ಅದ್ದೂರಿಯಾಗಿ ಸೆಟ್ಟೇರಿದ ʼಭೈರತಿ ರಣಗಲ್‌ʼ

Date:

ಚಿತ್ರೀಕರಣಕ್ಕೆ ಚಾಲನೆ ನೀಡಿದ ಗೀತಾ ಶಿವರಾಜ್‌ ಕುಮಾರ್‌

ಜೂನ್‌ ಎರಡನೇ ವಾರದಿಂದ ಶೂಟಿಂಗ್‌ ಆರಂಭ

ಸ್ಯಾಂಡಲ್‌ವುಡ್‌ನ ಹಿರಿಯ ನಟ ಶಿವರಾಜ್‌ ಕುಮಾರ್‌ ಅಭಿನಯದ ಬಹುನಿರೀಕ್ಷಿತ ʼಭೈರತಿ ರಣಗಲ್‌ʼ ಸಿನಿಮಾ ಶುಕ್ರವಾರ ಅದ್ದೂರಿಯಾಗಿ ಸೆಟ್ಟೇರಿದೆ. ಶಿವರಾಜ್‌ ಕುಮಾರ್‌ ಅವರ ಪತ್ನಿ ಗೀತಾ ಕ್ಲ್ಯಾಪ್‌ ಮಾಡುವ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ.

ʼಭೈರತಿ ರಣಗಲ್‌ʼ ಚಿತ್ರವನ್ನು ʼಮಫ್ತಿʼ ಖ್ಯಾತಿಯ ನರ್ತನ್‌ ನಿರ್ದೇಶಿಸುತ್ತಿದ್ದಾರೆ. 2017ರಲ್ಲಿ ತೆರೆಕಂಡಿದ್ದ ಶ್ರೀ ಮುರಳಿ ಮುಖ್ಯಭೂಮಿಕೆಯಲ್ಲಿ ತೆರೆಕಂಡಿದ್ದ ʼಮಫ್ತಿʼ ಚಿತ್ರದಲ್ಲಿ ಶಿವಣ್ಣ, ʼಭೈರತಿ ರಣಗಲ್‌ʼ ಪಾತ್ರದಲ್ಲಿ ನಟಿಸಿದ್ದರು. ಖಳನ ಪಾತ್ರವಾದರೂ ಶಿವಣ್ಣ ಅವರ ಭಿನ್ನ ಅವತಾರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಅಂದಿನಿಂದಲೂ ʼಭೈರತಿ ರಣಗಲ್‌ʼ ಹೆಸರಿನ ಸಿನಿಮಾ ಮಾಡುವಂತೆ ಶಿವಣ್ಣ ಮತ್ತು ನರ್ತನ್‌ ಇಬ್ಬರಿಗೂ ಅಭಿಮಾನಿಗಳು ಮನವಿ ಮಾಡುತ್ತಲೇ ಬಂದಿದ್ದರು. ಎಲ್ಲರ ಬಯಕೆಯಂತೆ ಕೊನೆಗೂ ಈ ಬಹುನಿರೀಕ್ಷಿತ ಸಿನಿಮಾದ ಮುಹೂರ್ತ ನೆರವೇರಿದೆ.

ಮುಹೂರ್ತದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ನರ್ತನ್‌, “ಇವತ್ತು ನಮ್ಮ ಸಿನಿಮಾದ ಮುಹೂರ್ತ ನೆರವೇರಿದೆ. ಸದ್ಯ ಶಿವಣ್ಣ ಘೋಸ್ಟ್‌ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಜೂನ್‌ 10ರಿಂದ ʼಭೈರತಿ ರಣಗಲ್‌ʼ ಶೂಟಿಂಗ್‌ ಪ್ರಾರಂಭವಾಗಲಿದೆ” ಎಂದಿದ್ದಾರೆ.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನರ್ತನ್‌, ” ʼಭೈರತಿ ರಣಗಲ್‌ʼ ʼಪ್ರೀಕ್ವೆಲ್‌ʼ ಮತ್ತು ʼಸೀಕ್ವೆಲ್‌ʼ ಮಾದರಿಯಲ್ಲಿ ತೆರೆಗೆ ಬರಲಿದೆ. ʼಮಫ್ತಿʼ ಸಿನಿಮಾದಲ್ಲಿ ʼಭೈರತಿ ರಣಗಲ್‌ʼ ಪಾತ್ರದ ಪರಿಚಯವಾಗಿತ್ತು. ಈಗ ʼಭೈರತಿ ರಣಗಲ್‌ʼ ʼಪ್ರೀಕ್ವೆಲ್‌ʼನಲ್ಲಿ ಆತನ ಹಿನ್ನೆಲೆ ʼಸೀಕ್ವೆಲ್‌ʼನಲ್ಲಿ ಬಂಧನದ ನಂತರದ ಕಥೆಯನ್ನು ನಿರೀಕ್ಷಿಸಬಹುದು” ಎನ್ನುವ ಮೂಲಕ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಅಭಿಮಾನಿಯ ಕೊನೆ ಆಸೆ ಈಡೇರಿಸಿದ ಹೃದಯವಂತ ಶಾರುಖ್‌ ಖಾನ್‌

ʼವೇದʼ ಚಿತ್ರಕ್ಕೆ ಬಂಡವಾಳ ಹೂಡಿ ಯಶಸ್ವಿ ನಿರ್ಮಾಪಕಿ ಎನ್ನಿಸಿಕೊಂಡಿರುವ ಗೀತಾ ಶಿವರಾಜ್‌ ಕುಮಾರ್‌, ತಮ್ಮ ʼಗೀತಾ ಪಿಕ್ಚರ್ಸ್‌ʼ ಬ್ಯಾನರ್‌ನಡಿಯಲ್ಲಿ ʼಭೈರತಿ ರಣಗಲ್‌ʼ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೆಜಿಎಫ್‌ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್‌ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಲಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕುತೂಹಲ ಹೆಚ್ಚಿಸಿದ ʼಆದಿಪುರುಷ್‌ʼ 2ನೇ ಟ್ರೈಲರ್‌

ಜೂನ್‌ 16ಕ್ಕೆ ತೆರೆಗೆ ಬರಲಿದೆ ʼಆದಿಪುರುಷ್‌ʼ ಒಂದೂವರೆ ಕೋಟಿ ವೀಕ್ಷಣೆ ಪಡೆದ ಟ್ರೈಲರ್‌ ತೆಲುಗಿನ...

ಈ ದಿನ ವಿಶೇಷ | ಗ್ಯಾರಂಟಿ ಯೋಜನೆಗಳ ಬಗ್ಗೆ ಸಿನಿ ತಾರೆಯರ ಮಾತು

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿಯ...

2 ಭಾಗಗಳಲ್ಲಿ ತೆರೆಗೆ ಬರಲಿದೆ ʼಸಪ್ತ ಸಾಗರದಾಚೆ ಎಲ್ಲೋʼ

40ನೇ ವಸಂತಕ್ಕೆ ಕಾಲಿಟ್ಟ ರಕ್ಷಿತ್‌ ಶೆಟ್ಟಿ ನಿರೀಕ್ಷೆ ಹೆಚ್ಚಿಸಿದ ʼಸಪ್ತ ಸಾಗರದಾಚೆ ಎಲ್ಲೋʼ...

ಪ್ರೇಕ್ಷಕರನ್ನು ಸೆಳೆಯಲು ಟಿಕೆಟ್‌ ದರ ತಗ್ಗಿಸಿದ ʼಡೇರ್‌ಡೆವಿಲ್‌ ಮುಸ್ತಾಫಾʼ ಚಿತ್ರತಂಡ

ಮೂರನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರ ವಿದೇಶಗಳಲ್ಲೂ ಸದ್ದು ಮಾಡಿದ ಪೂರ್ಣಚಂದ್ರ...