ಬೆಂಗಳೂರು | ಇಬ್ಬರು ಮಹಿಳಾ ಉದ್ಯೋಗಿಗಳ ನಗ್ನ ದೃಶ್ಯ ಸೆರೆ; ಹೋಟೆಲ್‌ ಉದ್ಯಮಿ ಬಂಧನ

Date:

ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳಾ ಉದ್ಯೋಗಿಗಳು ಸ್ನಾನ ಮಾಡುತ್ತಿದ್ದ ವೇಳೆ ಮೊಬೈಲ್‌ನಲ್ಲಿ ನಗ್ನ ದೃಶ್ಯ ಸೆರೆ ಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಡುವ ಬೆದರಿಕೆ ಒಡ್ಡುತ್ತಿದ್ದ ಹೋಟೆಲ್‌ ಉದ್ಯಮಿಯನ್ನು ಬೆಂಗಳೂರಿನ ಎಚ್‌ಎಎಲ್‌ ಪೊಲೀಸರು ಬಂಧಿಸಿದ್ದಾರೆ.‌

ನಿಸರ್ಗ ಲೇಔಟ್‌ ನಿವಾಸಿ, ಹೋಟೆಲ್‌ ಉದ್ಯಮಿ ರಘುರಾಮ್(42) ಬಂಧಿತ ಆರೋಪಿ. ಇಬ್ಬರು ಮಹಿಳಾ ಉದ್ಯೋಗಿಗಳಿಗೆ ವಿಡಿಯೋ ತೋರಿಸಿ ದೈಹಿಕ ಸಂಬಂಧ ಬೆಳೆಸಲು ಒತ್ತಾಯಿಸುತ್ತಿದ್ದ. 22 ವರ್ಷದ ಯುವತಿ ಕ್ಯಾಶಿಯರ್‌ ಆಗಿ, 23 ವರ್ಷದ ಯುವತಿ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

“ನಿಸರ್ಗ ಲೇಔಟ್‌ನ 5ನೇ ಕ್ರಾಸ್‌ನಲ್ಲಿರುವ ಕಟ್ಟಡದ ಕೆಳ ಅಂತಸ್ತಿನಲ್ಲಿ ಮಹಿಳಾ ಉದ್ಯೋಗಿಗಳ ವಾಸಕ್ಕೆ ಜಾಗ ನೀಡಲಾಗಿತ್ತು. ಸ್ನಾನಗೃಹದ ವೆಂಟಿಲೇಟರ್‌ ಬಳಿ ಮೊಬೈಲ್‌ ಇರುವುದನ್ನು ಯುವತಿಯರಿಬ್ಬರು ಗಮನಿಸಿದ್ದರು. ಆರಂಭದಲ್ಲಿ ಹೋಟೆಲ್‌ನ ಸಿಬ್ಬಂದಿಯ ಮೊಬೈಲ್‌ ಇರಬಹುದೆಂದು ಭಾವಿಸಿದ್ದರು. ಅನುಮಾನ ಬಂದು ಪರಿಶೀಲಿಸಿದಾಗ ನಗ್ನ ದೃಶ್ಯವನ್ನು ಚಿತ್ರೀಕರಿಸಿರುವುದು ಗೊತ್ತಾಗಿದೆ” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಉದ್ಯಮಿ ನಾಯ್ಡು ಕಾರಿಗೆ ಬೆಂಕಿ ಪ್ರಕರಣ; ಮುತ್ತಪ್ಪ ರೈ ಮಗ ಸೇರಿ 8 ಮಂದಿ ವಿರುದ್ಧ ಚಾರ್ಜ್‌ಶೀಟ್

“ಚಿತ್ರೀಕರಿಸಿರುವ ವಿಡಿಯೋಗಳನ್ನು ಡಿಲೀಟ್‌ ಮಾಡುವಂತೆ ಸಂತ್ರಸ್ತೆಯರು ಮನವಿ ಮಾಡಿದ್ದರು. ಆದರೂ ಆತ ಡಿಲೀಟ್ ಮಾಡದೇ ದೈಹಿಕ ಸಂಬಂಧ ಹೊಂದಲು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

“ಆರೋಪಿಯ ಮೊಬೈಲ್ ವಶಕ್ಕೆ ಪಡೆದು ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ” ಎಂದು ಪೊಲೀಸರು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಕೆಐಎ ಒಂದನೇ ಟರ್ಮಿನಲ್‌ ಶೀಘ್ರ ನವೀಕರಣ

ಹದಿನೈದು ವರ್ಷಗಳಲ್ಲಿ 250 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದ ಟರ್ಮಿನಲ್...

ಬೆಂಗಳೂರು | ಸ್ನೇಹಿತನ ಜತೆ ಸೇರಿ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿದ ಪ್ರಿಯಕರ

ಗಿರಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಜೂ. 6ರಂದು ನಡೆದಿದ್ದ ಘಟನೆ...

ಪೊಲೀಸರು ಹಣೆಗೆ ಕುಂಕುಮ ಇಡುವಂತಿಲ್ಲವೇ? ಗೃಹ ಸಚಿವರ ಸ್ಪಷ್ಟನೆ

ಕೋಮುವಾದ ತಡೆಗೆ ಪೊಲೀಸ್‌ ಇಲಾಖೆಯಲ್ಲಿ ವಿಭಾಗ ರಚಿಸುತ್ತೇವೆ ಎಂದು ಕಾಂಗ್ರೆಸ್‌ ಸರ್ಕಾರ...

ಬೆಂಗಳೂರು | ಮಳೆಗಾಲದಲ್ಲಿ ಬೀಳುವ ರಸ್ತೆಗುಂಡಿ ಮುಚ್ಚಲು ಕೋಲ್ಡ್‌ ಮಿಕ್ಸ್‌ನೊಂದಿಗೆ ಸಜ್ಜಾದ ಬಿಬಿಎಂಪಿ

ಈ ತಂತ್ರಜ್ಞಾನದಲ್ಲಿ ಬಿಟುಮೆನ್ ಅನ್ನು ಬಿಸಿ ಮಾಡುವ ಅಗತ್ಯವಿಲ್ಲ ಕೇವಲ 10 ನಿಮಿಷಗಳಲ್ಲಿ...