ಚಿಕ್ಕಮಗಳೂರು | ಕಾರು-ಟಿಟಿ ವಾಹನ ಮುಖಾಮುಖಿ ಡಿಕ್ಕಿ; ಮಗು ಸೇರಿ ಇಬ್ಬರ ದುರ್ಮರಣ

Date:

ಕಾರು ಮತ್ತು ಟಿಟಿ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳುರು ಜಿಲ್ಲೆ ಕಡೂರು ತಾಲೂಕಿನ ಮತಿಘಟ್ಟ ಕ್ರಾಸ್ ಬಳಿ ‘ಬೆಂಗಳೂರು–ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206’ರಲ್ಲಿ ನಡೆದಿದೆ.

ಕಾರಿನಲ್ಲಿದ್ದ ಗಿರಿಧರ್ (46) ಮಯಂಕ್ (3) ಮೃತ ರ್ದುದೈವಿಗಳು. ಸಂಬಂಧಿಕರ ಮದುವೆ ನಿಮಿತ್ತ ಗಿರಿಧರ್ ಕುಟುಂಬ ಹೊನ್ನಾವರದಿಂದ ತೆರಳುತ್ತಿತ್ತು. ಎದುರಿನಿಂದ ಕೇರಳದಿಂದ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬರುತ್ತಿದ್ದ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಟಿಟಿ ಪಲ್ಟಿಯಾಗಿದೆ.

ಕಾರಿನಲ್ಲಿದ್ದ ಮಗು ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟಿಟಿ ವಾಹನದಲ್ಲಿದ್ದ ಕೇರಳ ಮೂಲದ 7 ಮಂದಿ ಪ್ರವಾಸಿಗರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನ ಶಿವಮೊಗ್ಗ ಆಸ್ಪತ್ರೆಗೆ ದಾಖಲೆ ಮಾಡಲಾಗಿದ್ದು, ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಮತದಾನಕ್ಕೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ; ಸ್ಥಳದಲ್ಲೇ ಸಾವು

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಕಾಡಂಚಿನ ಗ್ರಾಮದಲ್ಲಿ ಶಾಸಕ ದರ್ಶನ್ ಗ್ರಾಮ ವಾಸ್ತವ್ಯ

ನಂಜನಗೂಡು ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್‌ ಗ್ರಾಮ ವಾಸ್ತವ್ಯ...

ಕಲಬುರಗಿ | ಹೈ-ಕ ಭಾಗದ ಸಾಹಿತಿಗಳೆಂಬ ಹಣೆಪಟ್ಟಿ ಏಕೆ: ಡಾ. ಚಿದಾನಂದ ಸಾಲಿ

ದಲಿತ ಸಾಹಿತಿಗಳು ಅಂತ ಇರುವ ಹಾಗೆ, ಬ್ರಾಹ್ಮಣ ಕತೆಗಾರರು ಎಂಬ ಹೆಸರು...

ಮದ್ಯದಂಗಡಿ ಬೇಡ – ನೀರು, ಆರೋಗ್ಯ, ಆಹಾರ ಕೊಡಿ; ಸ್ಲಂ ಜನಾಂದೋಲನ ಒತ್ತಾಯ

ನಾಗರೀಕ ಸಮಾಜಕ್ಕೆ ಬೇಕಿರುವುದು ನೀರು, ನೈರ್ಮಲ್ಯ, ಆರೋಗ್ಯ ಮತ್ತು ಆಹಾರವೇ ಹೊರತು,...

ರಾಯಚೂರು | 9 ವರ್ಷಗಳಿಂದ ಅಂಗನವಾಡಿ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ

ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ರೋಡಲ ಬಂಡಾ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ...