- ಮುಳಗುಂದ ಚೆಕ್ ಪೊಸ್ಟ್‌ನಲ್ಲಿ ಪರಿಶೀಲನೆ ವೇಳೆ ಹಣ ಪತ್ತೆ
- ವಾಹನ, ಆಸ್ತಿ ಖರೀದಿಗೆ ಹಣ ಎಂದ ಪ್ರಯಾಣಿಕರು
ಸೂಕ್ತ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸಲಾಗುತ್ತಿದ್ದ ₹24 ಲಕ್ಷ ಹಣವನ್ನು ಗದಗ ಜಿಲ್ಲೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೋಮವಾರ ತಡರಾತ್ರಿ ಕಾರಿನಲ್ಲಿ ಹಣ ಸಾಗಿಸಲಾಗುತ್ತಿತ್ತು. ಮುಳಗುಂದ ಚೆಕ್‌ಪೊಸ್ಟ್‌ನಲ್ಲಿ ಪರಿಶೀಲನೆ ಮಾಡುವಾಗ ಕಾರಿನಲ್ಲಿ ಹಣ ಇರುವುದು ಪತ್ತೆಯಾಗಿದೆ. ದಾವಣಗೆರೆಯಿಂದ ಗದಗ ಕಡೆಗೆ ಕಾರಿನಲ್ಲಿ ಸೂಕ್ತ ದಾಖಲೆ ಇಲ್ಲದೆ ₹24 ಲಕ್ಷ ಹಣ ಸಾಗಿಸಲಾಗುತ್ತಿತ್ತು. ಆ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
“ಸದ್ಯಕ್ಕೆ ಈ ಹಣ ಯಾರದ್ದು ಮತ್ತು ಯಾವ ಕಾರಣಕ್ಕೆ ಬಳಸಿಕೊಳ್ಳಲು ಯೋಚಿಸಿದ್ದರು ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ವಾಹನ ಮತ್ತು ಆಸ್ತಿ ಖರೀದಿಗೆ ಹಣ ತಗೆದುಕೊಂಡು ಹೊರಟ್ಟಿದ್ದೇವೆ ಎಂದು ಕಾರಿನಲ್ಲಿದ್ದವರು ಹೇಳುತ್ತಿದ್ದಾರೆ. ಆದರೆ, ದಾಖಲಾತಿಗಳು ಲಭ್ಯವಾಗದ ಕಾರಣ, ಅನುಮಾನದ ಹಿನ್ನೆಲೆ ಹಣವನ್ನು ವಶಕ್ಕೆ ಪಡೆದಿದ್ದೇವೆ” ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.