಕೇ ಸುದ್ದಿಯಲ್ಲಿರುವ ʼದಿ ಕೇರಳ ಸ್ಟೋರಿʼ ಸಿನಿಮಾದ ಬಗ್ಗೆ ರಾಷ್ಟ್ರ ಪ್ರಶಸ್ತಿ ವೀಜೆತೆ, ಮಲಯಾಳಂನ ಖ್ಯಾತ ಸಿನಿಮಾ ಸಂಕಲನಕಾರ್ತಿ ಬೀನಾ ಪೌಲ್‌ ಮಾತನಾಡಿದ್ದು, ಇದು ಮೌಲ್ಯಗಳೇ ಇಲ್ಲದ ದುರುದ್ದೇಶಪೂರಿತ ಚಿತ್ರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಬೀನಾ ಪೌಲ್‌, “ಇಂತಹ ದುರುದ್ದೇಶಪೂರಿತ ಚಿತ್ರಕ್ಕೆ ಅನಗತ್ಯವಾಗಿ ಪ್ರಚಾರ ನೀಡಲಾಗುತ್ತಿದೆ. ಯಾರು ಕೂಡ ಈ ಚಿತ್ರದ ಬಗ್ಗೆ ಮಾತನಾಡದೆ ಕಡೆಗಣಿಸಿದ್ದರೆ ತನ್ನಷ್ಟಕ್ಕೆ ತಾನೇ ಸೋತು ಮೂಲೆ ಸೇರುತ್ತಿತ್ತು. ಇವತ್ತಿನ ಪರಿಸ್ಥಿತಿಯಲ್ಲಿ ಯಾರು ಬೇಕಾದರೂ ದುರುದ್ದೇಶದ ಸಿನಿಮಾಗಳನ್ನು ಮಾಡಬಹುದು. ಯಾಕೆಂದರೆ ಅಂಥವರನ್ನೇ ರಕ್ಷಿಸಲಾಗುತ್ತಿದೆ. ತಿರುಚಿದ ಕಥಾಹಂದರದ ಕಾರಣಕ್ಕೆ ನ್ಯಾಯಾಲಯದ ಆದೇಶ ಪಾಲಿಸಿ ನಿರ್ದೇಶಕರು ಚಿತ್ರದ ಟ್ರೈಲರ್‌ ಅನ್ನು ಬದಲಿಸಬೇಕಾಯಿತು. ಆದರೆ, ಆ ಬಗ್ಗೆ ಯಾರು ಕೂಡ ಮಾತನಾಡುವುದಿಲ್ಲ” ಎಂದಿದ್ದಾರೆ.

“ನಿರ್ದಿಷ್ಟ ಜನರ ಆಶಯಗಳನ್ನು ಪೋಷಿಸುವ ಸಲುವಾಗಿ ಈ ಸಿನಿಮಾ ಮಾಡಿದ ಹಾಗಿದೆ. ಆದರೆ, ಈ ಷಡ್ಯಂತ್ರದ ಸಿನಿಮಾ ಆಟ ನಮ್ಮ ಕೇರಳದ ಜನರ ಎದುರು ನಡೆಯಲಿಲ್ಲ. ಕೇರಳಿಗರು ʼದಿ ಕೇರಳ ಸ್ಟೋರಿʼಯನ್ನು ನಿರಾಕರಿಸಿದರು. ಈ ಸಿನಿಮಾಗೆ ಎದುರಾಗಿ ಬಿಡುಗಡೆಯಾದ ಕೇರಳದ ಅಸಲಿ ಕಥೆಯುಳ್ಳ ʼ2018ʼ ಚಿತ್ರವನ್ನು ಜನ ಗೆಲ್ಲಿಸಿದರು” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹೆಚ್ಚುತ್ತಿರುವ ದ್ವೇಷ ಮತ್ತು ಹಿಂದಿ ಚಿತ್ರರಂಗದ ʼಜಾಣ ಮೌನʼ

ಬೀನಾ ಪೌಲ್‌ ಮಾತ್ರವಲ್ಲ, ಕಮಲ್‌ ಹಾಸನ್‌, ನವಾಜುದ್ದೀನ್‌ ಸಿದ್ದಿಕಿ, ಅನುರಾಗ್‌ ಕಶ್ಯಪ್‌, ನಾಸಿರುದ್ದೀನ್‌ ಶಾ ಸೇರಿದಂತೆ ಭಾರತೀಯ ಚಿತ್ರರಂಗದ ಹಲವು ತಾರೆಯರು ಮತ್ತು ತಂತ್ರಜ್ಞರು ʼದಿ ಕೇರಳ ಸ್ಟೋರಿʼ ಚಿತ್ರವನ್ನು ವಿರೋಧಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜನ ಪಾಪ್‌ಕಾರ್ನ್ ಬೆಲೆಗೆ ಹೆದರಿ ಮಲ್ಟಿಫ್ಲೆಕ್ಸ್, ಥಿಯೇಟರ್‌ಗಳಿಗೆ ಬರುತ್ತಿಲ್ಲವೇ?

ತೆಲುಗು ಸಿನಿಮಾ ನಿರ್ದೇಶಕ ತೇಜಾ ಇತ್ತೀಚೆಗೆ ಯೂ ಟ್ಯೂಬ್ ಸಂದರ್ಶನವೊಂದರಲ್ಲಿ ಒಂದು...

ದಸರಾ | ನನಗೆ ಸಿಕ್ಕಿದ್ದು ಸಾಮಾಜಿಕ ಕಲಾ ನ್ಯಾಯ: ಹಂಸಲೇಖ

ಮೈಸೂರು ದಸರಾ ಉದ್ಘಾಟನೆಗೆ ಈ ಬಾರಿ ನನ್ನನ್ನು ಸರ್ಕಾರ ಆಯ್ಕೆ ಮಾಡಿದೆ....

ಶಾರುಖ್ ಖಾನ್‌ ನಟಿಸಿದ ‘ಜವಾನ್’ ಸಿನಿಮಾ ಯಾಕೆ ರಾಜಕೀಯವಾಗಿ ಚರ್ಚೆಯಲ್ಲಿದೆ?

ವಿಶ್ವದಾದ್ಯಂತ ಮೊದಲ ದಿನ 129.6 ಕೋಟಿ ಗಳಿಸಿದ ಶಾರೂಖ್ ಖಾನ್ ನಟನೆಯ...