ಚಾಮರಾಜನಗರ | ವಿಚಿತ್ರ ಘಟನೆ; ಎರಡೆರಡು ಬಾರಿ ಮೃತಪಟ್ಟ ಚುನಾವಣಾ ಸಿಬ್ಬಂದಿ!

Date:

  • ಹನೂರಿನಲ್ಲಿ ಚುನಾವಣಾ ತರಬೇತಿಯಲ್ಲಿ ನಿರತರಾಗಿದ್ದ ಜಗದೀಶ್‌
  • ಮರಣೋತ್ತರ ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ ಉಸಿರಾಡಿದ್ದ ಮೃತ ವ್ಯಕ್ತಿ!

ಚುನಾವಣಾ ಕರ್ತವ್ಯಕ್ಕಾಗಿ ತರಬೇತಿ ನಿರತರಾಗಿದ್ದ ಸಿಬ್ಬಂದಿಯೊಬ್ಬರು ಎರಡೆರಡು ಬಾರಿ ಮೃತಪಟ್ಟ ವಿಚಿತ್ರ ಘಟನೆಯೊಂದು ಚಾಮರಾಜನಗರದಲ್ಲಿ ವರದಿಯಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಹನೂರಿನ ವಿವೇಕಾನಂದ ಶಾಲೆಯಲ್ಲಿ ಜಗದೀಶ್‌
ಎಂಬವರು ತರಬೇತಿಯಲ್ಲಿ ನಿರತರಾಗಿದ್ದರು. ಈ ವೇಳೆ ಎದೆನೋವಿನಿಂದ ಕುಸಿದು ಬಿದ್ದಿದ್ದರು.

ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿದ್ದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದರು. ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ್ದ ಜಗದೀಶ್ ಕುಟುಂಬಸ್ಥರ ಆಕ್ರಂದನವೂ ಮುಗಿಲು ಮುಟ್ಟಿತ್ತು.

ಆದರೆ, ಈ ನಡುವೆ ಮರಣೋತ್ತರ ಪರೀಕ್ಷೆಗೆಂದು ತಯಾರಿ ನಡೆಸುತ್ತಿರುವಾಗ ಜಗದೀಶ್ ಕೈ ಕಾಲು ಆಡಿಸಿದ್ದು, ಸ್ಥಳದಲ್ಲಿದ್ದವರ ಗಮನಕ್ಕೆ ಬಂದಿದೆ. ಕೂಡಲೇ ವೈದ್ಯರು ಮತ್ತೊಮ್ಮೆ ಪರೀಕ್ಷಿಸಿದಾಗ ಆತ ಜೀವಂತವಾಗಿರುವುದು ಗೊತ್ತಾಗಿದೆ.

ವೈದ್ಯರು ಪರೀಕ್ಷೆ ನಡೆಸಿದಾಗ ಜಗದೀಶ್‌ ಉಸಿರಾಡುತ್ತಿರುವುದನ್ನೂ ಗಮನಿಸಿದ್ದಾರೆ. ಹೃದಯದ ಬಡಿತ ನಿಂತೇ ಹೋಯಿತು ಎಂದುಕೊಂಡವರಿಗೆ ಅಚ್ಚರಿಯಾಗಿ ತಕ್ಷಣಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್‌ ಮೂಲಕ ಜಗದೀಶ್‌ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿತ್ತು.

ಆದರೆ, ಆಸ್ಪತ್ರೆಗೆ ತಲುಪಿದ ವೇಳೆ ಮತ್ತೊಮ್ಮೆ ಜಗದೀಶ್‌ ಅವರನ್ನು ಪರೀಕ್ಷಿಸಿದಾಗ ಮತ್ತೆ ಮೃತಪಟ್ಟಿರುವುದು ಗೊತ್ತಾಗಿದೆ. ಬದುಕಿದ್ದಾರೆಂದು ಖುಷಿಯಲ್ಲಿದ್ದ ಕುಟುಂಬಸ್ಥರಿಗೆ ಆಘಾತ ಉಂಟಾಗಿದೆ.

ಈ ಸುದ್ದಿ ಓದಿದ್ದೀರಾ? ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಣೆ; ಮರಣೋತ್ತರ ಪರೀಕ್ಷೆಗೆ ಹೊತ್ತೊಯ್ಯುವಾಗ ಕೈ ಕಾಲು ಆಡಿಸಿದ ವ್ಯಕ್ತಿ

ಬದುಕಿದ್ದವರನ್ನು ಮೃತಪಟ್ಟಿರುವುದಾಗಿ ಘೋಷಿಸಿದ್ದ ಹನೂರು ಸಮೀಪದ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಜಗದೀಶ್ ಹನೂರಿನ ಖಜಾನೆ ಇಲಾಖೆಯಲ್ಲಿ ಡಿ ಗ್ರೂಪ್‌ ನೌಕರನಾಗಿ, ಸೇವೆಯಲ್ಲಿದ್ದರು. ವಿಧಾನಸಭಾ ಚುನಾವಣೆಯ ನಿಮಿತ್ತ ಅವರನ್ನು ಕರ್ತವ್ಯಕ್ಕೆ ತೊಡಗಿಸಿಕೊಳ್ಳಲಾಗಿತ್ತು. ಅದಕ್ಕಾಗಿ ಹನೂರಿನ ವಿವೇಕಾನಂದ ಶಾಲೆಯಲ್ಲಿ ಚುನಾವಣಾ ತರಬೇತಿ ನೀಡಲಾಗುತ್ತಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೀತಾಫಲ ಹಣ್ಣಿಗೆ ಭಾರೀ ಬೇಡಿಕೆ; ಬೇಕಿದೆ ಮಾರುಕಟ್ಟೆ ಸೌಲಭ್ಯ

ಸೀತಾಫಲ ಹಣ್ಣು ತಿನ್ನಲು ತುಂಬಾ ರುಚಿಕರ ಹಾಗೂ ಅಷ್ಟೇ ಸ್ವಾದಿಷ್ಟ, ರೋಗ...

ಕಾವೇರಿ ವಿವಾದ | ತಮಿಳು ನಟ ಸಿದ್ಧಾರ್ಥ್‌ ಕ್ಷಮೆ ಕೇಳಿದ ನಟ ಶಿವರಾಜ್‌ಕುಮಾರ್

ತಮಿಳು ನಟ ಸಿದ್ಧಾರ್ಥ್‌ ಅವರ ಸುದ್ದಿಗೋಷ್ಠಿಗೆ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ...

ಕರ್ನಾಟಕ ಬಂದ್ | ದಾವಣಗೆರೆ: ತಮಿಳುನಾಡಿ ನೀರು ಹರಿಸದಂತೆ ಒತ್ತಾಯಿಸಿ ಕರವೇ ಪ್ರತಿಭಟನೆ

ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವ ರಾಜ್ಯ ಸರ್ಕಾರ ಮತ್ತು ಕಾವೇರಿ ನಿರ್ವಹಣಾ...

ಹಾವೇರಿ | ಕಾವೇರಿ ನೀರು ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಲಿ

ರಾಜ್ಯ ಸರ್ಕಾರ ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯ ವಿವಿಧ ಸಂಘಟನೆಗಳ...