ಚಂದನವನದ ಪ್ರಚಂಡ ಕುಳ್ಳ ದ್ವಾರಕೀಶ್ ನಿಧನ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವವರಿಗೆ ಸ್ವತಃ ತಾವೇ ಸ್ಪಷ್ಟನೇ ನೀಡಿದ್ದಾರೆ. “ನಿಮ್ಮೆಲ್ಲರ ಆಶೀರ್ವಾದ ಇರೋವರೆಗೂ ನನಗೆ ಏನು ಆಗಲ್ಲ” ಎಂದು ಹೇಳಿದ್ದಾರೆ.
ದ್ವಾರಕೀಶ್ ಅವರು ನಟ, ನಿರ್ದೇಶಕ, ನಿರ್ಮಾಪಕನಾಗಿ ಸಿನಿಮಾರಂಗದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಂಡವರು. ಕೆಲ ತಿಂಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಅದಕ್ಕೆ ಸೂಕ್ತ ಚಿಕಿತ್ಸೆ ಕೂಡ ಪಡೆದುಕೊಂಡಿದ್ದರು. ಇದೀಗ ಅವರು ಆರಾಮಾಗಿದ್ದಾರೆ. ದ್ವಾರಕೀಶ್ ಆರೋಗ್ಯದ ಬಗ್ಗೆ ಭಾನುವಾರ (ಏ.30) ಬೆಳಿಗ್ಗೆಯಿಂದ ಇಲ್ಲಸಲ್ಲದ ಊಹಾಪೋಹಗಳು ಹಬ್ಬಿತ್ತು. ಈಗ ಅವರೇ ಸ್ವತಃ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಖುದ್ದಾಗಿ ಮಾಧ್ಯಮಗಳ ಮುಂದೆ ಬಂದು ಮಾತನಾಡಿರುವ ದ್ವಾರಕೀಶ್, “ನೀವು ಸಾಕಿದ ದ್ವಾರಕೀಶ್, ಚೆನ್ನಾಗಿದ್ದೀನಿ. ಗಟ್ಟಿಮುಟ್ಟಾಗಿದ್ದೀನಿ. ಯಾವುದೇ ಚಿಂತೆ ಇಲ್ಲ. ನಿಮ್ಮೆಲ್ಲರ ಆಶೀರ್ವಾದ ಇರೋವರೆಗೂ ನನಗೆ ಏನು ಆಗಲ್ಲ” ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
2019ರಲ್ಲಿ ಕೂಡ ದ್ವಾರಕೀಶ್ ಅವರು ಆರೋಗ್ಯವಾಗಿಲ್ಲ ಎಂದು ವದಂತಿ ಹಬ್ಬಿತ್ತು. ಆಗಲೂ ಅವರು ವಿಡಿಯೋ ಹಂಚಿಕೊಂಡು ಸ್ಪಷ್ಟನೆ ನೀಡಿದ್ದರು.

ಕನ್ನಡ ಚಿತ್ರರಂಗಕ್ಕೆ ದ್ವಾರಕೀಶ್ ಅವರು ನೀಡಿದ ಕೊಡುಗೆ ಅಪಾರ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಅವರು ತಮ್ಮ ಛಾಪು ಮೂಡಿಸಿದ್ದಾರೆ. 1966ರಿಂದ ಈ ತನಕ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ‘ದ್ವಾರಕೀಶ್ ಚಿತ್ರ’ ನಿರ್ಮಾಣ ಸಂಸ್ಥೆ ಮೂಲಕ ಅವರು ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕಟ್ಟುಪಾಡು ದಾಟಿ ಹೃದಯ ಸ್ಪರ್ಶಿಸುವ ಬ್ರಹ್ಮಚರ್ಯದ ಗೋಳಿನ ಕತೆ ‘ರಾಘವೇಂದ್ರ ಸ್ಟೋರ್ಸ್