ಬಳ್ಳಾರಿ | 23ನೇ ವಯಸ್ಸಿಗೇ ಮೇಯರ್ ಪಟ್ಟ ಅಲಂಕರಿಸಿದ ತ್ರಿವೇಣಿ

Date:

  • ಬಳ್ಳಾರಿಯ 4ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ
  • ರಾಜ್ಯದಲ್ಲಿಯೇ ಅತೀ ಕಡಿಮೆ ವಯಸ್ಸಿನ ಮೇಯರ್

ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ರಂಗೇರಿದ್ದ ಹೊತ್ತಲ್ಲಿ, ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯೂ ಮತ್ತಷ್ಟು ಕಾವು ಹೆಚ್ಚಿಸಿತ್ತು. ಇದೀಗ ರಾಜ್ಯದಲ್ಲಿಯೇ ಅತೀ ಕಿರಿಯ ವಯಸ್ಸಿನ ಮೇಯರ್‌ ಆಯ್ಕೆಯಾಗುವುದರ ಮೂಲಕ ಕೂತೂಹಲಕ್ಕೆ ತೆರೆ ಬಿದ್ದಿದೆ.

ತಮ್ಮ ತಂದೆ ಹಾಗೂ ತಾಯಿಯ ಪ್ರಭಾವದಿಂದ 21ನೇ ವಯಸ್ಸಿಗೆ 4ನೇ ವಾರ್ಡ್‌ನ ಕಾಂಗ್ರೆಸ್ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಹೆಲ್ತ್ ಇನ್ಸ್ಪೆಕ್ಟರ್ ಕೋರ್ಸ್ ಪೂರೈಸಿದ್ದ ಇವರು ಕೇವಲ 23 ವರ್ಷಕ್ಕೆ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಮುಖಂಡ ಡಿ ಸೂರಿ ಎಂಬುವವರು ಪುತ್ರಿಯಾಗಿರುವ ಕು. ತ್ರಿವೇಣಿ ಅವರ ಮೇಯರ್‌ ಆಗಿ ಆಯ್ಕೆ ಆಗುವುದರೊಂದಿಗೆ ಇಬ್ಬರು ಮೇಯರ್ ಗಳನ್ನು ಬಳ್ಳಾರಿ ನಗರಕ್ಕೆ ನೀಡಿದ ಕುಟುಂಬ ಎಂಬ ಹೆಸರಿಗೆ ಖ್ಯಾತಿ ಪಡೆದಿದೆ. ತ್ರಿವೇಣಿ ಅವರ ತಾಯಿ 2019ರಲ್ಲಿ ಮೇಯರ್ ಆಗಿ ಕಾರ್ಯ ನಿರ್ವಹಿಸಿದ್ದರು.

ಈ ಸುದ್ದಿ ಓದಿದ್ದೀರಾ? : ಕಾಂಗ್ರೆಸ್ ಕಟ್ಟಿಹಾಕಲು ಚುನಾವಣಾ ಕಾರ್ಯಕ್ಕೆ ಐಟಿ ಅಧಿಕಾರಿಗಳ ನೇಮಕ: ಸಿದ್ದರಾಮಯ್ಯ ಆರೋಪ

ಕಾಂಗ್ರೆಸ್‌ನಿಂದ ಉಮಾದೇವಿ, ಕುಬೇರ ಮತ್ತು ತ್ರಿವೇಣಿ ನಾಮಪತ್ರ ಸಲ್ಲಿಸಿದ್ದರು. ರಾಜ್ಯಸಭೆ‌ ಕಾಂಗ್ರೆಸ್‌ ಸದಸ್ಯ ಸಯ್ಯದ್ ನಾಸಿರ್‌ ಹುಸೇನ್ ಉಮಾದೇವಿ ಹಾಗೂ ಕುಬೇರ ಅವರಿಗೆ ನಾಮಪತ್ರ ಹಿಂಪಡೆಯಲು ಸೂಚಿಸಿದ್ದರು. ಇವರಿಬ್ಬರು ನಾಮ ಪತ್ರ ಪಡೆದಿದ್ದರಿಂದ ಡಿ. ತ್ರಿವೇಣಿ ಮತ್ತು ನಾಗರತ್ನ ಅವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು.

ಚುನಾವಣೆಯಲ್ಲಿ ಸದಸ್ಯರು, ಸಂಸದರು, ಶಾಸಕರು ಸೇರಿದಂತೆ ಒಟ್ಟು 44 ಜನ ಪಾಲ್ಗೊಂಡರು. ಇದರಲ್ಲಿ ಕಾಂಗ್ರೆಸ್ನ ತ್ರಿವೇಣಿಗೆ 28 ಮತ ಬಂದರೆ, ನಾಗರತ್ನ ಅವರಿಗೆ 16 ಮತಗಳಷ್ಟೇ ಬಂದವು. 33ನೇ ವಾರ್ಡ್ ನ ಜಾನಕಮ್ಮ ಉಪಮೇಯರ್‌ ಆಗಿ ಆಯ್ಕೆಯಾದರು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಿಜೆಪಿಯ ದುರಾಡಳಿತದಿಂದ ಕಾಂಗ್ರೆಸ್‌ಗೆ ಅಧಿಕಾರ: ಚಾಮರಸ ಮಾಲಿ ಪಾಟೀಲ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಕಾರ್ಡ್ ನೀಡಿದ್ದರಿಂದ ರಾಜ್ಯ ವಿಧಾನಸಭೆಯಲ್ಲಿ‌...

ಬೆಳಗಾವಿ | ಮತ್ತೊಂದು ಭೀಕರ ಅಪಘಾತ

ಮೈಸೂರಿನ ಟಿ ನರಸೀಪುರದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 10 ಮಂದಿ ಮೃತಪಟ್ಟಿದ್ದರು....

ರಾಯಚೂರು | ಕಲುಷಿತ ನೀರು ಸೇವನೆ ಪ್ರಕರಣ: ಮೃತ ಬಾಲಕನ ಕುಟುಂಬಕ್ಕೆ ₹5 ಲಕ್ಷ ಪರಿಹಾರ

ರಾಯಚೂರು ಜಿಲ್ಲೆಯ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಮೃತಪಟ್ಟ ಬಾಲಕನ...

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ತೊಂದರೆಯಾಗದು: ಉಪಮುಖ್ಯಮಂತ್ರಿ ಡಿಕೆಶಿ

ನಾವು ಜಗಳವಾಡಿ ಕೋರ್ಟ್ ಕಚೇರಿ ಅಲೆದಿದ್ದು ಸಾಕು ಸೌಹಾರ್ದತೆಯಿಂದ ಮೇಕೆದಾಟು ಯೋಜನೆಗೆ ಸಹಕರಿಸಿ ಮೇಕೆದಾಟು...