ಪೋಲಿಯೊ ಲಸಿಕೆ ಕೊರತೆ; ‘ರಾಷ್ಟ್ರೀಯ ಲಸಿಕಾ ದಿನ’ ರದ್ದು!

Date:

ಪೋಲಿಯೊ ಲಸಿಕೆಗಳ ಕೊರತೆಯಿಂದಾಗಿ ಈ ವರ್ಷದ ಪೋಲಿಯೊ ‘ರಾಷ್ಟ್ರೀಯ ಲಸಿಕಾ ದಿನ’ ವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈ ವರ್ಷ, ಅಪಾಯ ಎದುರಿಸುತ್ತಿರುವ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 200 ಜಿಲ್ಲೆಗಳ ಮೇಲೆ ಕೇಂದ್ರೀಕರಿಸಿ, ‘ಉಪ-ರಾಷ್ಟ್ರೀಯ ಪ್ರತಿರಕ್ಷಣೆ ದಿನ’ವನ್ನು(ಎಸ್‌ಎನ್‌ಐಡಿ) ಮಾತ್ರ ಆಯೋಜಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ‘ಪಲ್ಸ್ ಪೋಲಿಯೊ ಲಸಿಕೆ’ ಕಾರ್ಯಕ್ರಮವೂ ಒಂದು. ಪ್ರತಿ ವರ್ಷ ಒಂದು ‘ರಾಷ್ಟ್ರೀಯ ಪ್ರತಿರಕ್ಷಣೆ ದಿನ’ (ಎನ್‌ಐಡಿ) ಮತ್ತು ಎರಡು ‘ಉಪ-ರಾಷ್ಟ್ರೀಯ ಪ್ರತಿರಕ್ಷಣೆ ದಿನಗಳು’ (ಎಸ್‌ಎನ್‌ಐಡಿ) ನಡೆಸಲಾಗುತ್ತದೆ. ಈ ವೇಳೆ, ಐದು ವರ್ಷದ ಒಳಗಿನ ಮಕ್ಕಳಿಗೆ ಬಯೋ-ಓರಲ್ ಪೋಲಿಯೊ ಲಸಿಕೆ ನೀಡಲಾಗುತ್ತದೆ.

ಆದರೆ, ಈ ವರ್ಷ ಎನ್‌ಐಡಿ ನಡೆಸಲು ಅಗತ್ಯವಿರುವ ಪೋಲಿಯೊ ಲಸಿಕೆ ಇಲ್ಲದ ಕಾರಣ, ಕೇವಲ ಎರಡು ಎಸ್‌ಎನ್‌ಐಗಳನ್ನು ನಡೆಸಲು ಸರ್ಕಾರ ಮುಂದಾಗಿದೆ. ಅಸ್ಸಾಂ, ಬಿಹಾರ, ದೆಹಲಿ, ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ಗುಜರಾತ್, ಉತ್ತರಾಖಂಡ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಿ ಎಸ್‌ಎನ್‌ಐಡಿ ನಡೆಸಲು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ವಕ್ತಾರರು ಈ ವರ್ಷ ಎನ್‌ಐಡಿ ನಡೆಸುತ್ತಿಲ್ಲವೆಂದು ಖಚಿತಪಡಿಸಿದ್ದಾರೆ. ಆದರೆ, ಎರಡು ಎಸ್‌ಎನ್‌ಐಡಿಗಳನ್ನು ಯೋಜಿಸಲಾಗಿದೆ. ಮೊದಲನೆ ಕಾರ್ಯಕ್ರಮವನ್ನು ಮೇ 28 ರಂದು ಮತ್ತು ಎರಡನೆಯದನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ‘ದಿ ಪ್ರಿಂಟ್’ ವರದಿ ಮಾಡಿದೆ.

ಭಾರತವು ‘ಇನ್ಯಾಕ್ಟಿವ್ ಪೋಲಿಯೊ ಲಸಿಕೆ’ (ಐಪಿವಿ) ಮತ್ತು ಬಯೋ-ಓರಲ್ ಪೋಲಿಯೊ ಲಸಿಕೆ (ಬಿಒಪಿವಿ) ಅನ್ನು ಬಳಸುತ್ತದೆ. ಈ ಲಸಿಕೆಗಳು ಹೆಚ್ಚು ಸಾಂಕ್ರಾಮಿಕ ರೋಗ ಮತ್ತು ಪಾರ್ಶ್ವವಾಯುನಂತಹ ಪೋಲಿಯೊ ಸಂಬಂಧಿ ಕಾಯಿಲೆಗಳ ವಿರುದ್ಧ ಮಕ್ಕಳನ್ನು ರಕ್ಷಿಸುತ್ತವೆ.

ಈ ಸುದ್ದಿ ಓದಿದ್ದೀರಾ?: ರೋಗಿಗೆ ಜನೌಷಧವನ್ನೇ ಸೂಚಿಸಿ: ಆರೋಗ್ಯ ಸಚಿವಾಲಯ

ಭಾರತವು ಮಾರ್ಚ್ 2014ರಲ್ಲಿ ಪೋಲಿಯೊ ಮುಕ್ತ ರಾಷ್ಟ್ರವೆಂದು ಘೋಷಿಸಿಕೊಂಡಿತು. ಆದಾಗ್ಯೂ, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಜೀವಕ್ಕೆ ಬೆದರಿಕೆಯೊಡ್ಡುವ ರೋಗಗಳ ವಿರುದ್ಧ ಮಕ್ಕಳನ್ನು ರಕ್ಷಿಸಲು ಪೋಲಿಯೊ ಲಸಿಕೆ ನೀಡಲಾಗುತ್ತಿದೆ. ಈ ನಡುವೆ, ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಪೋಲಿಯೊ ಪ್ರಕರಣಗಳು ಏಕಾಏಕಿ ಹೆಚ್ಚುತ್ತಿರುವ ಕಾರಣ, ಈ ಲಸಿಕೆಗೆ ಬೇಡಿಕೆ ಹೆಚ್ಚಾಗಿದೆ.

“ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ‘ವೈಲ್ಡ್ ಪೋಲಿಯೊ ವೈರಸ್ ಟೈಪ್-1’ರ ಹರಡುವಿಕೆ ಹೆಚ್ಚಾಗಿದೆ. ಆಫ್ರಿಕಾ ಸೇರಿದಂತೆ ಕೆಲವು ದೇಶಗಳಲ್ಲಿ ‘ಪೋಲಿಯೊ ವೈರಸ್ ಟೈಪ್-2’ (ಸಿವಿಡಿಪಿವಿ ಟೈಪ್ 2) ಹರಡುತ್ತಿದೆ. ಈ ಕಾರಣಗಳಿಗಾಗಿ, ಮುನ್ನೆಚ್ಚರಿಕಾ ಭಾಗವಾಗಿ ಭಾರತವು ಅತಿ ಹೆಚ್ಚು ಪೋಲಿಯಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಸರ್ಕಾರಿ ಮೂಲಗಳ ಪ್ರಕಾರ, ಈ ವರ್ಷ ಎನ್‌ಐಡಿ ಫೆಬ್ರವರಿಯಲ್ಲಿ ನಡೆಯಬೇಕಿತ್ತು. ಆದರೆ, ಭಾರತ್ ಇಮ್ಯುನೊಲಾಜಿಕಲ್ಸ್ ಮತ್ತು ಬಯೋಲಾಜಿಕಲ್ಸ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಗಳು ಆರೋಗ್ಯ ಸಚಿವಾಲಯಕ್ಕೆ ಅಗತ್ಯವಿದ್ದ ಸುಮಾರು 28 ಕೋಟಿ ಡೋಸ್ ಲಸಿಕೆಯನ್ನು ಪೂರೈಸಲು ವಿಫಲವಾಗಿವೆ” ಎಂದು ವರದಿಯಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಥಾಣೆ ಹತ್ಯೆ ಪ್ರಕರಣ | ಎಚ್‌ಐವಿ ಸೋಂಕಿತನಾಗಿದ್ದ ಹಂತಕ; ಮಹಿಳೆಯದು ಆತ್ಮಹತ್ಯೆ ಎಂದು ಹೇಳಿಕೆ!

ದೆಹಲಿಯ ಶ್ರದ್ದಾ ವಾಕರ್ ಹತ್ಯೆ ಪ್ರಕರಣದ ರೀತಿಯಲ್ಲಿಯೇ ಮಹಾರಾಷ್ಟ್ರದ ಥಾಣೆಯಲ್ಲಿ ಮಹಿಳೆಯೊಬ್ಬರನ್ನು...

ಅಭಿಷೇಕ್‌ ಬ್ಯಾನರ್ಜಿಗೆ ಇ.ಡಿ ಸಮನ್ಸ್‌ | ವಿಚಾರಣೆಗೆ ಹಾಜರಾಗುವುದಿಲ್ಲ ಎಂದ ಟಿಎಂಸಿ ನಾಯಕ

ಪ್ರಾಥಮಿಕ ಶಾಲಾ ನೇಮಕಾತಿ ಹಗರಣದಲ್ಲಿ ಅಭಿಷೇಕ್‌ ಬ್ಯಾನರ್ಜಿ ಪ್ರಶ್ನಿಸಿದ್ದ ಸಿಬಿಐ ಪಂಚಾಯತ್‌ ಚುನಾವಣೆಯ...

ಮಣಿಪುರದಲ್ಲಿ ಇಂಟರ್ನೆಟ್ ಸ್ಥಗಿತ: ತುರ್ತು ವಿಚಾರಣೆಗೆ ಸುಪ್ರೀಂ ನಿರಾಕರಣೆ

ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರ ರಾಜ್ಯದಲ್ಲಿ ಪದೇ ಪದೇ ಇಂಟರ್ನೆಟ್ ಸ್ಥಗಿತಗೊಳಿಸುವುದರ...

ಮುಂದಿನ 36 ಗಂಟೆಗಳಲ್ಲಿ ಬಿಪೊರ್‌ಜಾಯ್‌ ಚಂಡಮಾರುತ ತೀವ್ರ ಸ್ವರೂಪ: ಐಎಂಡಿ

ಮುಂದಿನ 36 ಗಂಟೆಗಳಲ್ಲಿ ಬಿಪೊರ್‌ಜಾಯ್‌ ಚಂಡಮಾರುತ ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ...