ಲಡಾಖ್‌ | ಶೀಘ್ರದಲ್ಲೇ ಭಾರತದ ಮೊದಲ ರಾತ್ರಿ ಆಗಸ ವೀಕ್ಷಣಾಧಾಮ ಕಾರ್ಯಾರಂಭ

Date:

  • ವಿಶ್ವದ 15ನೇ ಅಧಿಕೃತ ರಾತ್ರಿ ಆಗಸ ವೀಕ್ಷಣಾ ಧಾಮ
  • ನಕ್ಷತ್ರ, ಗ್ಯಾಲಕ್ಸಿಗಳ ಅಧ್ಯಯನ ಮಾಡಲು ಉಪಯುಕ್ತ

ಖಗೋಳ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಹಾನ್ಲೆ ಜಿಲ್ಲೆಯಲ್ಲಿ ಭಾರತದ ಮೊದಲ ‘ರಾತ್ರಿ ಆಗಸ ವೀಕ್ಷಣಾ ಧಾಮ’ವನ್ನು ಆರಂಭಿಸಲಿದೆ.

ಮುಂದಿನ ಒಂದೂವರೆ ತಿಂಗಳಿನಲ್ಲಿ ಈ ವೀಕ್ಷಣಾ ಧಾಮ ಕಾರ್ಯಾರಂಭಿಸಲಿದೆ. “ದೇಶದ ಸುಂದರ ನೈಸರ್ಗಿಕ ತಾಣವಾದ ಲಡಾಖ್‌ನಲ್ಲಿ ವಿಶ್ವಾದ್ಯಂತ ಇರುವ ಪ್ರವಾಸಿಗರನ್ನು ಆಕರ್ಷಿಸಲು ಅತ್ಯಂತ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ” ಎಂದು ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಆರ್‌ ಕೆ ಮಾಥುರ್‌ ಅವರನ್ನು ಭೇಟಿ ಮಾಡಿದ ನಂತರ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಾಹ್ಯಕಾಶ ವಿಸ್ಮಯ | ಕಪ್ಪು ರಂದ್ರದ ಭಯಾನಕ ಶಬ್ದ ಕೇಳಿ ನಿಶ್ಯಬ್ದವಾದ ನಾಸಾ

ಈ ವೀಕ್ಷಣಾಧಾಮವು ಚಾಂಗ್‌ಥಾಂಗ್ ವನ್ಯಜೀವಿ ಅಭಯಾರಣ್ಯದ ಭಾಗವಾಗಿ ಬರುತ್ತಿದೆ. ಇದು ಆಪ್ಟಿಕಲ್, ಅತಿಗೆಂಪು, ಗಾಮಾಕಿರಣಗಳನ್ನು ದೂರದರ್ಶಕಗಳಿಂದ ವೀಕ್ಷಿಸಬಹುದಾದ ವಿಶ್ವದ ಅತೀ ಎತ್ತರದಲ್ಲಿ ನೆಲೆಗೊಂಡಿರುವ ತಾಣಗಳಲ್ಲಿ ಒಂದಾಗಿದೆ. ಇದನ್ನು 4,500 ಅಡಿ ಎತ್ತರದಲ್ಲಿ ಸ್ಥಾಪಿಸಲಾಗುತ್ತಿದೆ ಮತ್ತು ನಕ್ಷತ್ರಗಳು, ಗ್ಯಾಲಕ್ಸಿಗಳು ಮತ್ತು ಇತರ ಬಾಹ್ಯಕಾಶ ಸಂಬಂಧಿತ ಚಟುವಟಿಕೆಗಳನ್ನು ಅಧ್ಯಯನ ಮಾಡಲು ಉಪಯುಕ್ತವಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದು ದಕ್ಷಿಣ ಆಫ್ರಿಕಾದ ಕಲಹರಿ ಹೆರಿಟೇಜ್ ಪಾರ್ಕ್‌, ನ್ಯೂಜಿಲೆಂಡಿನ ಗ್ರೇಟ್ ಬ್ಯಾರಿಯರ್ ಐಲ್ಯಾಂಡ್, ಅಮೆರಿಕದ ಬ್ಲ್ಯಾಕ್ ಗ್ಯಾಪ್ ವೈಲ್ಡ್‌ ಲೈಫ್  ಮ್ಯಾನೇಜ್‌ಮೆಂಟ್ ಮುಂತಾದ 14 ಪ್ರದೇಶಗಳ ನಂತರ ವಿಶ್ವದ 15ನೇ ಅಧಿಕೃತ ರಾತ್ರಿ ಆಗದ ವೀಕ್ಷಣಾಧಾಮವೆನಿಸಲಿದೆ.

ಈ ವೀಕ್ಷಣಾಧಾಮವನ್ನು ಸ್ಥಾಪಿಸಲು ಲಡಾಖ್‌ನ ಸ್ವಾಯತ್ತ ಗುಡ್ಡಗಾಡು ಅಭಿವೃದ್ಧಿ ಮಂಡಳಿ, ಭಾರತದ ಖಭೌತ ಶಾಸ್ತ್ರ ಮಂಡಳಿ ಮತ್ತು ಲಡಾಖ್‌ನ ಕೇಂದ್ರಾಡಳಿತ ಆಡಳಿತ ಸಂಸ್ಥೆ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೆನಪು | ಲೋಕದ ಡೊಂಕನು ಗೆರೆಗಳಿಂದ ತಿದ್ದಿದ ಕಾಮನ್ ಮ್ಯಾನ್- ಆರ್.ಕೆ ಲಕ್ಷ್ಮಣ್

ಸಾಮಾನ್ಯನ ಕಷ್ಟ-ಕಾರ್ಪಣ್ಯಗಳನ್ನು, ಆಸೆ-ನಿರೀಕ್ಷೆಗಳನ್ನು, ತುಡಿತ-ತಲ್ಲಣಗಳನ್ನು ಗೆರೆಗಳ ಮೂಲಕ ಅಭಿವ್ಯಕ್ತಿಸಿದವರು. ಆ ಮೂಲಕ...

ಲೇಖಕ ರಹಮತ್ ತರೀಕೆರೆ ದನಿಯಲ್ಲಿ ಕೇಳಿ… ಆತ್ಮಕತೆ ‘ಕುಲುಮೆ’ಯಿಂದ ಆಯ್ದ ಮದುವೆಯ ಕಥನ

(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್...

ಭಾರತ-ಪಾಕ್ ಕ್ರಿಕೆಟ್ ಪಂದ್ಯ ವಿಶೇಷ | ನಟ ಅಂಬರೀಶ್ ಮತ್ತು ಅಶ್ವತ್ಥ್ ಕ್ರಿಕೆಟ್ ಪ್ರೀತಿಯ ಪುಟ್ಟ ಕತೆ

(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್...

ವಾರದ ವಿಶೇಷ ಆಡಿಯೊ | ‘ಕಾವೇರಿ ಸಮಸ್ಯೆಗೆ ಖಂಡಿತ ಶಾಶ್ವತ ಪರಿಹಾರ ಇದೆ!’

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...