ರಂಗ ನಿರ್ದೇಶಕ ಲಕ್ಷ್ಮಣ್ ಕೆ ಪಿ ಸಂದರ್ಶನ | ‘ಅವತ್ತು ಥಟ್ಟನೆ ಅಳು ಬಂದು ಗಾಂಧಿಯ ವೇಷ ಕಿತ್ತು ಬಿಸಾಡಿಬಿಟ್ಟಿದ್ದೆ!’

Date:

ವಿಭಿನ್ನ ಪ್ರಯೋಗಗಳ ರಂಗ ನಿರ್ದೇಶಕ ಲಕ್ಷ್ಮಣ್ ಕೆ ಪಿ, ನೆಲಮಂಗಲ ಬಳಿಯ ಕಾಚನಹಳ್ಳಿಯವರು. ಅವರ ನಿರ್ದೇಶನದ 'ವಿ ದ ಪೀಪಲ್ ಆಫ್ ಇಂಡಿಯಾ' ಮತ್ತು 'ದಕ್ಲಕಥಾ ದೇವಿ ಕಾವ್ಯ' - ಕನ್ನಡ ರಂಗಭೂಮಿ ಜೀವಂತ ಇರುವವರೆಗೂ ನೆನಪಿಸಿಕೊಳ್ಳುವಂಥ ಮಹತ್ವದ ಪ್ರಯೋಗಗಳು. ಲಕ್ಷ್ಮಣ್ ಕಲಿತದ್ದು ಮೊದಲಿಗೆ ನೀನಾಸಂನಲ್ಲಿ, ನಂತರ ಸಿಂಗಾಪುರದ Intercultural Theater Instituteನಲ್ಲಿ. ಅವರು ಕನ್ನಡ ನಾಟಕಗಳಲ್ಲದೆ, ಇಂಗ್ಲಿಷ್ ನಾಟಕಗಳಲ್ಲೂ ಅಭಿನಯಿಸಿದ್ದಾರೆಂಬುದು ಬಹುಶಃ ಹೆಚ್ಚು ಜನರಿಗೆ ಗೊತ್ತಿಲ್ಲ. ಸದಾ ಏನನ್ನೋ ಧ್ಯಾನಿಸುವಂಥ ವ್ಯಕ್ತಿತ್ವದ ಲಕ್ಷ್ಮಣ್ ಅವರು, ನಟನೆ ಮತ್ತು ನಿರ್ದೇಶನದಾಚೆಗೆ ಮಾತಾಡಿದ್ದು ತುಂಬಾ ಕಡಿಮೆ. ಅವರ ಬದುಕಿನ ಕೆಲವು ಸ್ವಾರಸ್ಯಕರ ಘಟನೆಗಳ ಗುಚ್ಛ ಈ ಸಂದರ್ಶನ.
ಲಕ್ಷ್ಮಣ್ ಕೆ ಪಿ
‘ದಕ್ಲಕಥಾ ದೇವಿ ಕಾವ್ಯ’ ನಾಟಕದ ದೃಶ್ಯ

ಲಕ್ಷ್ಮಣ್ ಕೆ ಪಿ ಅವರಿಗೆ ಕೇಳಿದ ಕೇಳ್ವಿಗಳು:

1.ಅಂಬೇಡ್ಕರ್‌ನಿಂದ ಶುರು ಮಾಡುವ. ‘ವಿ ದ ಪೀಪಲ್ ಆಫ್ ಇಂಡಿಯಾ’ ನಿಮ್ಮ ನಿರ್ದೇಶನದ ಅತ್ಯಂತ ಮಹತ್ವದ ನಾಟಕ. ಇದರಲ್ಲಿ ಅಂಬೇಡ್ಕರ್ ಪಾತ್ರ ಮಾಡಿದವರು ಸಂತೋಷ್ ದಿಂಡಗೂರು. ವಿಶೇಷ ಅಂದ್ರೆ, ಸಂತೋಷ್ ಅವ್ರು ಕೂಡ ಅವರೂರಿನಲ್ಲಿ ದಲಿತರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಚಳವಳಿ ಕಟ್ಟಿದವರು, ಹೋರಾಟ ನಡೆಸಿದವರು. ಸೋ… ಸಂತೋಷ್ ಅವ್ರು ನಿಮ್ಮ ನಾಟಕದಲ್ಲಿ ಅಂಬೇಡ್ಕರ್ ಆದ ಕತೆ ಹೇಳಬಹುದಾ?

2.’ಲಕ್ಷ್ಮಣ್ ಕೆ ಪಿ ಅಂದ್ರೆ ಇಂತಹ ಮನುಷ್ಯ’ ಅಂತ ಹೇಳುವಂತಹ, ನಿಮ್ಮ ಜೀವನದ ಯಾವುದಾದರೂ ಒಂದು ಘಟನೆಯನ್ನು ಹಂಚಿಕೊಳ್ಳೋದಾದ್ರೆ ಯಾವ ಘಟನೆ ಹೇಳೋಕೆ ಇಷ್ಟಪಡ್ತೀರಿ?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

3.ನಿಮ್ಮೂರು ನೆಲಮಂಗಲದ ಬಳಿಯ ಕಾಚನಹಳ್ಳಿ. ನೀವು ನಿಮ್ಮೂರನ್ನು ನೆನಪಿಸಿಕೊಂಡಾಗ (ಕುಟುಂಬದವರನ್ನು ಹೊರತುಪಡಿಸಿ) ತಕ್ಷಣ ಕಣ್ಮುಂದೆ ಸುಳಿಯುವ ಪಾತ್ರ ಯಾವುದು? ಆ ಪಾತ್ರದ ವಿಶೇಷತೆ ಬಗ್ಗೆ ಒಂಚೂರು ಹೇಳಿ…

ಲಕ್ಷ್ಮಣ್ ಕೆ ಪಿ
‘ವಿ ದ ಪೀಪಲ್ ಆಫ್ ಇಂಡಿಯಾ’ ನಾಟಕದ ದೃಶ್ಯ

4.ನೀನಾಸಂ… ನೀವು ಕಲಿಯುವ ಕಾಲಕ್ಕಂತೂ ಬಹಳ ಶ್ರೀಮಂತವಾಗಿದ್ದ ಸಂಸ್ಥೆ. ಅಲ್ಲಿ ವಿದ್ಯಾರ್ಥಿ ಆಗಿದ್ದಾಗ ನೀವು ಭಾಗಿ ಆಗಿರಬಹುದಾದ ಒಂದು ತುಂಟತನದ ಪ್ರಸಂಗ ಇದ್ದರೆ ನಮ್ಜೊತೆ ಹಂಚಿಕೊಳ್ಳಬಹುದಾ?

5. ರಂಗದ ಮೇಲೆ ಅಭಿನಯಿಸಿ ನೋಡುಗರನ್ನು ಭಾವುಕರನ್ನಾಗಿ ಮಾಡೋದು ಆಗಾಗ ನಡೀತಾ ಇರುತ್ತೆ. ಆದ್ರೆ, ನೀವು ಅಭಿನಯಿಸುವಾಗ ಅಚಾನಕ್ಕಾಗಿ ನೀವೇ ಭಾವುಕರಾದ ಸನ್ನಿವೇಶ ಇದೆಯಾ? ಆ ಸನ್ನಿವೇಶದ ಹಿನ್ನೆಲೆ ಕತೆ ಪ್ಲೀಸ್…

6.ನೀವು ಸಿಂಗಾಪುರದ Intercultural Theater Instituteನಲ್ಲಿ ಕಲಿತವರು. ನಿಮ್ಮ ಬದುಕಿನ ಈ ‘ಸಿಂಗಾಪುರ ಅಧ್ಯಾಯ’ದಲ್ಲಿ ನೀವು ಯಾವತ್ತಿಗೂ ಮರೆಯಲಾಗದ ಚಿತ್ರಣ ಯಾವುದು?

7.ದಕ್ಲಕಥಾ ದೇವಿ ಕಾವ್ಯ… ನಿಮ್ಮ ಹೆಸರಿನ ಜೊತೆಗೆ ತಳುಕು ಹಾಕಿಕೊಳ್ಳುವಷ್ಟು ಸಶಕ್ತ ಮತ್ತು ಜನಪ್ರಿಯ ರಂಗಪ್ರಯೋಗ. ಕೆ ಬಿ ಸಿದ್ದಯ್ಯನವರ ಈ ಕಾವ್ಯ ನಿಮ್ಮೆದೆಯ ಕಾವ್ಯವಾಗಿ ಬದಲಾಗಿದ್ದು ಯಾವಾಗ?

ಲಕ್ಷ್ಮಣ್ ಕೆ ಪಿ
‘ವಿ ದ ಪೀಪಲ್ ಆಫ್ ಇಂಡಿಯಾ’ ನಾಟಕದ ದೃಶ್ಯ

8.ಅವ್ವ ಮತ್ತು ಮಗನ ನಡುವಿನ ಬಾಂಧವ್ಯವನ್ನು ಬಹಳ ಅಚ್ಚುಕಟ್ಟಾಗಿ ಕಣ್ಣೆದುರು ಕಟ್ಟುಕೊಡುವಂಥದ್ದು ನಿಮ್ಮ ‘ಅವ್ವನ ಜಗಳ’ ಅನ್ನೋ ಪದ್ಯ. ಆ ಪದ್ಯದ ನೆಪದಲ್ಲಿ ಈ ಪ್ರಶ್ನೆ; ‘ಅವ್ವ’ ಅಂದ ತಕ್ಷಣ ನಿಮಗೆ ನಿಮ್ಮ ಬದುಕಿನ ಯಾವ ಘಟನೆ ನೆನಪಾಗುತ್ತೆ?

9.ನೀವು ಅಭಿನಯಿಸಿರುವ ನಾಟಕಗಳಲ್ಲಿ, ‘ನಾನಿನ್ನೂ ಆ ಪಾತ್ರದಲ್ಲೇ ಇದ್ದೇನೆ’ ಅನ್ನಿಸುವಷ್ಟು ಕಾಡುವಂತಹ, ನಿಮ್ಮನ್ನು ಸದಾ ಹಿಂಬಾಲಿಸುವಂತಹ ಒಂದು ಪಾತ್ರ ಯಾವುದು?

10.ಇದುವರೆಗಿನ ನಿಮ್ಮ ರಂಗಪಯಣದಲ್ಲಿ ನಿಮಗೆ ಸದಾ ಚೈತನ್ಯ ತುಂಬುವಂತಹ ಒಂದು ಸವಿನೆನಪು ಮತ್ತು ಸವಾಲೆಸೆದು ನಿಮ್ಮ ಸಾಮರ್ಥ್ಯ ಹೆಚ್ಚಿಸುವಂತಹ ಒಂದು ಕಹಿನೆನಪನ್ನು ನಮ್ಜೊತೆ ಹಂಚಿಕೊಳ್ಳೋದಾದ್ರೆ… ಆ ನೆನಪುಗಳು ಯಾವ್ದಾಗಿರುತ್ತೆ?

ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ

ಮುಖ್ಯ ಚಿತ್ರ ಕೃಪೆ: ಸಹ್ಯಾದ್ರಿ ನಾಗರಾಜ್ | ನಾಟಕದ ಚಿತ್ರಗಳ ಕೃಪೆ: ಐವಾನ್ ಡಿಸೋಜಾ

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

3 COMMENTS

  1. ಲಕ್ಷ್ಮಣ್ ಸರ್ ಅವರ ಜೀವನದ ಅನೇಕ ಮಜಲುಗಳನ್ನು ಪರಿಚಯಿಸಿದ ಉತ್ತಮ ಸಂದರ್ಶನ. ಲಕ್ಷ್ಮಣ್ ಸರ್ ಅವರ ನಿರ್ದೇಶನದಲ್ಲಿ ನಾಟಕ ಮಾಡುವುದು ಮತ್ತು ಅವರು ಮಾಡಿದ ನಾಟಕಗಳನ್ನು ನೋಡುವುದು ನಿಜವಾಗಿಯೂ ಒಂದು ರೋಚಕ ಅನುಭವ. ಅವರ ಕಲಾ ಸೇವೆ ಹೀಗೆಯೇ ನಿರಂತರವಾಗಿ ಇರಲಿ, ನಮಗೆ ಅವರ ಇನ್ನೂ ಅನೇಕ ಅತ್ಯುತ್ತಮ ನಾಟಕಗಳನ್ನು ನೋಡುವ ಅವಕಾಶ ಸಿಗಲಿ.

    • ಧನ್ಯವಾದ ಮೇಡಂ. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಧ್ಯಯನ ಪೀಠ ಬೇಡ, ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಲಿ

ಎಲ್ಲ ಜಾತಿಯ ಐನೂರಕ್ಕೂ ಹೆಚ್ಚು ಸಂಖ್ಯೆಯ ತತ್ವಪದಕಾರ ಸಾಧಕ ಸಾಧಕಿಯರು ಕನ್ನಡ...

ಸುತ್ತಾಟದಲ್ಲಿ ಸಿಕ್ಕವರು | ಶಿವಮೊಗ್ಗ ಜಿಲ್ಲೆ ಕಾಗೆ ಕೋಡಮಗ್ಗಿಯ ಅಬ್ದುಲ್ ಫಾರೂಖ್

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಸಂಕ್ರಾಂತಿ ವಿಶೇಷ ಆಡಿಯೊ | ನಂಜಿಲ್ಲದ ದೇವ ಬರುತ್ತಿದ್ದ ನಂಜನಗೂಡಿನಿಂದ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...