ವಾರದ ಕವಿತೆ – ವಾಣಿ ಸತೀಶ್ | ಮೈ ನೆರೆದ ಆ ದಿನ

Date:

ಜಾವ ಐದರ ಗಳಿಗೆ ಸವಿಗನಸ ನಿದ್ದೆ
ಗೆಳತಿಯರ ಕೂಡಾಟ ನಿದ್ದೆಯಲೂ
ಕೇಕೆ ಕನವರಿಕೆ

ಇದ್ದಕ್ಕಿದ್ದಂತೆ ಸೊಂಟ ಹೊಟ್ಟೆಗಳಲ್ಲಿ
ಚುಳ್ಳನೇ ಚಳುಕೆದ್ದು
ನಿದ್ದೆಯಲೇ ನರಳಿದಳು
ಹದಿಮೂರರ ಪೋರಿ

ಅವ್ವನ ಎದೆ ಮೇಲೆ ಏರಿದ್ದ
ಕಾಲ ಸಂದುಗಳಿಂದ
ತಣ್ಣನೆಯ ಹರಿವು
ಬೆಚ್ಚಿ ಕಣ್ಣು ತೆರೆದಳು ಬಾಲೆ
ಒದ್ದೊದ್ದೆ ಉಡುಪು ಒಳಗೆಲ್ಲ

ಓಡಿದಳು ಬಚ್ಚಲಿಗೆ
ಒಳಗೆಲ್ಲ ಕೆಂಪಾಗಿ
ಕಸಿವಿಸಿಯ ಎದೆ ಹೊತ್ತು
ಬಂದು ನಿಂತಳು ಹೆತ್ತವ್ವನೆದುರು

ತನ್ನ ಒಂಟಿ ಬದುಕಿನ ಸುತ್ತ
ಹರಿದಾಡೊ ಕಾಮುಕ ಕಣ್ಣುಗಳ
ಮೆಟ್ಟಿ ನಿಲ್ಲುವುದರಲ್ಲೇ
ಹೈರಾಣವಾಗಿದ್ದ ಅವ್ವ
ನಿದ್ದೆ ಮೆತ್ತಿದ ಕಣ್ಣ ತೆರೆದು
ದಿಂಬಿಗೆ ಮೊಗ ಒತ್ತಿ ಬಿಕ್ಕಿದಳು

ಧರ್ಮಶಾಸ್ತ್ರಕ್ಕೆ ಕೊರಳೊಡ್ಡಿ
ಕಟ್ಟಿಕೊಂಡವನು
ತನ್ನ ಒಳ-ಹೊರಗುಗಳ
ಹಕ್ಕಿನಲೇ ದೋಚಿ
ಎದೆಗೂಡ ಕನಸಿಗೆ ಕೆಂಡದ ಮಳೆ
ಸುರಿದು ಮಕರಂದವರಸಿ
ಹಾರಿಹೋದುದ ನೆನೆದು ಬಿಕ್ಕಿದಳು

ಕೊಟ್ಟವಳು ಕುಲಕೊರಗು
ಎಂದು ಹೊರಗಿಟ್ಟ
ಮನೆ ತುಂಬಿ ತುಳುಕುವ
ಅಣ್ಣ ತಮ್ಮರ ನೆನೆದು
ಬಿಕ್ಕಿದಳು

ಆಳಿಗೊಂದು ಕಲ್ಲೆಸೆದು
ಮೋಜಾಟ ಆಡುವ
ಕಾರುಣ್ಯ ಸತ್ತ ಸಮುದಾಯ
ನೆನೆದು ಬಿಕ್ಕಿದಳು

ಬಿಕ್ಕಿದಳು ಬಿಕ್ಕಿಯೇ ಬಿಕ್ಕಿದಳು
ಘಳಿಗೆಗೊಂದೊಂದು ನಿಟ್ಟುಸಿರ ಬಿಟ್ಟು

ಎಷ್ಟೋ ಸಮಯದ ಬಳಿಕ
ಅವ್ವ ಮೇಲೆದ್ದಳು
ಯುದ್ದಕ್ಕೆ ಸಜ್ಜಾದ ಯೋಧಳಂತೆ

ಬಿಟ್ಟ ನಿಟ್ಟುಸಿರನ್ನೆಲ್ಲ
ನಗುವಾಗಿ ಅರಳಿಸಿ
ಮೈ ದಡವಿ ಹೇಳಿದಳು
‘ನೀನು ದೊಡ್ಡವಳಾದೆ…’
ಹಾಲನ್ನ ನೀಡಿ ಹೂ ಮುತ್ತನಿಟ್ಟಳು

ಮನೆಯ ತುಂಬಿತ್ತು
ಋತುಮತಿಯ ಆರೈಕೆ, ಸಂಭ್ರಮ
ಕಾಸಿಗೆ ಕಾಸು ಜೋಡಿಸಿ
ತುಪ್ಪ, ಕೊಬ್ಬರಿ, ಚಿಗಳಿ, ಬೆಲ್ಲವ ತಂದು
ಹಾಲ್ಗಡಲಲ್ಲಿ ಮುಳುಗಿಸಿ
ಮೇಲೆತ್ತಿದಳು

ಮೊಗ್ಗ ಹೂವಾಗಿಸಿ
ಕಾದೇ ಕಾದಳು ಅವ್ವ
ಹೂತಿಟ್ಟ ನಿಧಿಯ
ಸರ್ಪ ಕಾದಂತೆ…

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಸತೀಶ್
ವಾಣಿ ಸತೀಶ್
ತುಮಕೂರು ಜಿಲ್ಲೆಯ ತಿಪಟೂರಿನವರು. ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವೀಧರೆ. ನೀನಾಸಂನಿಂದ ರಂಗ ಶಿಕ್ಷಣ. ಸದ್ಯ ತಿಪಟೂರಿನ 'ಭೂಮಿ ಥಿಯೇಟರ್' ಮತ್ತು 'ಶ್ರೀ ನಟರಾಜ ನೃತ್ಯಶಾಲೆ'ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೆನಪು | ಲೋಕದ ಡೊಂಕನು ಗೆರೆಗಳಿಂದ ತಿದ್ದಿದ ಕಾಮನ್ ಮ್ಯಾನ್- ಆರ್.ಕೆ ಲಕ್ಷ್ಮಣ್

ಸಾಮಾನ್ಯನ ಕಷ್ಟ-ಕಾರ್ಪಣ್ಯಗಳನ್ನು, ಆಸೆ-ನಿರೀಕ್ಷೆಗಳನ್ನು, ತುಡಿತ-ತಲ್ಲಣಗಳನ್ನು ಗೆರೆಗಳ ಮೂಲಕ ಅಭಿವ್ಯಕ್ತಿಸಿದವರು. ಆ ಮೂಲಕ...

ಲೇಖಕ ರಹಮತ್ ತರೀಕೆರೆ ದನಿಯಲ್ಲಿ ಕೇಳಿ… ಆತ್ಮಕತೆ ‘ಕುಲುಮೆ’ಯಿಂದ ಆಯ್ದ ಮದುವೆಯ ಕಥನ

(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್...

ಭಾರತ-ಪಾಕ್ ಕ್ರಿಕೆಟ್ ಪಂದ್ಯ ವಿಶೇಷ | ನಟ ಅಂಬರೀಶ್ ಮತ್ತು ಅಶ್ವತ್ಥ್ ಕ್ರಿಕೆಟ್ ಪ್ರೀತಿಯ ಪುಟ್ಟ ಕತೆ

(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್...

ವಾರದ ವಿಶೇಷ ಆಡಿಯೊ | ‘ಕಾವೇರಿ ಸಮಸ್ಯೆಗೆ ಖಂಡಿತ ಶಾಶ್ವತ ಪರಿಹಾರ ಇದೆ!’

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...