ನಿರೀಕ್ಷೆ ಹೆಚ್ಚಿಸಿದ ʼಅಜ್ಞಾತವಾಸಿʼ ಟೀಸರ್

Date:

ʼಅಜ್ಞಾತವಾಸಿʼ ಟೀಸರ್‌ ಮೆಚ್ಚಿಕೊಂಡ ಸಿನಿಮಾ ಮಂದಿ

ಎರಡು ಲಕ್ಷ ವೀಕ್ಷಣೆ ಪಡೆದ ಕುತೂಹಲಕಾರಿ ಟೀಸರ್‌

ʼಗುಲ್ಟೂʼ ಖ್ಯಾತಿಯ ನಿರ್ದೇಶಕ ಜನಾರ್ಧನ್‌ ಚಿಕ್ಕಣ್ಣ ನಿರ್ದೇಶನದ ʼಅಜ್ಞಾತವಾಸಿʼ ಚಿತ್ರದ ಬಹುನಿರೀಕ್ಷಿತ ಟೀಸರ್‌ ಬಿಡುಗಡೆಯಾಗಿದ್ದು, ಸಿನಿ ರಸಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ʼಅಜ್ಞಾತವಾಸಿʼ ಚಿತ್ರ, ಹಳ್ಳಿಯೊಂದರಲ್ಲಿ ಸರಣಿಯಾಗಿ ನಡೆಯುವ ಅನುಮಾನಾಸ್ಪದ ಸಾವುಗಳ ಸುತ್ತ ಮೂಡಿಬಂದಿದೆ ಎಂಬುದನ್ನು ಟೀಸರ್‌ನಲ್ಲಿ ಸೂಚ್ಯವಾಗಿ ತೋರಿಸಲಾಗಿದೆ. ಸಿದ್ದು ಮೂಲಿಮನಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಂಗಾಯಣ ರಘು, ಪಾವನಾ ಗೌಡ, ಶರತ್‌ ಲೋಹಿತಾಶ್ವ, ರವಿಶಂಕರ್‌ ಗೌಡ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಭಿನ್ನ ಶೀರ್ಷಿಕೆ ಮತ್ತು ಕುತೂಹಲಕಾರಿ ಟೀಸರ್‌ ಮೂಲಕ ಗಮನ ಸೆಳೆಯುತ್ತಿರುವ ʼಅಜ್ಞಾತವಾಸಿʼ ಚಿತ್ರಕ್ಕೆ ಬಾಲಿವುಡ್‌ ನಟ ರಿತೇಶ್‌ ದೇಶ್‌ಮುಖ್‌, ಜೆನಿಲಿಯಾ, ಕಿಚ್ಚ ಸುದೀಪ್‌, ಗೋಲ್ಡನ್‌ ಸ್ಟಾರ್‌ ಗಣೇಶ್‌ ಸೇರಿದಂತೆ ಹಲವು ಸ್ಟಾರ್‌ ನಟರು ಟ್ವೀಟ್‌ ಮೂಲಕ ಶುಭಕೋರಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಚರಣ್‌ ರಾಜ್‌ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಹೇಮಂತ್‌ ರಾವ್‌, ಪ್ರಚುರ ಮತ್ತು ಜಯಲಕ್ಷ್ಮಿ ಎಂಬುವವರು ಬಂಡವಾಳ ಹೂಡಿದ್ದಾರೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೆಲುಗಿನ ಹಿರಿಯ ನಿರ್ದೇಶಕ ಕೆ. ವಾಸು ಇನ್ನಿಲ್ಲ

ಮೆಗಾಸ್ಟಾರ್‌ ಚಿರಂಜೀವಿ ಚೊಚ್ಚಲ ಚಿತ್ರ ನಿರ್ದೇಶಿಸಿದ್ದ ವಾಸು ಜಗ್ಗೇಶ್‌ ನಟನೆಯ ʼಸರ್ವರ್‌ ಸೋಮಣ್ಣʼ...

ಮಂತ್ರಿಯಾದ ಮಧು ಬಂಗಾರಪ್ಪ : ಶ್ರಮದ ಪ್ರತಿಫಲ ಎಂದ ಶಿವಣ್ಣ

ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಧು ಬಂಗಾರಪ್ಪ ಚುನಾವಣೆಯಲ್ಲಿ ಕಾಂಗ್ರೆಸ್‌...

ಯಶ್‌ ಜೊತೆಗೆ ನರ್ತನ್‌ ಸಿನಿಮಾ ಸದ್ಯಕ್ಕಿಲ್ಲ

ಶಿವರಾಜ್‌ ಕುಮಾರ್‌ ನಟನೆಯ ʼಭೈರತಿ ರಣಗಲ್‌ʼ ಸಿನಿಮಾದಲ್ಲಿ ನರ್ತನ್‌ ಬ್ಯುಸಿ ಕೆಜಿಎಫ್‌-2 ಬಿಡುಗಡೆಯಾಗಿ...

ʼದಿ ಡೈರಿ ಆಫ್‌ ವೆಸ್ಟ್‌ ಬೆಂಗಾಲ್‌ʼ ಚಿತ್ರದ ನಿರ್ದೇಶಕನಿಗೆ ಕೋಲ್ಕತ್ತಾ ಪೊಲೀಸರಿಂದ ನೋಟಿಸ್‌

ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗುರಿಯಾಗಿಸಿ ಸಿನಿಮಾ ಮಾಡಿದ ಸನೋಜ್‌ ಟ್ರೈಲರ್‌ ಬಿಡುಗಡೆಯಾದ...