ಒಟಿಟಿ ಹಾವಳಿ ವಿರೋಧಿಸಿ ಪ್ರತಿಭಟನೆಗಿಳಿದ ಕೇರಳದ ಥಿಯೇಟರ್‌ ಮಾಲೀಕರು

Date:

ತಿಂಗಳು ಕಳೆಯುವ ಮುನ್ನವೇ ಒಟಿಟಿಯಲ್ಲಿ ಬಿಡುಗಡೆಯಾದ ʼ2018ʼ ಸಿನಿಮಾ

ಕೇರಳದ ಬಹುಪಾಲು ಥಿಯೇಟರ್‌ಗಳಲ್ಲಿ ಎರಡು ದಿನ ಸಿನಿಮಾ ಪ್ರದರ್ಶನ ಬಂದ್‌

ಮಲಯಾಳಂನ ಖ್ಯಾತ ನಟ ಟೊವಿನೋ ಥಾಮಸ್‌ ಅಭಿನಯದ ʼ2018ʼ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಗಳಿಸಿರುವ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲೂ ಭರ್ಜರಿ ಗಳಿಕೆ ಮಾಡುತ್ತಿದೆ. ಇದೇ ಹೊತ್ತಿನಲ್ಲಿ ಚಿತ್ರವನ್ನು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಹೀಗೆ ಚಿತ್ರಗಳು ತೆರೆಕಂಡ ಕೆಲವೇ ದಿನಕ್ಕೆ ಒಟಿಟಿಯಲ್ಲಿ ಬಿಡುಗಡೆ ಮಾಡುತ್ತಿರುವ ಚಿತ್ರತಂಡಗಳ ನಡೆಯನ್ನು ವಿರೋಧಿಸಿ ಕೇರಳದ ಥಿಯೇಟರ್‌ ಮಾಲೀಕರ ಸಂಘ ಪ್ರತಿಭಟನೆ ಕೈಗೊಂಡಿದೆ.

ʼ2018ʼ ಸಿನಿಮಾ ಕಳೆದ ಮೇ 5ರಂದು ತೆರೆಗೆ ಬಂದಿತ್ತು. 2018ರಲ್ಲಿ ಕೇರಳದಲ್ಲಿ ಉಂಟಾಗಿದ್ದ ಭೀಕರ ಪ್ರವಾಹ ಸಂದರ್ಭದಲ್ಲಿ ಜರುಗಿದ ನೈಜ ಘಟನೆಗಳನ್ನು ಆಧರಿಸಿ ಸಿದ್ಧಗೊಂಡಿದ್ದ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರೀ ಜನಪ್ರಿಯತೆ ಗಳಿಸಿದೆ. ಗಲ್ಲಾ ಪೆಟ್ಟಿಗೆಯಲ್ಲಿ 150 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಕಲೆ ಹಾಕಿ, ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವನ್ನು ತೆರೆಕಂಡು ತಿಂಗಳು ಕಳೆಯುವ ಮೊದಲೇ (ಜೂನ್‌ 7) ʼಸೋನಿ ಲಿವ್‌ʼ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆ ಕೇರಳದ ಥಿಯೇಟರ್‌ ಮಾಲೀಕರ ಸಂಘ ಎರಡು ದಿನಗಳ ಕಾಲ (ಜೂನ್‌ 7-8) ಪ್ರತಿಭಟನೆಗೆ ಕರೆ ನೀಡಿದೆ. ಥಿಯೇಟರ್‌ ಮಾಲೀಕರ ಸಂಘದ ಅಡಿಯಲ್ಲಿ ಬರುವ ಬಹುಪಾಲು ಚಿತ್ರಮಂದಿರಗಳು ಎರಡು ದಿನಗಳ ಕಾಲ ಸಿನಿಮಾ ಪ್ರದರ್ಶನವನ್ನು ಸ್ಥಗಿತಗೊಳಿಸಿವೆ.

ಕೇವಲ ʼ2018ʼ ಚಿತ್ರ ಮಾತ್ರವಲ್ಲ, ಫಹಾದ್‌ ಫಾಸಿಲ್‌ ನಟನೆಯ ʼಪಚುವುಮ್‌ ಅದ್ಭುತ ವಿಳಕ್ಕುಮ್‌ʼ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ತೆರೆಗೆ ಬರುತ್ತಿರುವ ಮಲಯಾಳಂನ ಹಲವು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹೊತ್ತಿನಲ್ಲೇ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಈ ಬೆಳವಣಿಗೆ ಅಪಾಯಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಕೇರಳದ ಥಿಯೇಟರ್‌ ಮಾಲೀಕರು, ಚಿತ್ರಗಳು ಥಿಯೇಟರ್‌ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡ ನಂತರವಷ್ಟೇ ಒಟಿಟಿ ವೇದಿಕೆಗಳಲ್ಲಿ ಪ್ರಸಾರ ಮಾಡಬೇಕು ಎಂದು ಚಿತ್ರರಂಗಕ್ಕೆ ಆಗ್ರಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪ್ರೇಕ್ಷಕರನ್ನು ಸೆಳೆಯಲು ಟಿಕೆಟ್‌ ದರ ತಗ್ಗಿಸಿದ ʼಡೇರ್‌ಡೆವಿಲ್‌ ಮುಸ್ತಾಫಾʼ ಚಿತ್ರತಂಡ

ʼದಿ ಕೇರಳ ಸ್ಟೋರಿʼ ಹೆಸರಿನ ಸಿನಿಮಾ ವಿವಾದ ಸೃಷ್ಟಿಸಿದ್ದ ಹೊತ್ತಿನಲ್ಲೇ ತೆರೆಗೆ ಬಂದಿದ್ದ ʼ2018ʼ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಪೈಪೋಟಿ ನೀಡಿತ್ತು. ಈ ಸಿನಿಮಾ ವೀಕ್ಷಿಸಿದ್ದ ಜನರು, ʼಇದು ಕೇರಳದ ಅಸಲಿ ಕಥೆ ಎಂದು ಕೊಂಡಾಡಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಸರಾ | ನನಗೆ ಸಿಕ್ಕಿದ್ದು ಸಾಮಾಜಿಕ ಕಲಾ ನ್ಯಾಯ: ಹಂಸಲೇಖ

ಮೈಸೂರು ದಸರಾ ಉದ್ಘಾಟನೆಗೆ ಈ ಬಾರಿ ನನ್ನನ್ನು ಸರ್ಕಾರ ಆಯ್ಕೆ ಮಾಡಿದೆ....

ಶಾರುಖ್ ಖಾನ್‌ ನಟಿಸಿದ ‘ಜವಾನ್’ ಸಿನಿಮಾ ಯಾಕೆ ರಾಜಕೀಯವಾಗಿ ಚರ್ಚೆಯಲ್ಲಿದೆ?

ವಿಶ್ವದಾದ್ಯಂತ ಮೊದಲ ದಿನ 129.6 ಕೋಟಿ ಗಳಿಸಿದ ಶಾರೂಖ್ ಖಾನ್ ನಟನೆಯ...

ತಮಿಳಿನ ಖ್ಯಾತ ನಟ, ನಿರ್ದೇಶಕ ಮಾರಿಮುತ್ತು ಹೃದಯಾಘಾತದಿಂದ ನಿಧನ

ತಮಿಳುನಾಡಿನ ಖ್ಯಾತ ನಟ, ನಿರ್ದೇಶಕ ಮಾರಿಮುತ್ತು ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ....