ಅಂಗರಕ್ಷಕ ರದ್ದು | ಪ್ರೊ ನರೇಂದ್ರ ನಾಯಕ್‌ ಜೀವಕ್ಕೆ ಅಪಾಯವಾದರೆ ಪೊಲೀಸ್ ಇಲಾಖೆ, ಸರ್ಕಾರ ನೇರ ಹೊಣೆ: ಡಿವೈಎಫ್ಐ ಎಚ್ಚರಿಕೆ

Date:

  • ʼಬಲಪಂಥೀಯ ಉಗ್ರಗಾಮಿಗಳ ಹಿಟ್ ಲಿಸ್ಟ್‌ನಲ್ಲಿ ನರೇಂದ್ರ ನಾಯಕ್ʼ
  • ಅಂಗರಕ್ಷಕ ರದ್ದು ಮಾಡಿದ್ದನ್ನು ತೀವ್ರವಾಗಿ ವಿರೋಧಿಸಿದ ಡಿವೈಎಫ್ಐ

ಪ್ರೊ ನರೇಂದ್ರ ನಾಯಕ್ ನೀಡಿದ್ದ ಅಂಗರಕ್ಷಕರನ್ನು ರದ್ದು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಅವರ ವಿರುದ್ಧ ಯಾವುದೇ ಅನಾಹುತಗಳು ಸಂಭವಿಸಿದರೆ ಪೊಲೀಸ್ ಇಲಾಖೆ ಮತ್ತು ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್ಐ) ಹೇಳಿದೆ.

ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ಹೊಡಿಸಿರುವ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, “ಪ್ರೊ ನರೇಂದ್ರ ನಾಯಕ್ ಅವರು ಬಲಪಂಥೀಯ ಉಗ್ರಗಾಮಿಗಳ ದಾಳಿಗೊಳಗಾಗುವ ಹಿಟ್ ಲಿಸ್ಟ್ ನಲ್ಲಿ ಇರುವ ಸಲುವಾಗಿಯೇ ಇಲ್ಲಿಯವರೆಗೆ ಅವರಿಗೆ ಅಂಗರಕ್ಷಕ ಭದ್ರತೆ ನೀಡಲಾಗಿತ್ತು. ಆದರೆ, ಈಗ ಏಕಾಏಕಿ ಅಂಗರಕ್ಷಕ ಭದ್ರತೆಯನ್ನು ಪೊಲೀಸ್ ಇಲಾಖೆ ರದ್ದುಗೊಳಿಸಿರುವುದನ್ನು ಡಿವೈಎಫ್ಐ ರಾಜ್ಯ ಸಮಿತಿ ತೀವ್ರವಾಗಿ ವಿರೋಧಿಸುತ್ತದೆ” ಎಂದಿದ್ದಾರೆ.

“ಜನರಲ್ಲಿರುವ ಮೂಢನಂಬಿಕೆಗಳ ಅಪಾಯಗಳ ಕುರಿತು ಜಾಗೃತಿಗಾಗಿ, ನಿರಂತರ ಪವಾಡ ರಹಸ್ಯ ಬಯಲಿನಂತಹ ಕಾರ್ಯಕ್ರಮ ಮೂಲಕ ಜನರಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುತ್ತಿದ್ದರು. ಮುಂದಿನ ದಿನಮಾನಗಳಲ್ಲಿ ಅವರ ಜೀವಕ್ಕೆ ಅಪಾಯ ತಂದೊಡ್ಡುವ ಅನಾಹುತಗಳೇನಾದರೂ ಸಂಭವಿಸಿದರೆ ಅದಕ್ಕೆ ಪೊಲೀಸ್ ಇಲಾಖೆ ಮತ್ತು ಸರ್ಕಾರವೇ ನೇರ ಹೊಣೆ” ಎಚ್ಚರಿಸಿದ್ದಾರೆ.

ರಾಜಿರಹಿತ ಹೋರಾಟ:

“ಮೂಢನಂಬಿಕೆ ಹೆಸರಲ್ಲಿ ಅನ್ಯಾಯ ಎಸಗುತ್ತಿದ್ದ ಕಪಟ ಜೋತಿಷಿಗಳ ವಿರುದ್ಧ ರಾಜಿರಹಿತ ಹೋರಾಟಗಳನ್ನು ದೇಶದುದ್ದಗಲಕ್ಕೂ ನರೇಂದ್ರ ನಾಯಕ್ ನಡೆಸುತ್ತಾ ಬಂದಿದ್ದಾರೆ. ಈ ರೀತಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಹಲವಾರು ಸಾಮಾಜಿಕ ಕಾರ್ಯಕರ್ತರನ್ನು ಬಲಪಂಥೀಯ ಸಂಘಟನೆಗಳಿಗೆ ಸೇರಿದ ಗುಂಪುಗಳು ಬಲಿ ಪಡೆದಿರುವ ಘಟನೆಗಳು ನಮ್ಮ ಕಣ್ಣ ಮುಂದಿದೆ” ಎಂದು ಮುನೀರ್ ಕಾಟಿಪಳ್ಳ ಆತಂಕ ವ್ಯಕ್ತಪಡಿಸಿದ್ದಾರೆ.

“ಪ್ರೊ ನರೇಂದ್ರ ನಾಯಕರ ಒಡನಾಡಿಗಳಾದ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಎಂ ಎಂ ಕಲಬುರ್ಗಿ, ಗೌರಿ ಲಂಕೇಶ್ ಹೀಗೆ ಹಲವಾರು ಸಾಮಾಜಿಕ ಕಾರ್ಯಕರ್ತರನ್ನು, ಹೋರಾಟಗಾರರನ್ನು ಗುಂಡಿಕ್ಕಿ ಕೊಲೆಗೈದ ಘಟನೆಗಳು ಇನ್ನೂ ಹಸಿಯಾಗಿರುವಾಗಲೇ ಪ್ರೊ ನರೇಂದ್ರ ನಾಯಕ್ ರಂತವರ ಹೆಸರು ಅಂತಹ ಕೊಲೆಗಡುಕರ ಹಿಟ್ ಲಿಸ್ಟ್‌ನಲ್ಲಿ ಇತ್ತೆಂದು ಗುಪ್ತಚರ ಇಲಾಖೆಗೆ ಮಾಹಿತಿ ಇದೆ.ಹೀಗಾಗಿ ನರೇಂದ್ರ ನಾಯಕ್ ಅವರಿಗೂ ಪೊಲೀಸ್ ಇಲಾಖೆ ಯಾವುದೇ ಷರತ್ತುಗಳಿಲ್ಲದೆ ಅಂಗರಕ್ಷಕ ಭದ್ರತೆ ಒದಗಿಸಿಕೊಟ್ಟಿತ್ತು. ಆದರೆ, ಭದ್ರತಾ ಅಂಗರಕ್ಷಕ ಇರುವ ಸಂದರ್ಭದಲ್ಲೇ ನರೇಂದ್ರ ನಾಯಕರ ಮೇಲೆ ಹಲವು ಬಾರಿ ಹಲ್ಲೆ ನಡೆಸುವ, ಜೀವಕ್ಕೆ ಹಾನಿ ಮಾಡುವ ಪ್ರಯತ್ನಗಳು ನಡೆದಿರುವ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ| ಶ್ರೀರಾಮ ‘ಅಸ್ಪೃಶ್ಯ’ರ ಮೈಮೇಲೆ ಹಚ್ಚೆಯಾದ- ಸ್ಥಾವರ ಇಳಿದು ಜಂಗಮನಾದ

ಅನುಮಾನಗಳಿಗೆ ಎಡೆ:

“ಇತ್ತೀಚೆಗೆ 2016 ರಲ್ಲಿ ಕೊಲೆಯಾದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾರನ್ನು ಬಲಿ ಪಡೆದ ಸೂತ್ರದಾರರ ಬಂಧನಗೊಳಿಸಲು ನಡೆಸಿದ ಹೋರಾಟದ ನೇತೃತ್ವ ವಹಿಸಿದ ಪ್ರೊ ನರೇಂದ್ರ ನಾಯಕ್ ಅವರಿಗೆ ನಿರಂತರ ಜೀವ ಬೆದರಿಕೆ ಒಡ್ಡುವ, ವಾಹನಗಳಿಗೆ ಹಾನಿ ಮಾಡುವಂತಹ ಪ್ರಯತ್ನಗಳು ನಡೆದಿವೆ. ಸದ್ಯ ನ್ಯಾಯಾಲಯದಲ್ಲಿ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಈಗಾಗಲೇ ಆರೋಪಿಗಳು ಸಾಕ್ಷಿದಾರರನ್ನು ಬೆದರಿಸುವ, ದಿಕ್ಕು ತಪ್ಪಿಸುವ ಪ್ರಯತ್ನಗಳು ಜರಗುತ್ತಿರುವ ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ನರೇಂದ್ರ ನಾಯಕ್ ಅವರಿಗೆ ಒದಗಿಸಿದ್ದ ಅಂಗರಕ್ಷಕ ಭದ್ರತೆಯನ್ನು ಏಕಾಏಕಿ ರದ್ದುಗೊಳಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ” ಎಂದು ಹೇಳಿದ್ದಾರೆ.

ನರೇಂದ್ರ ನಾಯಕರಿಗೆ ಅಂಗರಕ್ಷಕ ಭದ್ರತೆಯನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸದೆ ಈ ಹಿಂದಿನಂತೆ ಯಾವುದೇ ಷರತ್ತುಗಳಿಲ್ಲದಂತೆ ಭದ್ರತೆಯನ್ನು ಒದಗಿಸಿಕೊಡಬೇಕು” ಎಂದು ಆಗ್ರಹಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಗೋಗಡಿಹಾಳ ಗ್ರಾಮದ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರ ನೇಮಕಕ್ಕೆ ಒತ್ತಾಯ

ಗೋಗಡಿಹಾಳ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಸರ್ಕಾರಿ...

ಸರ್ಕಾರಿ ಶಿಕ್ಷಕರ ಗೈರು ಹಾಜರಿ ತಡೆಗೆ ‘ಜಿಪಿಎಸ್‌’ ಕ್ರಮ

ಕಲಬುರಗಿ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿಯ ವ್ಯಾಪ್ತಿಯಲ್ಲಿರುವ ಎಲ್ಲ ಸರ್ಕಾರಿ...

ಪುರುಷ ನೌಕರರಿಗೂ ಶಿಶುಪಾಲನಾ ರಜೆ; ಸರ್ಕಾರ ಆದೇಶ

ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರಿಗೆ ನೀಡಲಾಗುತ್ತಿದ್ದ ಶಿಶುಪಾಲನಾ ರಜೆಯನ್ನು ಒಂಟಿ ಪೋಷಕರಾಗಿರುವ ಪುರುಷ...

ಚೀನಾವನ್ನು ಬುದ್ಧಿವಂತಿಕೆಯಿಂದ ಎದುರಿಸಬೇಕು; ಬಡಾಯಿ ಕೊಚ್ಚಿಕೊಳ್ಳುವುದರಿಂದಲ್ಲ: ಪ್ರಧಾನಿಗೆ ಖರ್ಗೆ ತರಾಟೆ

ಉತ್ತರಾಖಂಡದ ಗಡಿಯಂತ್ರಣ ರೇಖೆಯ ಉದ್ದಕ್ಕೂ ಚೀನಾದ ಹೊಸ ಮಿಲಿಟರಿ ನಿರ್ಮಾಣಗಳ ವರದಿಗಳ...