ಮುಂದಿನ ಸಾಂಕ್ರಾಮಿಕ ರೋಗ ಕೋವಿಡ್‌ಗಿಂತ ಮಾರಣಾಂತಿಕ: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರ ಎಚ್ಚರಿಕೆ

Date:

ಮುಂದಿನ ಸಾಂಕ್ರಾಮಿಕ ರೋಗಕ್ಕೆ ಜಗತ್ತು ಸಿದ್ಧವಾಗಬೇಕು, ಇದು ಕೋವಿಡ್ 19 ಸಾಂಕ್ರಾಮಿಕ ರೋಗಕ್ಕಿಂತ ಮಾರಣಾಂತಿಕ ಆಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರಾದ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಎಚ್ಚರಿಕೆ ನೀಡಿದ್ದಾರೆ.

ಜಿನವಾದ ವಿಶ್ವ ಆರೋಗ್ಯ ಸಂಸ್ಥೆಯ 76ನೇ ವಾರ್ಷಿಕೋತ್ಸವ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್‌ ನಿಯಂತ್ರಣಕ್ಕೆ ಬಂದಿರಬಹುದು, ಆದರೆ ಅದು ಅಂತ್ಯವಲ್ಲ. ವಿಶ್ವದಾದ್ಯಂತ ಪ್ರಕರಣಗಳು ಸ್ವಲ್ಪಮಟ್ಟಿಗೆ ಸ್ಥಿರವಾಗಿವೆ ಎಂದು ತಿಳಿಸಿದರು.

“ರೋಗ ಮತ್ತು ಸಾವಿನ ಹೊಸ ಉಲ್ಬಣಗಳನ್ನು ಉಂಟುಮಾಡುವ ಮತ್ತೊಂದು ರೂಪಾಂತರದ ಬೆದರಿಕೆ ಇನ್ನು ಉಳಿದಿದೆ ಹಾಗೂ ಇದು ಮಾರಣಾಂತಿಕ ಸಂಭಾವ್ಯತೆಯೊಂದಿಗೆ ಹೊರಹೊಮ್ಮುವ ಸಾಧ್ಯತೆ ಹೆಚ್ಚಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಾಂಕ್ರಾಮಿಕ ರೋಗಗಳು ಒಂದಿಷ್ಟು ನಿಯಂತ್ರಕ್ಕೆ ಬಂದಿರಬಹುದು. ಆದರೆ ಮುಂಬರುವ ಪರಿಣಾಮಗಳನ್ನು ಎದುರಿಸಲು ಎಲ್ಲ ರೀತಿಯ ಪರಿಣಾಮಕಾರಿ ಜಾಗತಿಕ ಕಾರ್ಯವಿಧಾನಗಳ ಅಗತ್ಯತೆಗಳಿಗೆ ಸಿದ್ದವಾಗಿರಬೇಕು. ಮುಂದಿನ ಸಾಂಕ್ರಾಮಿಕವು ಉಲ್ಬಣಗೊಂಡಾಗ ನಾವು ಸಾಮೂಹಿಕವಾಗಿ ಎದುರಿಸಲು ತಯಾರಾಗಿರಬೇಕು” ಎಂದು ಹೇಳಿದರು.

“ಕೋವಿಡ್ 19 ಸಾಂಕ್ರಾಮಿಕವೂ ಸಾರ್ವಜನಿಕ ಆರೋಗ್ಯ ಸುಧಾರಣೆ ಪ್ರಕ್ರಿಯೆಯನ್ನು ಹಿಮ್ಮುಖವಾಗುವಂತೆ ಮಾಡಿತು. ಕಳೆದೊಂದು ದಶಕದಿಂದ ಮಾಡಿದ ಆರೋಗ್ಯ ಲಾಭಗಳನ್ನು ಮತ್ತಷ್ಟು ನಾಶಪಡಿಸುವ ಅಪಾಯವನ್ನು ಎದುರಿಸುವಂತೆ ಮಾಡಿತು. ಅಲ್ಲದೇ ಸುಸ್ಥಿರ ಅಭಿವೃದ್ಧಿ ಗುರಿಗಳಿಂದ ಹಿಂದೆ ಸರಿಯುತ್ತೇವೆ. ಕಳೆದ 75 ವರ್ಷಗಳಲ್ಲಿ ಸಂಸ್ಥೆ ಮಾಡಿದ ಪ್ರಮುಖ ಸಾಧನೆಗಳನ್ನು ಅರಿವು ಮೂಡಿಸಲಾಗುತ್ತಿದೆ. ವಿಶ್ವದ ನಿರೀಕ್ಷೆಗಳು ಅಗಾಧವಾಗಿ ಬೆಳೆದಿದ್ದು, ಸಂಸ್ಥೆಯೂ ಅನೇಕ ಸಂಕೀರ್ಣ ಸವಾಲುಗಳನ್ನು ಎದುರಿಸಿದೆ. ನಮ್ಮ ದಾರಿಗಳು ಕಠಿಣವಾಗಿರಬಹುದು. ಆದರೆ, ಅಂತಿಮ ಗುರಿ ನಿಶ್ಚಿತ” ಎಂದು ಟೆಡ್ರೊಸ್ ತಿಳಿಸಿದರು.

ಗುಣಮಟ್ಟದ ಆರೋಗ್ಯಕ್ಕೆ ಆದ್ಯತೆ

ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಮತ್ತು ಎಲ್ಲರಿಗೂ ಉನ್ನತ ಗುಣಮಟ್ಟದ ಆರೋಗ್ಯವನ್ನು ಸಾಧಿಸಲು ವಿಶ್ವ ಆರೋಗ್ಯ ಸಂಸ್ಥೆಯನ್ನು ಬೆಂಬಲಿಸಲು ಟೆಡ್ರೊಸ್ ಅವರು ಇದೇ ವೇಳೆ ಎಲ್ಲರಿಗೂ ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟ್ಟೆರೆಸ್, “ಒಂದು ರಾಷ್ಟ್ರದ ರೋಗಗಳು ಎಲ್ಲರಿಗೂ ಅಪಾಯ ಮಾಡುವ ಸಾಧ್ಯೆಯಿದೆ. ಎಲ್ಲೆಡೆ, ಎಲ್ಲರಿಗೂ ಆರೋಗ್ಯ ಸುಧಾರಣೆಗೆ ಸಹಕಾರ ನೀಡುತ್ತದೆ. 75 ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಆರಂಭವಾದಗಿನಿಂದ ಮಾನವನ ಆರೋಗ್ಯ ಹೆಚ್ಚು ಸುಧಾರಣೆ ಕಂಡಿದೆ. ಜಾಗತಿಕ ಜೀವನ ನಿರೀಕ್ಷೆಯೂ ಶೇ 50ರಷ್ಟು ಹೆಚ್ಚಾಗಿದೆ. ಶಿಶುಗಳ ಸಾವಿನ ಪ್ರಮಾಣ ಶೇ 60ರಷ್ಟು ಕುಸಿದಿದೆ, ಸಿಡುಬು ರೋಗವನ್ನು ನಿರ್ಮೂಲನೆ ಮಾಡಲಾಗಿದೆ” ಎಂದು ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ 75ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಭಾನುವಾರದಿಂದ ಡಬ್ಲ್ಯೂಎಚ್ಒನ 76ನೇ ವಿಶ್ವ ಆರೋಗ್ಯ ಸಭೆ ಆರಂಭವಾಗಿದೆ. ಈ ಬಾರಿ ಜೀವ ಉಳಿಸುವಿಕೆ, ಎಲ್ಲರಿಗೂ ಆರೋಗ್ಯ ಎಂಬ ನಿಟ್ಟಿನಲ್ಲಿ ಸಂಸ್ಥೆ ಗಮನ ಹರಿಸಲಾಗಿದೆ.  10 ದಿನದ ಸಭೆಯಲ್ಲಿ ಪ್ರತಿನಿಧಿಗಳು ಜಾಗತಿಕ ಆರ್ಥಿಕ ತುರ್ತು ಪರಿಸ್ಥಿತಿ ಮತ್ತು ಗಂಭೀರ ಪಾತ್ರದಲ್ಲಿ ಡಬ್ಲ್ಯೂಎಚ್ಒ ನಿರ್ಣಯಕ ಪರಿಸ್ಥಿತಿಗಳ ಚರ್ಚೆ ನಡೆಸಲಿದ್ದಾರೆ.

ಕಳೆದ ವರ್ಷದ ಪ್ರಗತಿ, ಸಾಧನೆ, ಸವಾಲು ಮತ್ತು ಭವಿಷ್ಯದ ಆದ್ಯತೆಗಳಾದ ವಿಶ್ವ ಆರೋಗ್ಯದ ವ್ಯಾಪ್ತಿ, ತುರ್ತುಸ್ಥಿತಿ, ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಡಬ್ಲ್ಯೂಎಚ್ಒ ಕೆಲಸದ ಕುರಿತು ಸದಸ್ಯ ಪ್ರತಿನಿಧಿಗಳು ಪರಿಶೀಲನೆ ನಡೆಸಲಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಇವರ ಹೇಳಿಕೆಗಳನ್ನು ವಸ್ತುನಿಷ್ಠವಾಗಿ ಪರಿಶೀಲನೆ ಮಾಡಬೇಕಾಗುತ್ತದೆ.ಯಾಕಂದ್ರೇ ಕೋವಿಡ್ ಕುರಿತು ಇವರು ಹಲವು ಗೊಂದಲಕಾರಿ, ಅನುಮಾನಾಸ್ಪದ ಹೇಳಿಕೆಗಳನ್ನು ನೀಡಿದ್ದರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೋಲಿಯೊ ಲಸಿಕೆ ಕೊರತೆ; ‘ರಾಷ್ಟ್ರೀಯ ಲಸಿಕಾ ದಿನ’ ರದ್ದು!

ಪೋಲಿಯೊ ಲಸಿಕೆಗಳ ಕೊರತೆಯಿಂದಾಗಿ ಈ ವರ್ಷದ ಪೋಲಿಯೊ 'ರಾಷ್ಟ್ರೀಯ ಲಸಿಕಾ ದಿನ'...

ಪಶ್ಚಿಮ ಆಫ್ರಿಕಾದಲ್ಲಿ ಹಣದುಬ್ಬರ; ಸಾಮಾನ್ಯರ ಜೋಲೋಫ್‌ ಅನ್ನ ಈಗ ದುಬಾರಿ ಅಡುಗೆ

ಪಶ್ಚಿಮ ಆಫ್ರಿಕಾ ಖಂಡದಲ್ಲಿ ಅನ್ನದ ಜೊತೆಗೆ ಮಾಂಸ ಸೇರಿಸಿ ಮಾಡುವ ಜೋಲೋಫ್...

ಇಮ್ರಾನ್‌ ಖಾನ್ | ಅಂದು ಹೀರೋ, ಇಂದು ವಿಲನ್; ಇಬ್ಭಾಗವಾಗಲಿದೆಯಾ ಪಾಕಿಸ್ತಾನ?

70 ವರ್ಷದ ಇಮ್ರಾನ್ ಖಾನ್‌ ಅಷ್ಟೇ ಅಲ್ಲ, ಪಾಕಿಸ್ತಾನಕ್ಕೂ ಇದು ಅಗ್ನಿಪರೀಕ್ಷೆಯ...