ಬೆಳಗಾವಿ | ಮೃಗಾಲಯದ ಹುಲಿಗೆ ಅಮೇರಿಕಾದ ಖಾಯಿಲೆ; ಚಿಕಿತ್ಸೆ ನೀಡಿದ ಮೈಸೂರು ವೈದ್ಯ

Date:

  • 1976ರಲ್ಲಿ ಅಮೇರಿಕಾದಲ್ಲಿ ಈ ವನ್ಯಮೃಗಗಳ ರೋಗ ಪತ್ತೆ ಮಾಡಲಾಗಿತ್ತು
  • ವನ್ಯವೈದ್ಯರ ತೀವ್ರ ಪ್ರಯತ್ನದಿಂದ ಶೌರ್ಯ(ಹುಲಿ) ಚೇತರಿಸಿಕೊಳ್ಳುತ್ತಿದ್ದಾನೆ

ಅಮೆರಿಕಾದಲ್ಲಿ ಐದು ದಶಕದ ಹಿಂದೆ ಕಾಣಿಸಿಕೊಂಡಿದ್ದ ಕಾಯಿಲೆ. ಬೆಳಗಾವಿ ಹೊರ ವಲಯದ ಭೂತರಾಮನಹಟ್ಟಿ ಮೃಗಾಲಯದ ಹುಲಿಯಲ್ಲಿ ಪತ್ತೆಯಾಗಿತ್ತು. ಹಲವು ತಿಂಗಳ ಸತತ ಪ್ರಯತ್ನದ ಬಳಿಕ ಅಪರೂಪದ ಹುಲಿಗೆ ಚಿಕಿತ್ಸೆಯೂ ಆರಂಭವಾಗಿದೆ.

ನಾಗರಹೊಳೆಯಲ್ಲಿ ಸ್ವಚ್ಛಂದವಾಗಿದ್ದ ಶೌರ್ಯ (ಹುಲಿ) ಜನರಿಗೆ ಕಾಟ ಕೊಡುತ್ತಿದ್ದುದರಿಂದ ಕೆಲ ವರ್ಷಗಳ ಹಿಂದೆ ಸೆರೆಹಿಡಿದು ಮೈಸೂರಿನಲ್ಲಿ ಇರಿಸಲಾಗಿತ್ತು. ಸಶಕ್ತನಾದ ಶೌರ್ಯನನ್ನು ಬೆಳಗಾವಿ ಮೃಗಾಲಯಕ್ಕೆ ರವಾನಿಸಲಾಗಿತ್ತು. ಹುಲಿ ಶೌರ್ಯನಿಗೀಗ 20 ವರ್ಷಗಳಾಗಿದೆ. ಕೆಲ ತಿಂಗಳಿನಿಂದ ಶೌರ್ಯ ಮಂಕಾಗಿದ್ದನ್ನು ಕಂಡು ಮೃಗಾಲಯ ಸಿಬ್ಬಂದಿಗೆ ಕಳವಳ ಉಂಟಾಗಿತ್ತು.

ವಾಂತಿ, ಬೇಧಿ, ಸುಸ್ತು ಅನುಭವಿಸುತ್ತಿದ್ದು, ಆಹಾರ ಸೇವನೆ ತ್ಯಜಿಸಿದ್ದ ಶೌರ್ಯನ ಆರೋಗ್ಯ ಸುಧಾರಿಸಲು ಅರಣ್ಯ ಅಧಿಕಾರಿಗಳು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ರಾಜ್ಯದ ಹಲವು ಲ್ಯಾಬ್‌ಗಳಲ್ಲಿ ಶೌರ್ಯನಿಗೆ ಬಂದಿರುವ ರೋಗ ತಪಾಸಣೆಗೆ ಪ್ರಯತ್ನಿಸಲಾಗಿತ್ತು. ದೇಶದ ಹಲವು ಭಾಗಗಳಲ್ಲಿ ಇದ್ದಕ್ಕಿದ್ದಂತೆ ಹುಲಿ, ಸಿಂಹ, ಚಿರತೆಯಂತಹ ಪ್ರಾಣಿಗಳು ಅನಾರೋಗ್ಯದಿಂದ ಅಸುನೀಗಿದ ಪ್ರಕರಣಗಳು ಅರಣ್ಯ ವೈದ್ಯಾಧಿಕಾರಿಗಳನ್ನು ಚಿಂತೆಗೀಡು ಮಾಡಿತ್ತು.

ಪಿಸಿಆರ್‌ ಟೆಸ್ಟ್‌ ಸೇರಿ ಹಲವು ಬಗೆಯ ಚಿಕಿತ್ಸಾ ಕ್ರಮಗಳನ್ನು ನಡೆಸಿ ರಾಜ್ಯದ ವನ್ಯ ವೈದ್ಯರೆಲ್ಲ ಸುಮ್ಮನಾಗಿ ಕೈಚೆಲ್ಲಿದ್ದ ಸಂದರ್ಭ, ರೋಗ ತಪಾಸಣೆ ಸರಿಯಾಗಿ ಕೈಗೊಳ್ಳುವಲ್ಲಿ ಮೈಸೂರು ಮೂಲದ ವನ್ಯವೈದ್ಯ ಡಾ. ಮದನ್ ಕೋಮಪಾಲ ಅವರನ್ನು ಸಂಪರ್ಕಿಸಲಾಯಿತು.

ಹಲವು ವರ್ಷಗಳ ಕಾಲ ಮೃಗಾಲಯಗಳಲ್ಲೇ ಕೆಲಸ ಮಾಡಿ ಬೆಂಗಳೂರಿನಲ್ಲಿ ಖಾಸಗಿ ಸೇವೆ ಆರಂಭಿಸಿರುವ ಡಾ. ಮದನ್ ಅವರಿಗೆ ಸಲಹೆ ನೀಡಲು ಸೂಚಿಸಲಾಗಿತ್ತು. ಅವರು ಆಗಮಿಸಿ ವನ್ಯಮೃಗಗಳ ಸಾವಿಗೆ ಕಾರಣವಾಗುತ್ತಿರುವ ರೋಗ ಪತ್ತೆ ಮಾಡಿದ್ದಾರೆ.

1976ರಲ್ಲೇ ಅಮೇರಿಕಾದಲ್ಲಿ ಈ ವನ್ಯಮೃಗಗಳ ರೋಗ ಪತ್ತೆ ಮಾಡಿದ್ದರೂ ಅದನ್ನು ನಮ್ಮ ದೇಶದಲ್ಲಿ ಗುರುತಿಸಲಾಗಿರಲಿಲ್ಲ. ವನ್ಯಮೃಗಗಳನ್ನು ಆಹುತಿ ಪಡೆಯುತ್ತಿದ್ದ, ವನ್ಯ ವೈದ್ಯರಿಗೆ ಸಹಜವಾಗಿ ಗುರುತಿಸಲಾಗದ ಸೈಟಾಕ್‌ಸ್ಜೂನ್ ಫೆಲಿಸ್ (cytauxzoon felis) ಮತ್ತು ಮೈಕೊಪ್ಲಾಸ್ಮಾ(mycoplasma) ಎಂಬ ಅಪರೂಪದ ಖಾಯಿಲೆಗಳನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಕೊಡಲಾಗುತ್ತಿದೆ.

ಅರಣ್ಯಾಧಿಕಾರಿಗಳು ಮತ್ತು ವನ್ಯವೈದ್ಯರ ತೀವ್ರ ಪ್ರಯತ್ನದಿಂದ ಶೌರ್ಯ ಚೇತರಿಸಿಕೊಳ್ಳುತ್ತಿದ್ದಾನೆ. ಈಗಾಗಲೇ 20 ವರ್ಷ ಸವೆಸಿರುವ ಶೌರ್ಯ ತನ್ನ ಆಯುಷ್ಯ ಸರಿಯಾಗಿ ಕಾಯ್ದುಕೊಂಡು ಮುನ್ನಡೆದಿದೆ.

“ವೈರಸ್‌ ಕಾರಣಕ್ಕೆ ಈ ರೋಗ ಬರುತ್ತದೆ. ಭಾರತದಲ್ಲಿ ಇದು ಅಪರೂಪ. ಆಹಾರ ಅಥವಾ ಕೀಟಾಣುಗಳಿಂದ ಈ ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಯಸ್ಸಾದ ಪ್ರಾಣಿಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಕೆಲ ವರ್ಷದಿಂದ ರೋಗವೇ ಪತ್ತೆಯಾಗದೇ ಬಳಲುತ್ತಿದ್ದ ಹುಲಿಗೆ ಈಗ ನಿರ್ದಿಷ್ಟ ಚಿಕಿತ್ಸೆ ನೀಡಬಹುದು” ಎಂದು ಮೃಗಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಜನರ ನಿರೀಕ್ಷೆಗೆ ತಕ್ಕಂತೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ; ಲಕ್ಷ್ಮೀ ಹೆಬ್ಬಾಳ್ಕರ್‌

“ಅಪರೂಪದ ರೋಗ ತಳಿ ಪತ್ತೆ ಹಚ್ಚಿರುವ ವನ್ಯವೈದ್ಯ ಡಾ. ಮದನ್ ಪ್ರಯತ್ನ ದೇಶಾದ್ಯಂತ ಇತರ ವನ್ಯ ಪ್ರಾಣಿಗಳ ರೋಗ ಪತ್ತೆ ಹಠಾತ್ ಸಾಯುತ್ತಿರುವ ವನ್ಯಮೃಗಗಳ ರಕ್ಷಣೆಗೆ ನೆರವಾಗಲಿದೆ. ಶೌರ್ಯನ ಚೇತರಿಕೆ ನಮಗೆಲ್ಲ ಸಂತಸ ಉಂಟು ಮಾಡಿದೆ” ಎಂದು ಬೆಳಗಾವಿ ಮೃಗಾಲಯ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಸಂತಸ ವ್ಯಕ್ತಪಡಿಸಿದ್ದಾರೆ.

ಮೃಗಾಲಯ ವೈದ್ಯ ಡಾ. ನಾಗೇಶ ಹುಯಿಲಗೋಳ, ಝೂ ಕ್ಯೂರೇಟರ್ ಕೆಂಪನ್ನ ವನ್ನೂರ, ಡೆಪ್ಯುಟಿ ರೇಂಜ್ ಫಾರೆಸ್ಟರ್ ಪ್ರತಿಭಾ ಕೊಪ್ಪಳ ಹಾಗೂ ಸಿಬ್ಬಂದಿಗೆ ಹುಲಿ ಚೇತರಿಕೆ ಸಂತಸ ತಂದಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಕಾಡಂಚಿನ ಗ್ರಾಮದಲ್ಲಿ ಶಾಸಕ ದರ್ಶನ್ ಗ್ರಾಮ ವಾಸ್ತವ್ಯ

ನಂಜನಗೂಡು ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್‌ ಗ್ರಾಮ ವಾಸ್ತವ್ಯ...

ಕಲಬುರಗಿ | ಹೈ-ಕ ಭಾಗದ ಸಾಹಿತಿಗಳೆಂಬ ಹಣೆಪಟ್ಟಿ ಏಕೆ: ಡಾ. ಚಿದಾನಂದ ಸಾಲಿ

ದಲಿತ ಸಾಹಿತಿಗಳು ಅಂತ ಇರುವ ಹಾಗೆ, ಬ್ರಾಹ್ಮಣ ಕತೆಗಾರರು ಎಂಬ ಹೆಸರು...

ಮದ್ಯದಂಗಡಿ ಬೇಡ – ನೀರು, ಆರೋಗ್ಯ, ಆಹಾರ ಕೊಡಿ; ಸ್ಲಂ ಜನಾಂದೋಲನ ಒತ್ತಾಯ

ನಾಗರೀಕ ಸಮಾಜಕ್ಕೆ ಬೇಕಿರುವುದು ನೀರು, ನೈರ್ಮಲ್ಯ, ಆರೋಗ್ಯ ಮತ್ತು ಆಹಾರವೇ ಹೊರತು,...

ರಾಯಚೂರು | 9 ವರ್ಷಗಳಿಂದ ಅಂಗನವಾಡಿ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ

ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ರೋಡಲ ಬಂಡಾ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ...